Blog number 2181. ಸಜ್ಜನ ರಾಜಕಾರಿಣಿ ಬಿ. ಸ್ವಾಮಿ ರಾವ್ ತಮ್ಮ 94 ನೇ ವಯಸ್ಸಿನಲ್ಲಿ ನಾನು ಹೇಳುವುದೆಲ್ಲ ಸತ್ಯ ಎಂಬ ಜೀವನ ವೃತ್ತಾಂತದಲ್ಲಿ ಶಿವಮೊಗ್ಗ ಜಿಲ್ಲೆಯ ರಾಜಕಾರಣದ ಮೈಲಿಕಲ್ಲುಗಳನ್ನು ದಾಖಲಿಸಿದ್ದಾರೆ ಈ ಪುಸ್ತಕದ ಮೊದಲ 60 ಪುಟಗಳ ಓದಿನಿಂದ ನಾನು ಗ್ರಹಿಸಿದ ಮೊದಲ ಭಾಗ ಇಲ್ಲಿದೆ
#ನಾನು_ಹೇಳುವುದೆಲ್ಲ_ಸತ್ಯ #ಬಿ_ಸ್ವಾಮಿರಾವ್_ಜೀವನ_ವೃತ್ತಾಂತ #ಪುಸ್ತಕದ_ಮೊದಲ_60_ಪುಟಗಳ_ಓದಿನಿಂದ #ನಾನು_ಗ್ರಹಿಸಿದ್ದು #ಹೊಸನಗರ_ವಿಧಾನಸಭಾ_ಕ್ಷೇತ್ರ_ಈಗಿಲ್ಲ #ಈ_ಕ್ಷೇತ್ರದ_ಮಾಜಿ_ಶಾಸಕರಾಗಿದ್ದವರು_ಬಿ_ಸ್ವಾಮಿರಾವ್ #ಸ್ವಾಮಿರಾವ್_ಜೀವನ_ವೃತ್ತಾಂತ #ಪತ್ರಕರ್ತರಾದ_ಶ್ರೀಕಂಠ_ಹೆಚ್_ಆರ್_ಪ್ರಕಟಿಸಿದ್ದಾರೆ. ದಿನಾಂಕ 10 - ಮೇ - 2024 ರಂದು ಸಜ್ಜನ ಮಾಜಿ ಶಾಸಕರಾಗಿದ್ದ ಹೊಸನಗರದ ಸ್ವಾಮಿರಾವ್ ಮತ್ತು ಹೊಸನಗರದ ಉತ್ಸಾಹಿ ಪತ್ರಕರ್ತ ಹೆಚ್.ಆರ್. ಶ್ರೀಕಂಠ ನನ್ನ ಆಫೀಸಿಗೆ ಬಂದು #ನಾನು_ಹೇಳುವುದೆಲ್ಲ_ಸತ್ಯ ಎಂಬ ಸ್ವಾಮಿ ರಾವ್ ಅವರ ಜೀವನ ವೃತ್ತಾಂತ ಪತ್ರಕರ್ತರಾದ ಶ್ರೀಕಂಠ ಬರೆದು ಪ್ರಕಟಿಸಿದ್ದು 94ರ ವಯೋವೃದ್ದರಾದ ಸ್ವಾಮಿ ರಾವ್ ಅವರ ಸ್ವ ಹಸ್ತಾಕ್ಷರದಿಂದ ನೀಡಿದ್ದರು. 250 ಪುಟಗಳ ಈ ಪುಸ್ತಕದ ಮೊದಲ 60 ಪುಟಗಳ ಓದಿನಲ್ಲಿ ನನ್ನ ತಿಳುವಳಿಕೆಗೆ ದಕ್ಕಿದ್ದನ್ನ ಇಲ್ಲಿ ದಾಖಲಿಸಿದ್ದೇನೆ ಮುಂದಿನ ಭಾಗಗಳಲ್ಲಿ ಉಳಿದ ಪುಟಗಳ ಓದು ವಿವರ ವಿಮರ್ಶೆ ಬರೆಯುತ್ತೇನೆ. #ಶಿವಮೊಗ್ಗ_ಜಿಲ್ಲೆಯ_ಸ್ವಾತಂತ್ರ್ಯ_ನಂತರದ_ಮೊದಲ_ಚುನಾವಣೆಯಿಂದ_ಈವರೆಗೆ ಶಿವಮೊಗ್ಗ ಜಿಲ್ಲೆಯ ರಾಜ ಕಾರಣದಲ್ಲಿ ಆಸಕ್ತಿ ಇರುವವರು ಸ್ವಾಮಿರಾಯರ ಈ ಜೀವನ ವೃತ್ತಾಂತ ತಪ್ಪದೇ ಓದಲೇ ಬೇಕು ಯಾಕೆಂದರೆ 1952ರಂದು ಸ್ವಾತಂತ್ರ್ಯ ನಂತರದ ಮೊದಲ ಮಹಾ ಚುನಾವಣೆಯಿಂದ ಮೊನ್ನೆ ನಡೆದ 2024ರ ಲೋಕ ಸಭಾ ಚುನಾವಣೆಯ ತನಕ ಸ್ವಾಮಿರಾಯ...