#ಸೇವಂತಿಗೆ_ಗಿಡದ_ಗರಿಷ್ಟ_ಎತ್ತರ_ಎಷ್ಟು? #ನಮ್ಮ_ಮನೆಯ_ಸೇವಂತಿಗೆ_ಗಿಡ_ಮೂರು_ಮೀಟರ್_ಗಿಂತ_ಹೆಚ್ಚು_ಎತ್ತರ_ಆಗಿದೆ. https://youtube.com/shorts/-d6joU1oSEo?si=wWLZnAJKVcDeaxPg ಸೇವಂತಿಗೆ ಹೂವಿಗೆ ಆಡುಭಾಷೆಯಲ್ಲಿ ಸೇವಂತಿಗೆ, ಶಾವಂತಿಗೆ, ಶ್ಯಾಮಂತಿಗೆ ಇತ್ಯಾದಿ ಹೆಸರುಗಳಿವೆ. ಸೇವಂತಿಗೆ ಹೂವಿನಲ್ಲಿ ಅನೇಕ ಬಣ್ಣ, ಆಕಾರಗಳಿದ್ದರೂ, ಸಾಧಾರಣವಾಗಿ ಕಂಡು ಬರುವುದು ಹಳದಿ ಬಣ್ಣದ ಹೂವು. ಇತರ ಬಣ್ಣಗಳು - ಬಿಳಿ, ಕೆಂಪು, ನೇರಳೆ, ತಿಳಿ ಗುಲಾಬಿ, ತಿಳಿಗೆಂಪು ಇತ್ಯಾದಿ. ಹಬ್ಬ-ಹರಿದಿನಗಳಲ್ಲಿ ಸೇವಂತಿಗೆ ಹೂವಿನ ಬಳಕೆ ಜಾಸ್ತಿ. ಹೂಗೊಂಚಲು(ಬೊಕೆ) ತಯಾರಿಕೆಯಲ್ಲೂ ಸೇವಂತಿಗೆ ಸೂಕ್ತ ಸ್ಥಾನ ಪಡೆದಿದೆ. ಸೇವಂತಿಗೆ ಗಿಡ ಗರಿಷ್ಟ ಒಂದು ಮೀಟರ್ ಎತ್ತರ ಬೆಳೆಯುತ್ತದೆ ಎನ್ನುತ್ತಾರೆ. ನಮ್ಮ ಮನೆಯ ಈ ಸೇವಂತಿಗೆ ಗಿಡ ಮೂರು ಮೀಟರ್ ಗಿಂತ ಎತ್ತರಕ್ಕೆ ಬೆಳೆದಿದೆ.