Skip to main content

Posts

Showing posts with the label My guest Hori Manja alias Mise Manja

Blog number 1938. ನನ್ನ ಹಳೇ ಶಿಷ್ಯ, ನನ್ನ ಕಥಾ ಸಂಕಲದ ಒಂದು ಕಥೆಯ ಕಥಾ ನಾಯಕ ಹೋರಿ ಮಂಜ ಆಲಿಯಾಸ್ ಮೀಸೆ ಮಂಜ ನನ್ನ ಅತಿಥಿ.

#ಹೋರಿ_ಮಂಜ_ಅಲಿಯಾಸ್_ಮೀಸೆ_ಮಂಜ. #ನನ್ನ_ಒಂದು_ಕಾಲದ_ಶಿಷ್ಯ #ಅಡೂರಿನ_ರಾಯರ_ಪರಮಾಪ್ತ_ಕೆಲಸಗಾರ #ನನ್ನ_ಕಥಾ_ಸಂಕಲನ_ಬಿಲಾಲಿ_ಬಿಲ್ಲಿ_ಪುಸ್ತಕದಲ್ಲಿ_ಇವನದ್ದೇ_ಒಂದು_ಕಥೆ_ಇದೆ #ಅದರ_ಶಿರ್ಷಿಕೆ_ಹೋರಿ_ಮಂಜ_ಮತ್ತು_ಗಾಡಿ_ಎತ್ತಿನ_ಬ್ರಾಂಡಿ. #ಆರು_ವರ್ಷದ_ನಂತರ_ನಿನ್ನೆ_ಬಂದಿದ್ದಾನೆ. #ಕಥಾ_ಸಂಕಲನ_ಓದಲು_ಕೊಟ್ಟಿದ್ದೇನೆ. https://youtu.be/BmjSQIo-BXE?feature=shared  ನಮ್ಮ ಆಫೀಸಿನ ಗಾಜಿನ ಬಾಗಿಲ ಹಿಂಭಾಗದಿಂದ ಒಂದು ಮುಖ ಗೋಚರಿಸಿತು ಇದು ನನ್ನ ಒಂದು ಕಾಲದ ಶಿಷ್ಯ ಹೋರಿ ಮಂಜ,ಒಳಗೆ ಬರಬಹುದಾ?  ಎಂದ ಬಾರೋ ಒಳಗೆ ಅಂದೆ.   ಇವನು ನನ್ನ ಕಥಾ ಸಂಕಲನ ಬಿಲಾಲಿ ಬಿಲ್ಲಿ ಅಭ್ಯಂಜನದ ಪುಸ್ತಕದಲ್ಲಿ ಒಂದು ನಿಜ ಕಥೆಯ ಕಥಾನಾಯಕ ಅದರ ಶಿರ್ಷಿಕೆ #ಹೋರಿಮಂಜ_ಮತ್ತು_ಗಾಡಿ_ಎತ್ತಿನ_ಬ್ರಾಂಡಿ.    2012ರಲ್ಲಿ ನಾನು ಮತ್ತು ನನ್ನ ಗೆಳೆಯರು ಸೇರಿ ಮಾಹಿತಿ ಹಕ್ಕು ಮತ್ತು ಲೋಕಾಯುಕ್ತ ಜನ ಜಾಗೃತಿಗಾಗಿ ಸಾಗರ ಮತ್ತು ಹೊಸನಗರ ತಾಲೂಕಿನಲ್ಲಿ ನಡೆಸಿದ #ಎತ್ತಿನ_ಗಾಡಿ_ಯಾತ್ರೆಯಲ್ಲಿ ಗಾಡಿ ಎತ್ತುಗಳಿಗೆ ಆಯಾಸ ಆಗ ಬಾರದೆಂದು ಸಂಜೆ ಗಾಡಿಯವರು ಕುಡಿಸುತ್ತಿದ್ದ ಬ್ರಾಂಡಿ ಮಂಜನೆ ಕುಡಿದು ಟೈಟಾಗಿ ಮಾಡಿದ ಎಡವಟ್ಟಿನ ಕಥೆ ಇದು.    ಈ ಕಥಾ ಸಂಕಲನ ಕಥಾನಾಯಕನಿಗೆ ಕೊಡಬೇಕಾಗಿತ್ತು. ಆದರೆ ಹೋರಿ ಮಂಜ ಸಿಗದೇ ಆರು ವರ್ಷ ಆಗಿತ್ತು ನಿನ್ನೆ ಈ ಪುಸ್ತಕವನ್ನು ಅವನಿಗೆ ಕೊಟ್ಟಿದ್ದೇ...