Blog 850, ಸಾಗರ ಜಂಬಗಾರು ಎಂಬ ರೈಲು ನಿಲ್ದಾಣದ ಹೆಸರು ಕಾಗೋಡು ಹೋರಾಟದಲ್ಲಿ ಭಾಗವಹಿಸಲು ಬಂದಾಗ ಈ ರೈಲು ನಿಲ್ದಾಣದಲ್ಲಿ ಬಂದನಕ್ಕೆ ಒಳಗಾದ ಸಮಾಜವಾದಿ ದುರೀಣ ಡಾ.ರಾಮಮನೋಹರ ಲೋಹಿಯ ರೈಲು ನಿಲ್ದಾಣ ಎಂದು ಮರುನಾಮಕರಣ ರೈಲ್ವೆ ಇಲಾಖೆ ಉದ್ದೇಶ ಪೂರ್ವಕವಾಗಿ ತಡೆ ಹಿಡಿದಿರುವುದನ್ನು ಜನತೆ ಪ್ರತಿಭಟಿಸ ಬೇಕಾಗಿದೆ.
#ನಿನ್ನೆ_ನಾಡಿನ_ಹೆಸರಾಂತ_ಸಾಹಿತಿ_ಕಾಳೇಗೌಡನಾಗವಾರರು_ರಾಜ್ಯದ_ಪ್ರಗತಿಪರ_ಕೃಷಿತಜ್ಞ_ನಾಗೇಂದ್ರಸಾಗರ್_ಮನೆಗೆ_ಬಂದಾಗ #ಸಾಗರಜ೦ಬಗಾರು_ಎಂಬ_ಸಾಗರದ_ರೈಲುನಿಲ್ದಾಣ_ಡಾಕ್ಟರ್_ರಾಮಮನೋಹರ_ಲೋಹಿಯಾ_ಎ೦ದು_ಮರುನಾಮಕರಣ_ವಿಳಂಬದ_ಬಗ್ಗೆ_ಚಚಿ೯ಸಿದರಂತೆ. #ಈ_ಸಂದರ್ಭದಲ್ಲಿ_ಮರುನಾಮಕರಣಕ್ಕೆ_ಪಕ್ಷಾತೀತವಾಗಿ_ಒತ್ತಾಯಿಸುವ_ಕಾಯ೯ಕ್ರಮಗಳು_ನಡೆಯಬೇಕಾಗಿದೆ ಆಗಿನ ಕೇಂದ್ರ ಮಂತ್ರಿ ಶ್ರೀನಿವಾಸ ಪ್ರಸಾದ್, ಜಾರ್ಜ್ ಪನಾ೯ಂಡೀಸ್, ರಾಜ್ಯಸಭಾ ಸದಸ್ಯರಾದ ಜವರೇಗೌಡರ ಪ್ರಯತ್ನದಿಂದ ಮತ್ತು ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪ, ಜಿ.ಆರ್.ಜಿ.ನಗರ್, ಕೆ.ವಿ.ಸುಬ್ಬಣ್ಣ, ಸಾಹಿತಿ ನಾ.ಡಿಸೋಜ, ಸಮಜವಾದಿ ಸಾಹಿತಿ ಕೋಣಂದೂರು ವೆಂಕಪ್ಪಗೌಡರು, ಮಾಜಿ ವಿದಾನ ಪರಿಷತ್ ಸದಸ್ಯರಾದ ಮಾದಪ್ಪ, ಪ್ರಪುಲ್ಲಾ ಮದುಕರ್ ,ರೈತ ಮುಖಂಡರಾದ ಪ್ರೋ. ನಂಜುಂಡ ಸ್ವಾಮಿ, ಕೆ.ಟಿ.ಗಂಗಾಧರ್, ಸಾಗರದ ವಸಂತ ಕುಮಾರ್, ಸೊರಬ ಮಂಜುನಾಥ ಗೌಡರು, ಕಲ್ಲೂರ್ ಮೇಘರಾಜ್ ಮತ್ತು ಜಿಲ್ಲೆಯ ಅನೇಕರು (ಇದಕ್ಕಾಗಿ ದೆಹಲಿ ಚಲೋ ಮಾಡಿದ ನೂರಾರು ಹೋರಾಟಗಾರರೂ ಸೇರಿ) ಸಾಗರ ಜಂಬಗಾರು ರೈಲು ನಿಲ್ದಾಣ ಎಂಬ ಹೆಸರು ಬದಲಿಸಿ ಡಾ.ರಾಮಮನೋಹರ ಲೋಹಿಯಾ ಎಂದು ಮರುನಾಮಕರಣ ಮಾಡಲು ರೈಲ್ವೆ ಮಂತ್ರಿ ನಿತೀಶ್ ಕುಮಾರರಿಗೆ ನೀಡಿದ ಮನವಿ ಆಕಾಲದಲ್ಲಿನ ಕಾನೂನು ರೀತ್ಯ ಆಗಿನ ಉಪ ಪ್ರಧಾನಿ ಲಾಲ್ ಅಡ್ವಾನಿ ಅವರಿಗೆ ಹೋಗಿ ಅಲ್ಲಿಂದ ಅದು ರಾಜ್ಯ ಸಕಾ೯ರದ ಅನು...