ಆರಗ ಜ್ಞಾನೇಂದ್ರ ಮಾಜಿ ಶಾಸಕರು ತೀಥ೯ ಹಳ್ಳಿ, ಗೋವು ಪಾಲಕ ಹಳ್ಳಿ ಹುಡುಗನ ಯಶೋಗಾಥೆ ನಾನು ಆಗ ಶಿವಮೊಗ್ಗ ಜಿ.ಪಂ.ಸದಸ್ಯ ನಮ್ಮ ಊರಿನ ವಾಹನ ಒಂದು ಆರಗದಲ್ಲಿನ ಶಾಲಾ ವಿದ್ಯಾಥಿ೯ನಿಗೆ ಡಿಕ್ಕಿ ಹೊಡೆದು ಆಕೆ ತೀಥ೯ಳ್ಳಿ ಆಸ್ಪತ್ರೆ ಸೇರಿಸಲಾಗಿತ್ತು, ಆಗ ಆರಗ ಜ್ಞಾನೇ೦ದ್ರ ಶಾಸಕರು ಬಿ.ಜೆ.ಪಿ. ಪಕ್ಷದಿಂದ. ನಮ್ಮ ಊರಿನ ವಾಹನ ಮಾಲಿಕರು ಮುಸ್ಲಿಂ, ಚಾಲಕರು ಮುಸ್ಲಿಂ ಅವರಿಗೆಲ್ಲ ಅವತ್ತು ಜೀವ ಭಯ. ಬೆಳಿಗ್ಗೆ ನನ್ನ ಕರೆದುಕೊಂಡು ಆರಗದ ಶಾಸಕರ ಮನೆಗೆ ಕರೆದೊಯ್ದರು, ಅಲ್ಲಿ ಶಾಸಕರಾದ ಜ್ಞಾನೇಂದ್ರ ಬೆಳಿಗ್ಗಿನ ಉಪಹಾರಕ್ಕೆ ನಮ್ಮನ್ನ ಕರೆದರು. ಮುಸ್ಲಿಂ ವಾಹನ ಮಾಲಿಕರಿಗೆ ತೊಂದರೆ ಆಗದಂತೆ ತಮ್ಮ ಊರಿನ ಬಡ ವಿದ್ಯಾಥಿ೯ನಿಗೆ ಅನುಕೂಲವನ್ನೂ ಮಾಡಿದರು, ಇವತ್ತಿಗೂ ಆ ವಾಹನ ಮಾಲಿಕರು ಮತ್ತು ಚಾಲಕರು ಇವರನ್ನ ನೆನಪಿಸಿ ಕೊಳ್ಳುತ್ತಾರೆ. ಇದೇ ಸಂದಭ೯ದಲ್ಲಿ ಸಂದಶ೯ನವಲ್ಲದ ಆದರೆ ಸಂದಶ೯ನದಂತೆ ನಮ್ಮಿಬ್ಬರ ನಡುವೆ ನಡೆದ ಸಂಬಾಷಣೆ ಬಹಳ ವಷ೯ದ ಹಿಂದೆ, ಶಿವಮೊಗ್ಗದ ಜನ ಹೋರಾಟ ಪತ್ರಿಕೆಯ ಕಾಲಂನಲ್ಲಿ ಬರೆದದ್ದು ಇಲ್ಲಿ ಪ್ರನ: ಉಲ್ಲೇಖಿಸಿದ್ದೇನೆ. ಇವರ ಬಾಲ್ಯದಲ್ಲಿ ಇವರ ಜೀವನ ಅತ್ಯಂತ ಬಡತನದ್ದು, 7ನೇ ತರಗತಿಯಲ್ಲಿ ಅತ್ಯುತ್ತಮ ದಜೆ೯ಯಲ್ಲಿ ಉತ್ತೀಣ೯ ರಾಗುತ್ತಾರೆ ಆದರೆ ಬಡತನ ಮುಂದಿನ ವಿದ್ಯ...