#ಆನಂದಪುರಂ_ಸಮೀಪದಿಂದ_ಕಾಡಾನೆಗೆ_ಅವುಗಳ_ಮೂಲ_ನೆಲೆಗೆ_ದಾರಿ_ಏರ್ಪಡಿಸಿದಾಗ #ಎರೆಡು_ಗಂಡಾನೆ_ಮತ್ತು_ಒಂದು_ಮರಿಯಾನೆ_ಮಾತ್ರ_ಇತ್ತು. #ಮರಿಯಾನೆಯ_ತಾಯಿ_ಎಲ್ಲಿದೆ? #ದೀರ್ಘ_ಕಾಲ_ಮರಿಯಾನೆ_ರಕ್ಷಿಸುತ್ತಾ_ತಮ್ಮ_ಜೊತೆ_ಕಾಪಾಡಿದ_ಎರೆಡು_ಗಂಡು_ಕಾಡಾನೆಗಳು. #ಮಲೆಶಂಕರ_ಭಾಗದಲ್ಲಿ_ಸುತ್ತಾಡುತ್ತಿರುವುದು_ಈ_ಮರಿಯಾನೆಯ_ತಾಯಿಯಾ? #ಕಾಡಾನೆಗಳು_ಸುರಕ್ಷಿತವಾಗಿ_ತಮ್ಮ_ಮೂಲ_ಸ್ಥಾನ_ಸೇರಲಿ #ಮರಿಯಾನೆಗೆ_ತಾಯಿಯಾನೆ_ಸಿಗಲಿ #ಈ_ಬಾಗದ_ಜನ_ಜಾನುವಾರು_ಕಾಡಾನೆಗಳಿಗೆ_ಯಾವುದೇ_ಜೀವಹಾನಿ_ಆಗದಿರಲಿ #ಎಂದು_ನಮ್ಮ_ಊರಿನ_ವರಸಿದ್ಧಿ_ವಿನಾಯಕ_ದೇವರಿಗೆ_ಹರಕೆ_ಮಾಡಿದ್ದೇನೆ. ಶಿವಮೊಗ್ಗ ಸಾಗರ ಮಾರ್ಗದ ರಾಷ್ಟ್ರೀಯ ಹೆದ್ದಾರಿ 69 ರಲ್ಲಿ ನಿನ್ನೆ (25- ಡಿಸೆಂಬರ್ - 2023) ಎಲ್ಲಾ ವಾಹನ ಸಂಚಾರ ನಿಲ್ಲಿಸಿ ಕಳೆದ 80 ದಿನಗಳಿಂದ ತನ್ನ ಮೂಲ ಸ್ಥಾನಕ್ಕೆ ವಾಪಾಸಾಗಲು ಬಂದ ದಾರಿಯಲ್ಲೇ ವಾಪಾಸು ಹೋಗಲು ಪ್ರಯತ್ನಿಸಿದಾಗೆಲ್ಲ ಈ ಭಾಗದ ರೈತರು ತಮ್ಮ ಜಮೀನು ತೋಟ ಸಂರಕ್ಷಣೆಗಾಗಿ ಸಿಡಿಸುವ ಆನೆ ಪಟಾಕಿಗಳಿಂದ (ಅರಣ್ಯ ಇಲಾಖೆ ಕೂಡ ಈ ಪಟಾಕಿ ತನ್ನ ಸಿಬ್ಬಂದಿಯಿಂದ ಸಿಡಿಸಿದೆ) ಬೆದರಿ ಪುನಃ ವಾಪಾಸು ಹೋಗುತ್ತಿದ್ದ ಕಾಡಾನೆಗಳನ್ನು ಅರಣ್ಯ ಇಲಾಖೆ ಶ್ರಮದಿಂದ ರಾಷ್ಟ್ರೀಯ ಹೆದ್ದಾರಿ ಕ್ರಾಸ್ ಮಾಡಿಸಿದೆ. ಈ ಸಂದರ್ಭದಲ್ಲಿನ ವಿಡಿಯೋ ವೈರಲ್ ಆಗಿದೆ ಆದರೆ ರಾಷ್ಟ್ರೀಯ ಹೆದ್ದಾರಿ ದಾಟಿದ್ದು ಬಲಿಷ್ಟವಾದ ದಂತಗಳನ್ನು ಹೊಂದಿರುವ ಎರೆಡು ಗಂಡು ಸಲಗಗಳು ಅವುಗಳು ...