Skip to main content

Posts

Showing posts with the label From 75 years Shimoga freedom fighter GHANDHI BASAPPA family celebrating Gandhi Birthday

Blog number 970. ಆನಂದಪುರಂ ಇತಿಹಾಸ 81. ಮಹಾತ್ಮಾ ಗಾಂಧೀಜಿ 16 ಆಗಸ್ಟ್ 1927 ರಲ್ಲಿ ಆನಂದಪುರಂ ಮತ್ತು ಸಾಗರಕ್ಕೆ ಬೇಟಿ ನೀಡುತ್ತಾರೆ, ಗಾಂದೀಜಿಯವರ ಕಟ್ಟಾ ಅಭಿಮಾನಿ ಗಾಂಧೀ ಬಸಪ್ಪರ ಮತ್ತು ಆನಂದಪುರಂನ ಬದರಿನಾರಾಯಣರ ನಿಕಟ ಸಂಬಂದಗಳು, ಗಾಂಧೀ ಬಸಪ್ಪರ ಕುಟುಂಬ ಮುಂದುವರಿಸಿಕೊಂಡು ಬಂದ ಗಾಂದೀ ಜಯಂತಿ ಆಚರಣೆಗೆ ಈಗ 75 ನೇ ಅಮೃತ ಮಹೋತ್ಸವ.

#ಆನಂದಪುರಂ_ಇತಿಹಾಸ_ಸಂಖ್ಯೆ_81. #ಮಹಾತ್ಮಾ_ಗಾಂದೀಜಿ_ಆನಂದಪುರಂಗೆ_ಬಂದಿದ್ದು #ಶಿವಮೊಗ್ಗದ_ನ್ಯಾಷನಲ್_ಲಾಡ್ಜನಲ್ಲಿ_ಒಂದು_ವಾರ_ತಂಗಿದ್ದ_ಗಾಂದೀಜಿ_ದಂಪತಿ  #ಗಾಂಧೀಜಿ_ತತ್ವ_ಆದರ್ಶಕ್ಕೆ_ಪ್ರಭಾವಿತರಾದ_ಶಿವಮೊಗ್ಗದ_ಗಾಂಧೀ_ಬಸಪ್ಪನವರು. #ಆನಂದಪುರಂನ_ನಿಕಟ_ಸಂಪರ್ಕ_ಹೊಂದಿದ್ದ_ಗಾಂಧೀ_ಬಸಪ್ಪನವರು. #ಸ್ವಾತಂತ್ರ್ಯ_ನಂತರ_ನಿರಂತರವಾಗಿ_ಅವರು_ಆಚರಿಸಿದ_ಗಾಂಧೀ_ಜಯಂತಿ. #ತಮ್ಮ_ಸಾವಿನ_ನಂತರ_ತಿಥಿ_ಕಮ೯_ಮಾಡದಿದ್ದರೂ_ಗಾಂಧೀ_ಜಯಂತಿ_ತಪ್ಪಿಸಬಾರದೆ೦ಬ_ವಚನ_ಪಾಲಿಸುತ್ತಿರುವ_ಅವರ_ಕುಟುಂಬ. #ಈ_ಬಾರಿಯ_ಗಾಂಧೀ_ಬಸಪ್ಪರ_ಕುಟುಂಬ_ಆಚರಿಸುತ್ತಿರುವುದು_75ನೇ_ಗಾಂಧೀ_ಜಯಂತಿ #ದೇಶದಲ್ಲೇ_ಇದು_ಅಪರೂಪ_ಮತ್ತು_ಅಪೂರ್ವ    ಇವತ್ತು ಶಿವಮೊಗ್ಗದ ಪ್ರತಿಷ್ಟಿತ ಗಾಂಧೀ ಬಸಪ್ಪರ ಕುಟುಂಬದವರು ಆಚರಿಸುವ 75ನೇ ಗಾಂಧೀ ಜಯಂತಿಯ (ಮಹಾತ್ಮಾ ಗಾಂಧೀಜಿಯವರ 154 ನೇ ಜನ್ಮ ದಿನೋತ್ಸವ) ಆಹ್ವಾನ ಪತ್ರಿಕೆ ಕೊಡಲು ದಿವಂಗತ ಗಾಂಧೀ ಬಸಪ್ಪರ ಕಿರಿಯ ಪುತ್ರ ಗಾಂಧೀ ಸತೀಶ್ ಮತ್ತು ಅವರ ಅಳಿಯ ಡಾಕ್ಟರ್ ಶ್ರೀನಿವಾಸ್ ಬಂದಿದ್ದರು.     ಗಾಂದೀ ಬಸಪ್ಪನವರು (1913-1999) ಮಹಾತ್ಮಾ ಗಾಂಧೀಜಿಯವರ ತತ್ವ ಸಿದ್ದಾಂತದಿಂದ ಪ್ರೇರೇಪಿತರಾದ ಸ್ವಾತಂತ್ರ್ಯ ಹೋರಾಟಗಾರರು, ಸ್ವಾತಂತ್ರ್ಯ ಬಂದ ಸಂತೋಷದ ಮಧ್ಯದಲ್ಲೇ ಗಾಂಧೀ ಹತ್ಯೆಯ ದುಃಖದಲ್ಲಿ ಹೆಚ್ಚು ನೊಂದವರು ಶಿವಮೊಗ್ಗದ ಗಾಂಧೀ ಬಸಪ್ಪನವರು.   ಅವರ ಜೀವನ ಸಂಪೂರ್ಣ ಗಾಂಧೀಜಿ...