Blog number 2132. ಇವತ್ತಿನಿಂದ (21-ಮೇ- 2024) ಕೆಳದಿ ರಾಜರ ಇತಿಹಾಸದ ಕಂತುಗಳು ಡಿಜಿಟಲ್ ಮಾಧ್ಯಮದಲ್ಲಿ ಪ್ರಾರಂಭ, ಇತಿಹಾಸ ತಜ್ಞ ಡಾ.ಗುರುರಾಜ ಕಲ್ಲಾಪುರ ಕೆಳದಿ ಇತಿಹಾಸ ಹೇಳಲಿದ್ದಾರೆ
#ಬಹು_ನಿರೀಕ್ಷಿತ_ಕೆಳದಿ_ಇತಿಹಾಸ #ಖ್ಯಾತ_ಡಿಜಿಟಲ್_ಮಾಧ್ಯಮದಲ್ಲಿ_ಇವತ್ತಿನಿಂದ_ಪ್ರಾರಂಭ #ನಿವೃತ್ತ_ಕೆಳದಿ_ಮ್ಯೂಸಿಯಂ_ಕ್ಯೂರೇಟರ್_ಗುರುರಾಜಕಲ್ಲಾಪುರ_ಜೊತೆ #ಶ್ರೀಮತಿ_ನಂದಿನಿ_ಮತ್ತು_ಆಕರ್ಷಹರಳಕಟ್ಟೆ #ತಪ್ಪದೇ_ವೀಕ್ಷಿಸಿ_ಇದು_ಸಾಗರ_ತಾಲ್ಲೂಕಿನ_ವರದಾನದಿ_ದಂಡೆಯ_ಪ್ರಭುತ್ವದ_ಇತಿಹಾಸ #ಸಾಗರ_ಪಟ್ಟಣ_ಮಾರಿಕಾಂಬಾ_ಗದ್ದುಗೆ_ಗಣಪತಿ_ದೇವಸ್ಥಾನ_ನಿರ್ಮಿಸಿದ #ಕೆಳದಿ_ರಾಜ_ವೆಂಕಟಪ್ಪನಾಯಕರ_ಮನೆತನದ_ಕಥೆ. ನಿನ್ನೆಯ ತನಕ 50 ಕಂತುಗಳಲ್ಲಿ ನಮ್ಮ ಜಿಲ್ಲೆಯ ಶರಾವತಿ ನದಿ ದಂಡೆಯ ಸಾಗರ ತಾಲೂಕಿನ ಅರ್ದ ಭಾಗ ಸೇರಿದ ಗೇರುಸೊಪ್ಪೆ ಸಾಮ್ರಾಜ್ಯದ ಇತಿಹಾಸದ ಕಥೆ ಇತಿಹಾಸ ಸಂಶೋದಕ ಲೋಕರಾಜ ಜೈನರಿಂದ ಡಿಜಿಟಲ್ ಮಾಧ್ಯಮದಲ್ಲಿ ನೋಡಿದ್ದೀರಿ. ಗೇರುಸೊಪ್ಪೆ ರಾಣಿ ಚೆನ್ನಬೈರಾದೇವಿ ಇತಿಹಾಸದ ಇನ್ನೊಂದು ಭಾಗ ಮುಂದಿನ ದಿನಗಳಲ್ಲಿ ವೀಕ್ಷಕರಿಗೆ ಡಿಜಿಟಲ್ ಮಾಧ್ಯಮ ತಲುಪಿಸಲಿದೆ ಆಗ ಪುನಃ ಲೋಕರಾಜ ಜೈನರ ಆಕರ್ಷಕವಾದ ಇತಿಹಾಸದ ಕಥೆ ಕೇಳಲು ಕಾತುರರಾಗಿದ್ದೇವೆ. ಒಂದು ವಿಶೇಷ ಅಂದರೆ 5 ಲಕ್ಷ ವೀಕ್ಷಕರಿದ್ದ ಡಿಜಿಟಲ್ ಮಾಧ್ಯಮ ಶಿವಮೊಗ್ಗ ಜಿಲ್ಲೆಯ ಗೇರುಸೊಪ್ಪೆ ರಾಣಿ ಚೆನ್ನಬೈರಾದೇವಿ, ಕದಂಬರು ತಾಳಗುಂದದ ಮೊದಲ ಕನ್ನಡ ಶಾಸನ, ಖಂಡೋಬರಾವ್ ಮ್ಯೂಸಿಯಂ, ಈಸೂರು ಸ್ವಾತಂತ್ರ್ಯ ಹೋರಾಟ, ನೀನಾಸಂ, ಕಡಿದಾಳು ಮಂಜಪ್ಪ, ಸಿಂಹದಾಮ ಮತ್ತು ಸಕ್ಕರೆಬೈಲು ಆನೆ ಕ್ಯಾಂಪ್ ಗಳ ಪ್ರಸರಣದಿಂದ 8 ಲಕ್ಷ ತಲುಪಿದೆ ಅಂದ...