Skip to main content

Posts

Showing posts with the label Dr Vishwapathy shastriji Devajna Jothishi Bangalore

Blog number 1200. ಇವತ್ತು ಗಣಪತಿ ಜಯಂತಿ, ಮಾಘ ಶುಕ್ಲ ಪಕ್ಷ ಕುಂದ ಚತುರ್ಥಿಯಂದು ನಮ್ಮ ಊರಿನ ಶ್ರೀ ವರಸಿದ್ಧಿವಿನಾಯಕ ಸ್ವಾಮಿ ದೇವಾಲಯದ 17ನೇ ವಾರ್ಷಿಕೋತ್ಸವ ಮತ್ತು ಬ್ರಹ್ಮ ರಥೋತ್ಸವದ ಸವಿ ನೆನಪಿಗಾಗಿ ದೈವಜ್ಞ ಜೋತಿಷಿ ಡಾ.ಎನ್.ಎಸ್.ವಿಶ್ವಪತಿ ಶಾಸ್ತ್ರಿಗಳು ನಿರ್ಮಿಸಿ ಕೊಟ್ಟಿರುವ ಪಾಕಶಾಲೆ ಲೋಕಾರ್ಪಾಣೆ ಮತ್ತು ಮುಂದಿನ 18 ನೇ ವರ್ಷದ ನೆನಪಿಗಾಗಿ ಅವರಿಂದ ಅರ್ಚಕರ ನಿವಾಸ ನಿರ್ಮಾಣದ ಸಂಕಲ್ಪ ಮಾಡಿದ್ದಾರೆ.

#ಗಣಪತಿ_ಜಯಂತೋತ್ಸವದ_ಶುಭಹಾರೈಕೆಗಳು. #ಇವತ್ತು_ನಮ್ಮ_ಊರಿನ_ಶ್ರೀವರಸಿದ್ದಿವಿನಾಯಕ_ದೇವರ_ಬ್ರಹ್ಮರಥೋತ್ಸವ #ಹದಿನೇಳನೇ_ವಷ೯ದ_ಜಾತ್ರಾ_ಮಹೋತ್ಸವ. #ದೇವಸ್ಥಾನದ_ನನ್ನ_ಕನಸು_ನನಸು_ಮಾಡಿದ್ದ_ದೈವಜ್ಞ_ಜೋತಿಷಿ_ಡಾ_NS_ವಿಶ್ವಪತಿಶಾಸ್ತ್ರೀಗಳ_ಆಶ್ರೀವಾದದೊಂದಿಗೆ #ಅವರು_ದೇವಸ್ಥಾನಕ್ಕೆ_ನಿರ್ಮಿಸಿಕೊಟ್ಟಿರುವ_ಪಾಕಶಾಲೆ_ಇವತ್ತು_ಲೋಕಾರ್ಪಣೆ ' #ಮುಂದಿನ_18ನೇ_ವಷಾ೯ಚಾರಣೆಗೆ_ಅರ್ಚಕರಿಗೆ_ವಾಸದ_ಮನೆ_ನಿರ್ಮಿಸಲಿದ್ದಾರೆ.    ಇವತ್ತು ಹಿಂದೂ ಪಂಚಾಗದ ಪ್ರಕಾರ ಗಣೇಶ ಜಯಂತೋತ್ಸವ, ಶಿವ ಪಾರ್ವತಿಯ ಪುತ್ರ ಗಣಪತಿ ಮಾಘ ಮಾಸದ ಶುಕ್ಲ ಪಕ್ಷದ ನಾಲ್ಕನೇ ದಿನ ಜಗತ್ತಿಗೆ ಅವತರಿಸಿದರೆಂದು ಮತ್ತು ಈ ದಿನ #ಮಾಘ_ಶುಕ್ಲ_ಪಕ್ಷ_ಕುಂದಚತುರ್ಥಿ ಎಂದೇ ಹಿಂದೂ ದರ್ಮಿಯರ ಪವಿತ್ರ ದಿನವಾಗಿದೆ.   ಇದೇ ಶುಭ ಮಹೂರ್ತದಲ್ಲಿ ನಮ್ಮ ಊರಿನ ಶ್ರೀ ವರಸಿದ್ದಿ ವಿನಾಯಕ ಸ್ಟಾಮಿಯ ಪ್ರತಿಷ್ಟಾಪನೆ ಸನ್ಮಾನ್ಯ ವಿಶ್ವಪತಿ ಶಾಸ್ತ್ರೀಜಿ ಮತ್ತು ಪುರೋಹಿತರಾದ ಕೆಂಜಿಗಾಪುರ ಶ್ರೀಧರ ಭಟ್ಟರು ಸೇರಿ ತೀರ್ಮಾನಿಸಿ ದಿನಾಂಕ 4- ಪೆಬ್ರುವರಿ-2006 ರಂದು ನೆರವೇರಿಸಿದ್ದರು.   ಅದರಂತೆ ಪ್ರತಿ ವರ್ಷ ನಮ್ಮ ಊರ ವರಸಿದ್ದಿ ವಿನಾಯಕ ಸ್ವಾಮಿ ಜಾತ್ರೆ ಮತ್ತು ರಥೋತ್ಸವ  ಮಾಘ ಶುಕ್ಲ ಪಕ್ಷ ಕುಂದ ಚತುರ್ಥಿಯಂದು 17 ವರ್ಷದಿಂದ ನಡೆಯುತ್ತಿದೆ.    ಈ ಶುಭ ಸಂದರ್ಭದಲ್ಲಿ ವಿಶ್ವಪತಿ ಶಾಸ್ತ್ರೀಜಿಯವರು ದೇವಾಲಯಕ್ಕೆ...