Skip to main content

Posts

Showing posts with the label Landsliding in Westernghats

4115. ಮಳೆಗಾಲದಲ್ಲಿ_ಮಲೆನಾಡಿನಲ್ಲಿ_ಭೂಕುಸಿತ. ಈ ರೀತಿ ಭೂಕುಸಿತಕ್ಕೆ ಕಾರಣ ಏನು?... ಸೆನ್ಸಾರ್ ಉಪಕರಣಗಳ ಬಳಕೆ ಇನ್ನು ಪ್ರಾರಂಭವಾಗಿಲ್ಲ ಏಕೆ?....

ಮಳೆಗಾಲದಲ್ಲಿ_ಮಲೆನಾಡಿನಲ್ಲಿ_ಭೂಕುಸಿತ.   ಈ ರೀತಿ ಭೂಕುಸಿತಕ್ಕೆ ಕಾರಣ ಏನು?...  ಸೆನ್ಸಾರ್ ಉಪಕರಣಗಳ ಬಳಕೆ ಇನ್ನು ಪ್ರಾರಂಭವಾಗಿಲ್ಲ ಏಕೆ?....   ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನೂತನ ಮನೆ ನಿರ್ಮಾಣ ಕಾಮಗಾರಿಗೆ ನಿರ್ಮಿಸಿದ್ದ ತಡೆಗೋಡೆ ಮಣ್ಣು ಕಾರ್ಮಿಕರ ಶೆಡ್ ಮೇಲೆ ಕುಸಿದು ಮೂವರು ಕಾರ್ಮಿಕ ಕುಟುಂಬ ಭಾನುವಾರ ಮೃತರಾದ ದುರಂತ ನಡೆದಿದೆ.   ಮಲೆನಾಡು ಪಶ್ಚಿಮ ಘಟ್ಟಗಳ ಭಾಗದಲ್ಲಿ ಮಳೆಗಾಲದಲ್ಲಿ ಗುಡ್ಡ ಕುಸಿತ,ಭೂಕುಸಿತ ಸಂಭವಿಸಲು ನೈಸರ್ಗಿಕ ಕಾರಣಗಳು ಮತ್ತು ಮಾನವಕೃತ ಕಾರಣಗಳು  ಪ್ರಮುಖ ಪಾತ್ರವಹಿಸುತ್ತವೆ.     ಮಲೆನಾಡಿನಲ್ಲಿ ಕೆಲವೇ ದಿನಗಳಲ್ಲಿ ಭಾರಿ ಪ್ರಮಾಣದ ಮಳೆ ಸುರಿಯುತ್ತಿದ್ದಾಗ ಮಣ್ಣು ಹೆಚ್ಚಿನ ಪ್ರಮಾಣದ ನೀರನ್ನು ಹೀರಿಕೊಂಡಾಗ,ಮಣ್ಣಿನ ಕಣಗಳ ನಡುವಿನ ಸಾಂದ್ರತೆ ಕಡಿಮೆಯಾಗಿ ಭಾರ ಹೆಚ್ಚುತ್ತದೆ. ​   ಗುಡ್ಡಗಳಲ್ಲಿ ಕೆಂಪು ಮಣ್ಣು  ಮತ್ತು ಜೇಡಿಮಣ್ಣಿನ ಅಂಶ ಹೆಚ್ಚಿರುವಾಗ ನೀರು ಬಿದ್ದಾಗ ಈ ಮಣ್ಣು ಬೇಗನೆ ಸಡಿಲಗೊಂಡು ಜಾರಲು ಪ್ರಾರಂಭಿಸುತ್ತದೆ. ​   ಪಶ್ಚಿಮ ಘಟ್ಟಗಳ ಭೂಪ್ರದೇಶವು ಕಡಿದಾದ ಇಳಿಜಾರುಗಳನ್ನು ಹೊಂದಿದ್ದು, ಗುರುತ್ವಾಕರ್ಷಣೆಯ ಬಲದಿಂದಾಗಿ ಸಡಿಲಗೊಂಡ ಮಣ್ಣು ಮತ್ತು ಬಂಡೆಗಳು ವೇಗವಾಗಿ ಕೆಳಗೆ ಜಾರುತ್ತವೆ.  ​ಅವೈಜ್ಞಾನಿಕ ರಸ್ತೆ ಮತ್ತು ಹೆದ್ದಾರಿ ನಿರ್ಮಾಣ,ಗುಡ್ಡಗಳನ್ನು ಕಡಿದು ರಸ್ತೆ ಅಗಲೀ...