#ಜಾರ್ಜ್_ಪರ್ನಾಂಡಿಸರ_ನೆನಪುಗಳು. #ಜಾರ್ಜ್_ಪರ್ನಾಂಡೀಸರ_ಮಂಗಳೂರಿನ_ಕಡೆಯ_ರಾತ್ರಿ. #ಮಂಗಳೂರಿನ_ರಾತ್ರಿ_ಬೀಟ್_ಪೋಲಿಸರ_ಲಾಠಿ_ಏಟು #ಲಾರಿ_ಏರಿ_ಮುಂಬಾಯಿ_ತಲುಪಿ_ನಾಯಕರಾದ_ಜಾರ್ಜ್ ಸ್ವತಃ ಜಾರ್ಜ್ ಪನಾ೯೦ಡೀಸರೆ ಹೇಳಿದ್ದು, ಇವರ ಸಮಾಜ ಸೇವೆ ಹೋರಾಟದಿಂದ ಇವರ ತಂದೆ ಇವರನ್ನು ಒಂದು ರಾತ್ರಿ ಮನೆಯಿಂದ ಹೊರ ಹಾಕುತ್ತಾರೆ, ಮಂಗಳೂರಿನ ಪಾರ್ಕ್ ನಲ್ಲಿ ಕಲ್ಲು ಬೆಂಚಿನ ಮೇಲೆ ಮಲಗಿರುತ್ತಾರೆ... ಆಗ ಒಳ್ಳೆಯ ನಿದ್ದೆಯ ಮಧ್ಯರಾತ್ರಿ ಪೋಲಿಸರು ಬೆನ್ನಿನ ಮೇಲೆ ಲಾಠಿ ರುಚಿ ತೋರಿಸಿ ಎಬ್ಬಿಸುತ್ತಾರೆ, ಆಗ ಜಾರ್ಜ್ ರು ತಮ್ಮ ಸಮಸ್ಯೆ ಹೇಳಿ ಕೊಳ್ಳುತ್ತಾರೆ ಆದರೆ ಪೋಲಿಸರು ಕೇಳುವುದಿಲ್ಲ ತಮ್ಮ ಬೀಟಿನ ಪ್ರದೇಶದಲ್ಲಿ ಇದಕ್ಕೆಲ್ಲ ಅವಕಾಶವೇ ಇಲ್ಲ ಅನ್ನುತ್ತಾರೆ ಅನಿವಾರ್ಯವಾಗಿ ಜಾರ್ಜ್ ರು ಮಂಗಳೂರಿನ ಹಂಪನಕಟ್ಟೆ ಸಮೀಪದ ಬಸ್ ಶೆಲ್ಟರ್ ಗೆ ಹೋಗಿ ಮಲಗುತ್ತಾರೆ. ಅಲ್ಲೂ ಇನ್ನಿಬ್ಬರು ಪೋಲಿಸರು ಬಂದು ಪಾರ್ಕ್ ನಲ್ಲಿ ಎಬ್ಬಿಸಿ ಕಳಿಸಿದಂತೆ ಎಬ್ಬಿಸುತ್ತಾರೆ, ಇನ್ನು ಎಲ್ಲಿಗೆ ಹೋಗಲಿ?... ಅಂತ ಸ್ವಲ್ಪ ಮಾತು ನಿಲ್ಲಿಸಿದ ಜಾರ್ಜ್ "ಆಗಷ್ಟೆ ಬೆಳಗು ಬೆಳಗು ಆಗುತ್ತಿತ್ತು, ಆ ಸಮಯದಲ್ಲಿ ಆ ಮಾರ್ಗದಲ್ಲಿ ಬಂದ ಲಾರಿಗೆ ಕೈ ತೋರಿಸಿದೆ, ಲಾರಿಯಲ್ಲಿದ್ದ ಕ್ಲೀನರ್ ಎಲ್ಲಿಗೆ? ಎಂದಾಗ ನನಗೇ ಎಲ್ಲಿಗೆ ಅಂತ ಗೊತ್ತಿಲ್ಲವಾದ್ದರಿಂದ ಅವನಿಗೆ ಕೇಳಿದೆ ನಿಮ್ಮ ಲಾರಿ ಎಲ್ಲಿಗೆ ಹೋಗುತ್ತೆ? ಅಂತ, ಆತ ಬೊಂಬಾಯಿ ಅಂದಾ...