Skip to main content

Blog number 1458. ದಿಡೀರ್ ಆನ್ ಲೈನ್ ಸಾಲ... ಜಂಗ್ಲಿ ರಮ್ಮಿಯಂತ ಆನ್ ಲೈನ್ ಜುಗಾರಿ... ಜೀವ ಕಳೆದುಕೊಳ್ಳುವ ಮುಗ್ದ ಯುವ ಜನರು ... ಲೋನ್ ಶಾರ್ಕ್ ಗಳ ಹಣದ ದಾಹ.

#ದೇಶದ_ಮುಗ್ದ_ಯುವಜನರ_ಗುರಿ_ಮಾಡಿ_ಅವರ_ಜೀವದ_ಜೊತೆ_ಚೆಲ್ಲಾಟ_ಆಡುತ್ತಿರುವ

#ಇನ್_ಸ್ಟಂಟ್_ಆನ್_ಲೈನ್_ಲೋನ್_ಮತ್ತು_ಜಂಗ್ಲಿರಮ್ಮಿಯಂತ_ಆನ್_ಲೈನ್_ಗೇಮ್

#ಲೋನ್_ಶಾರ್ಕ್_ಅಂದರೆ_ಯಾರು ?

#ದೇಶದ_ಕಾನೂನು_ಇವರಿಗಾಗಿ_ತಿದ್ದುಪಡಿ_ಮಾಡಲಾಗಿದೆ

#ಪ್ರಾರಂಭದಲ್ಲಿ_ಚೀನಾ_ದೇಶದ_ಲೋನ್_ಶಾರ್ಕರ್_ಕಂಪನಿಗಳು_ಈಗ_ದೇಶದ_ಅಂಡರ್_ವರ್ಲ್ಡ್_ಹಿಡಿತದಲ್ಲಿ.

#ಆತ್ಮಹತ್ಯೆಗೆ_ಶರಣಾಗುತ್ತಿರುವ_ಮುಗ್ದರು.

#ಮಾದಕ_ಡ್ರಗ್_ಗಿಂತ_ಅಪಾಯಕಾರಿ_ಇನ್_ಸ್ಟಂಟ್_ಆ್ಯಪ್

#ಪೋಷಕರೆ_ಜಾಗೃತರಾಗಿ


   ನಾನು ಈ ಹಿಂದೆ ಒಬ್ಬರು ಅತ್ಯುತ್ತಮ ಗ್ಲಾಸ್‌ ಮತ್ತು ACP ಕೆಲಸದ ಯುವಕನ ಬಗ್ಗೆ ತುಂಬಾ ಸಂತೋಷದಿಂದ ಅವನ ಕೆಲಸ ಮೆಚ್ಚಿ ಬರೆದಿದ್ದೆ ಇದರಿಂದ ಉದಯೋನ್ಮುಖ ಯುವ ಕೆಲಸಗಾರನಿಗೆ ಹೆಚ್ಚು ಪ್ರೊಜೆಕ್ಷನ್ ಸಿಗಲಿ ಎನ್ನುವ ಸದುದ್ದೇಶದಿ೦ದ ನಂತರ ನಮ್ಮ ಕಲ್ಯಾಣ ಮಂಟಪದಲ್ಲಿ ಹೆಚ್ಚುವರಿ ಕೆಲಸ ನೀಡಿದೆ ಆ ಕೆಲಸಕ್ಕಾಗಿ ಬೇಕಾಗುವ ಸಾಮಗ್ರಿಗಳ ಪಟ್ಟಿ ನೀಡಿ ಶಿವಮೊಗ್ಗದಿಂದ ತರಬೇಕು ಹಣ ಬೇಕು ಅಂದಾಗ ಅದಕ್ಕೆ ಬೇಕಾದ ಹಣ ನೀಡಿದೆ ಇವತ್ತಿಗೂ ಆತ ನಾಪತ್ತೆ ನಂತರ ಗೊತ್ತಾಗಿದ್ದು ಈತ ಜಂಗ್ಲಿ ರಮ್ಮಿ ಪ್ಲೇಯರ್ ಅಂತ ಇವನ ತಂದೆ ನಮ್ಮ ದೇವಾಲಯದ ರಥಶಿಲ್ಪಿ ಅವರು ಸಜ್ಜನರು ನಂತರ ಬೇರೆಯವರಿಂದ ಕೆಲಸ ಮಾಡಿಸಿದೆ.
  ಮಲೆನಾಡಿನ ಯೋದ ಅಸ್ಸಾಂನಲ್ಲಿ ವಿಪರೀತ ಸಾಲ ಮಾಡಿ ಅದನ್ನು ತೀರಿಸಲಾಗದೆ ಮೆಷಿನ್ ಗನ್ನಿನಿಂದ ಆತ್ಮಹತ್ಯೆ ಸುದ್ದಿ, ನಮ್ಮ ಊರಿನ ಸಂಪನ್ನ ಯುವಕರು ಅನೇಕರು ಆತ್ಮಹತ್ಯೆಗಳ ಹಿಂದೆ ಇಂತಹ ಜಂಗ್ಲಿ ರಮ್ಮಿ, ಐಪಿಲ್ ಬೆಟ್ಟಿಂಗ್ ಗಳ ಕಥೆ ಇದೆ ಅದಕ್ಕೆ ಸುಲಭದಲ್ಲಿ ಇನ್ಸ್ಟಂಟ್ ಆನ್ ಲೈನ್ ಲೋನ್ ನೀಡುವ ಲೋನ್ ಶಾರ್ಕ್ ಗಳ ಕರಾಳ ನೆರಳಿದೆ.
  ಲೋನ್ ಶಾರ್ಕ್ ಗಳು ಎಂದರೆ ಮೀಟರ್ ಬಡ್ಡಿ ಮೀರಿಸುವ   ಸುಲಭವಾಗಿ ಸಾಲ ನೀಡಿ ನೀಡಿದ ಸಾಲದ ನೂರಾರು ಪಟ್ಟು ವಸೂಲು ಮಾಡುವ ಲೋನ್ ಆಪ್ ಗಳ ಕಂಪನಿಗಳು.
  ಮೊದಮೊದಲು ಚೀನಾ ದೇಶದ ಲೋನ್ ಆಫ್ ಗಳು ಸುಲಭವಾಗಿ ಹಣ ಮಾಡುವ ಈ ಕೆಲಸ ಮಾಡಿದ್ದು ನೋಡಿ ಈಗ ನಮ್ಮ ದೇಶದಲ್ಲಿನ ನೂರಾರು ಭೂಗತ ಜಗತ್ತಿನವರು ಇದನ್ನು ಮುನ್ನಡೆಸುತ್ತಿದ್ದಾರೆ ಇವರಿಗಾಗಿ RBI ಅನುಮತಿ ಇದೆ, ಇವರದ್ದೇ ಆನ್ ಲೈನ್ ಗ್ಯಾಂಬ್ಲಿಂಗ್ ಕಂಪನಿಗಳು ಇವೆ ಇದಕ್ಕೆಲ್ಲ ಕೇಂದ್ರ ಸರ್ಕಾರ ಸ್ಕಿಲ್ ಗೇಮ್ ಹೆಸರಲ್ಲಿ ಅನುಮತಿ ನೀಡಿದೆ.
  ವೃತ್ತ ಪತ್ರಿಕೆ, ದೂರದರ್ಶನ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ನಮ್ಮ ನೆಚ್ಚಿನ ಚಲನಚಿತ್ರ ತಾರೆಯರು, ಕ್ರೀಡಾಪಟುಗಳು ಈ ಕರಾಳ ದಂದೆ ಪ್ರೋತ್ಸಾಹಿಸುವ ರೂಪದರ್ಶಿಗಳಾಗಿದ್ದಾರೆ.
  ಇಂತಹ ನೀಚ ಕಂಪನಿಗಳ ಗುರಿ ಸ್ಮಾರ್ಟ್ ಫೋನ್ ಹೊಂದಿರುವ ಮುಗ್ದರು ಅಮಾಯಕರು ಆದ ದೇಶದ ಯುವ ಜನರು .
    ಆಪ್ ಡೌನ್ ಲೋಡ್ ಮಾಡಿ KYC ನೀಡಿದ ಕ್ಷಣ ಮಾತ್ರದಲ್ಲಿ ನಿಮ್ಮ ಅಕೌಂಟ್ ಗೆ ಕನಿಷ್ಟ 2500 ಹಣ ಹಾಕುವ ಕಂಪನಿಗೆ 2 ದಿನದಲ್ಲಿ 3000 ವಾಪಾಸು ಮಾಡಬೇಕು ಎಂಬ ಕರಾರಿಗೆ ಒಪ್ಪಿದ ಮುಗ್ದ ಹಣ ಪಡೆದು ಜಂಗ್ಲಿ ರಮ್ಮಿನೋ ಅಥವ  ರೋಲೆಟ್ ಮುಂತಾದ ಜುಗಾರಿ ಆಡಿ ಹಣ ಗಳಿಸುತ್ತಾನೋ,ಕಳೆಯುತ್ತಾನೋ ಗೊತ್ತಿಲ್ಲ ಆದರೆ ಸಾಲ ಮರುಪಾವತಿ ಮಾಡಿ ಸಾಲ ತೀರಿಸಿದ ನೆಮ್ಮದಿ ಎರೆಡು ದಿನದಲ್ಲೇ ಕಳೆದು ಹೋಗುವಂತೆ ಲೋನ್ ಶಾರ್ಕ್ ಪುನಃ 3000 ಪಾವತಿ ಮಾಡಲು ಒತ್ತಾಯಿಸುತ್ತಾನೆ.
  ಪ್ರತಿ ನಿತ್ಯ ಪೋನ್ ಟಾರ್ಚರ್ ಹೀಗೆ ಪ್ರತಿ ಎರೆಡು ದಿನಕ್ಕೆ ಡಬಲ್ ಅಗುವ 2500 ರೂಪಾಯಿ ಒಂದು ತಿಂಗಳಲ್ಲಿ 35 ರಿಂದ 40 ಸಾವಿರ ಬಾಕಿದಾರನ್ನಾಗಿಸುತ್ತದೆ, ನಂತರ KYC ಮೂಲಕ ಪಡೆದ ಸಂಪರ್ಕದಿಂದ ಸಾಲ ಪಡೆದವನ ಪೋಷಕರ - ಮಿತ್ರರ - ನೆಂಟರ ಪೋನ್ ನಂಬರ್ ಗೂ ಅಶ್ಲೀಲ ಮೆಸ್ಸೇಜ್ ಬೆದರಿಕೆಗಳನ್ನು ನಿರಂತರ ಕಳಿಸುತ್ತಾರೆ, ಸಾಲ ವಸೂಲಾತಿಗಾಗಿ ಮನೆ ಬಾಗಿಲಿಗೆ ಬಾಡಿಗೆ ವಸೂಲಿದಾರರನ್ನು ಕಳಿಸಿ ಅಕ್ಕ ಪಕ್ಕದವರಿಗೆ ಪ್ರಚಾರ ಮಾಡುತ್ತಾರೆ ಈ ರೀತಿ ಇವರ ಕಾನೂನು ರೀತ್ಯಾ ಕಾನೂನು ಬಾಹಿರ ಚಟುವಟಿಕೆಗಳಿಂದ ಮರ್ಯಾದೆಗೆ ಅಂಜಿ ಅವರು ಕೇಳಿದಷ್ಟು ಹಣ ಪಾವತಿ ಮಾಡುವವರಿದ್ದಾರೆ.
   ಗಾಭರಿಯಿಂದ ಮುಗ್ದ ಯುವಕರು ಪೋಷಕರಿಗೆ ಹೇಳಿಕೊಳ್ಳಲಾಗದೆ, ಮರ್ಯಾದೆ ಕಳೆದುಕೊಂಡೆ ಎಂಬ ಹತಾಷೆಯಿಂದ ಆತ್ಮಹತ್ಯೆ ನಿರ್ದಾರಕ್ಕೆ ದುಮುಕುತ್ತಿದ್ದಾರೆ.
   ಎಸ್.ಎಂ ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗ ಪ್ಲೇವಿನ್, ಸಿಂಗಲ್ ನಂಬರ್ ಲಾಟರಿಗೆ ಅವಕಾಶ ನೀಡಿದ್ದಾಗ ಸಿದ್ದಗಂಗಾ ಸ್ವಾಮಿಗಳಂತವರು ಅದನ್ನು ವಿರೋದಿಸುವ ನಾಯಕತ್ವದಿಂದ ಆ ಅನಿಷ್ಟ ಪದ್ಧತಿ ರದ್ದಾಗಿತ್ತು ಈಗ ಇದನ್ನೆಲ್ಲ ವಿರೋದಿಸುವ ನೈತಿಕತೆ ಇರುವವರು ಯಾರೂ ಇಲ್ಲ.
  ಪೋಷಕರುಗಳು ಮಕ್ಕಳು ಕೇಳಿದ ಸೆಲ್ ಫೋನ್ ಕೊಡಿಸುತ್ತಿದ್ದಾರೆ ಅದನ್ನು ಬಳಸುವ ಈಗಿನ ಯುವ ಜನಾ೦ಗವನ್ನು ಗುರಿಯಾಗಿಸಿಕೊಂಡು ಹಣ ಮಾಡುವ ಆನ್ ಲೈನ್ ಗೇಮ್ ಎಂಬ ಜುಗಾರಿ ಮತ್ತು ಅದಕ್ಕೆ ಬೇಕಾದ ದಿಡೀರ್ ಸಾಲ ನೀಡುವ ಆನ್ ಲೈನ್ ಲೋನ್ ಎಂಬ ಇನ್ ಸ್ಟಂಟ್ ಸಾಲ ನೀಡುವ ಲೋನ್ ಶಾರ್ಕ್ ಗಳು ಇನ್ನೆಷ್ಟು ಮುಗ್ದರ ಜೀವ ಪಡೆಯುತ್ತೊ ಗೊತ್ತಿಲ್ಲ.
   ಮಾದಕ ಡ್ರಗ್ ಗಿಂತ ಹೆಚ್ಚು ಅಪಾಯಕಾರಿ ಈ ಲೋನ್ ಶಾರ್ಕ್ ನಿಮ್ಮ ಮಕ್ಕಳುಗಳಿಗೆ ಈಗಲೇ ಎಚ್ಚರಿಸಿ ಇಲ್ಲದಿದ್ದರೆ ಅವರ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ನೆನಪಿರಲಿ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ...