Skip to main content

Posts

Showing posts with the label R.T.Vittalmurthy from sagar his new book IDOTHARA ATMACHARITRE released

Blog number 1081. ಸಾಗರದ ಆರ್ ಟಿ . ವಿಠಲಮೂರ್ತಿ ಈಗ ರಾಜ್ಯ ಮಟ್ಟದ ಪತ್ರಕರ್ತರ ಸಾಲಿನಲ್ಲಿ ಅಗ್ರಗಣ್ಯರು ಅವರ ಇದೊಂಥರಾ ಆತ್ಮಚರಿತ್ರೆ ಪುಸ್ತಕ ಬಿಡುಗಡೆ ಆಗಿದೆ ಓದಿ

ಸಾಗರ ತಾಲ್ಲೂಕಿನ ಹೆಸರು ಪತ್ರಿಕೋದ್ಯಮದಲ್ಲಿ ಉತ್ತುಂಗಕ್ಕೆ ಏರಿಸಿದ ಆರ್.ಟಿ. ವಿಠಲ್ ಮೂತಿ೯#    ಆರ್.ಟಿ.ವಿ. ಸಾಗರದವರು ಇವರಣ್ಣ ಸಾಗರದ ಮುನ್ಸಿಪಲ್ ಹೈಸ್ಕೂಲಲ್ಲಿ ನನಗೆ ಕ್ಲಾಸ್ ಮೇಟ್, ಆರ್.ಟಿ.ವಿ.ಜೂನಿಯರ್  ನಮಗೆಲ್ಲರಿಗೂ ಹಾಲಿ ಮOತ್ರಿ ಶ್ರೀನಿವಾಸ ಪೂಜಾರ್ ರ ಈಗಿನ ವಿಶೇಷ ಕತ೯ವ್ಯಧಿಕಾರಿ ಆಗಿರುವ ಕೆ.ದಮ೯ಪ್ಪ ಸಾಹೇಬರು ಆಗ ಗುರುಗಳು, ಆರ್.ಟಿ.ವಿ ರವಿ ಬೆಳೆಗೆರೆ ಜೊತೆ ಸೇರಿ ಹಾಯ್ ಬೆಂಗಳೂರು ವಾರ ಪತ್ರಿಕೆಯಲ್ಲಿ ಬರೆಯಲು ಶುರು ಮಾಡಿದಾಗ ನಮಗೆಲ್ಲ ಅವರು ಸ್ಟಾರ್ ಪತ್ರಕತ೯ರು.    ನಾನು ಹೊಸದಾಗಿ ಜಿಲ್ಲಾ ಪಂಚಾಯತ್ ಸದಸ್ಯನಾಗಿ 1995 ರಲ್ಲಿ ಆಯ್ಕೆ ಆದಾಗ ಕಾಗೋಡು ತಿಮ್ಮಪ್ಪರ ಜೊತೆ ಹಳ್ಳಿ ತಿರುಗಾಟದಲ್ಲಿ ಹೋಗುವಾಗ ಹಳ್ಳಿಯ ರೈತರು ಕೃಷಿ ಇಲಾಖೆಯ ಭೂ ಸಂರಕ್ಷಣಾ ಇಲಾಖೆಯ ಬಗ್ಗೆ ದೂರುತ್ತಿದ್ದರು ಆಗ ಕಾಗೋಡು ನನಗೆ ಇದನ್ನೆಲ್ಲ ಪರಿಶೀಲನೆ ಮಾಡಲು ತಿಳಿಸಿದರು, ಹುಮ್ಮಸ್ಸಿನಿಂದ ಪರಿಶೀಲಿಸಿದಾಗ ಸಾಗರ ತಾಲ್ಲೂಕಿನಲ್ಲಿ ಕೋಟ್ಯಾ೦ತರ ರೂಪಾಯಿ ಅಪರಾ ತಪರಾ ಆಗಿದ್ದು ಬಯಲಾಯಿತು.   ತನಿಖೆ ಮಾಡಿದ ನಮ್ಮ ಕೈಕಟ್ಟಿ ಹಾಕುವ ಕೆಲಸ ಪ್ರಾರಂಭ ಆಯಿತು ಆಗ ಸಾಗರದ ಉತ್ಸಾಹಿ ಯುವಕ (ಈಗ ಕೆ.ಪಿ.ಸಿ.ಸಿ. ಸದಸ್ಯ) ತಾಳಗುಪ್ಪದ ಸಲೀo ವೈಕುಂಟ ರಾಜುರವರ ವಾರಪತ್ರಿಕೆಯಲ್ಲಿ ಆಗ ವರದಿಗಾರರಾಗಿದ್ದ ವಿಠಲ ಮೂತಿ೯ಯವರನ್ನ ಕರೆತಂದರು, ಸ್ಥಳ ಪರಿಶೀಲಿಸಿ ನಮ್ಮ ಆರೋಪದ ಸತ್ಯಾಸತ್ಯತೆ ತಿಳಿದ ಆರ್.ಟಿ.ವಿ. ವಾರಪತ...