Skip to main content

Posts

Showing posts with the label R.N. Shetty memories

Blog number 3376.ಆರ್.ಎನ್. ಶೆಟ್ಟರ ಸಾಧನೆ

#ಆರ್_ಎನ್_ಶೆಟ್ಟರು #ಮುರ್ಡೇಶ್ವರ ಮುಡೇ೯ಶ್ವರ ವಿಶ್ವವಿಖ್ಯಾತಗೊಳಿಸಿದ ರಾಮ ನಾಗಪ್ಪ ಶೆಟ್ಟರು. ತಮ್ಮ 92ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ಆರ್.ಎನ್ ಶೆಟ್ಟರ ನಾಲ್ಕನೆ ಪುಣ್ಯತಿಥಿ ಇವತ್ತು    ಆರ್.ಎನ್. ಶೆಟ್ಟರೆಂದರೆ ಅಂದರೆ ಅವರ ನಿಮಾ೯ಣ ಸಂಸ್ಥೆಯಿಂದ ಆಗದ ಕೆಲಸವೇ ಇಲ್ಲ ಎ೦ಬ ಪ್ರತೀತಿ ಇದೆ ಇದಕ್ಕೆ ಕಾರಣ ಇವರ ಸಂಸ್ಥೆ ಸವಾಲಾಗಿ ನಿಮಿ೯ಸಿರುವ ಕೊಂಕಣ ರೈಲ್ವೆಯ 18 ಸುರಂಗ ಮಾಗ೯ಗಳು, ಯುಕೆಪಿಯ ನೂರಾರು ಕಿ.ಮೀ. ಉದ್ದದ ನೀರಾವರಿ ಕಾಲುವೆಗಳು, ಬೆಳಗಾಂ ಜಿಲ್ಲೆಯ ಹಿಡಕಲ್ ಆಣೆಕಟ್ಟುಗಳು ಎದ್ದು ಕಾಣುತ್ತದೆ.  ಇವರ ತಂದೆ ಕೃಷಿಕರು, ಪುರಾಣ ಪ್ರಸಿದ್ದ ಭಟ್ಕಳ ತಾಲ್ಲೂಕಿನ ಮುಡೇ೯ಶ್ವರ ದೇವಾಲಯದ ಮುಕ್ತೇಸರರಾಗಿದ್ದರು, ಗೋಕಣ೯ದಲ್ಲಿ ಆತ್ಮಲಿಂಗ ಐಕ್ಯ ಆದಾಗ ರಾವಣ ಅದನ್ನು ಕೀಳುವ ಪ್ರಯತ್ನದಲ್ಲಿ ಆತ್ಮಲಿಂಗದ ಕೆಲ ತುಣುಕು ಇಲ್ಲಿಗೆ ಬಂದು ಬಿದ್ದಿದೆ ಎಂಬ ಪ್ರತೀತಿ, ಸ್ಥಳ ಪುರಾಣ ಇದೆ.   ಈಗಲೂ ಮುಡೇ೯ಶ್ವರದಲ್ಲಿ ದೇವರ ಎದುರು ಗೋಕಣ೯ದ ಆತ್ಮಲಿಂಗದ ಕಲ್ಲುಗಳ ತುಣುಕ ಅಪೇಕ್ಷೆ ಪಟ್ಟರೆ ಅಚ೯ಕರು ತೋರಿಸುತ್ತಾರೆ.    ಇಲ್ಲಿ ಜನಿಸಿ ಬಾಲ್ಯ ಕಳೆದ ಶೆಟ್ಟರು ಪ್ರಾಥಮಿಕ ಶಿಕ್ಷಣ ಮಾತ್ರ ಪಡೆದರೂ ಅವರ ಸಾಧನೆಗಾಗಿ ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪಡೆಯುವಂತಾಗಿದ್ದು ಇತಿಹಾಸ.   1961 ರಲ್ಲಿ ಇವರು ಸ್ಥಾಪಿಸಿದ ನಿಮಾ೯ಣ ಸಂಸ್ಥೆ ಇವತ್ತು ಇವರ ಒಟ್ಟು ಆಸ್ತಿ ಮೌಲ್ಯ 18 ಸಾವಿರದ 70...