#ಕೊರಾನಾ_ಲಾಕ್_ಡೌನ್_ಡೈರಿ_2020 #ಲೆಟರ್_ನOಬರ್_30 #ದಿನಾ೦ಕ_5_ಮೇ_2o20 #ನಲವತ್ತು_ದಿನ_ಇಡೀ_ದೇಶ_ಸಂಪೂಣ೯_ಪಾನನಿಶೇದ_ಆಚರಿಸಿದ್ದು_ಸಣ್ಣಸ೦ಗತಿ_ಅಲ್ಲ ಆನ್ ಲೈನ್ ಮಧ್ಯಮಾರಾಟದ ಬಗ್ಗೆ ಯೋಚಿಸಲು ಇದು ಸಕಾಲ. ಮದ್ಯ Essential ಅಥವ Non Essential ಎನ್ನುವ ತೀಮಾ೯ನ, ಚಚೆ೯ ಏನೇ ಇರಲಿ ಆದರೆ ಇಡೀ ದೇಶದಲ್ಲಿ 40 ದಿನ ಸಂಪೂಣ೯ ಮದ್ಯ ಮರಾಟ ನಿರಾಕರಿಸಿದ್ದು ಅದರಂತ 40 ದಿನ ಮಧ್ಯ ಇಲ್ಲದೆ ಮದ್ಯಪಾನಿಗಳು ಸ್ವಯಂ ಪಾನ ನಿಯಂತ್ರಣ ಆಚರಿಸಿದ್ದು ಸಣ್ಣ ಸಂಗತಿ ಇಲ್ಲ. ಹಾಲು, ಔಷದಿ, ದಿನಸಿ, ಗ್ಯಾಸ್, ಮೀನು ಮಾ೦ಸ, ಕೋಳಿ ಮಾರಾಟಕ್ಕೆ ಅವಕಾಶ ನೀಡಿದ ಸಕಾ೯ರ ಮದ್ಯಪಾನ ಮಾರಾಟಕ್ಕೆ ಏಕೆ ಅವಕಾಶ ನೀಡಲಿಲ್ಲ ಎಂಬ ಚಚೆ೯ಗೆ ವಿರಾಮ ನೀಡುವ೦ತೆ 2 ಹಂತದ ಲಾಕ್ ಡೌನ್ ಕಳೆದ ಮೇಲೆ 3ನೇ ಹಂತದ ಲಾಕ್ ಡೌನ್ ನಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿತು. ಮಧ್ಯಮಾರಾಟದ ಮೊದಲ ದಿನ ಸಾಮಾಜಿಕ ಅಂತರ ಕಾಪಾಡುವುದರಲ್ಲಿ ಅನೇಕ ತಪ್ಪುಗಳು ನಡೆಯಿತು, 40 ದಿನ ಸಿಗದ ಮದ್ಯ ಖರೀದಿಸುವಲ್ಲಿ ನಾ ಮುಂದು ತಾ ಮುಂದು ಎಂದು ಅವಸರದಲ್ಲಿ ಕರೋನಾ ವೈರಸ್ ಸುಲಭವಾಗಿ ಹರಡುವ ವಾತಾವರಣ ಸೃಷ್ಟಿ ಆಗಿದ್ದು ವಿಪಯಾ೯ಸ. ಒಂದೇ ದಿನ ಇಡೀ ದೇಶದಲ್ಲಿ ಒಂದು ಸಾವಿರ ಕೋಟಿ ಮೌಲ್ಯದ ಮದ್ಯ ಮಾರಾಟ ಆಗಿದೆ ಎಂದರೆ ಅದು ಸಾಮಾನ್ಯ ವಿಚಾರವಲ್ಲ...