Skip to main content

Posts

Showing posts with the label Well-known historian Ambraia mutt appreciated my nove BESTHARA RANI CHAMPAKA

#Blog number 1050. ಬಿದನೂರು ನಗರವಾಸಿ ಕೆಳದಿ ಇತಿಹಾಸ ಸಂಶೋದಕ ಅಂಬ್ರಯ್ಯ ಮಠರು ನನ್ನ ಬೆಸ್ತರ ರಾಣಿ ಚಂಪಕ ಓದಿ ವಿಮರ್ಷೆ ಮಾಡಿದ್ದಾರೆ.

#ಅ೦ಬ್ರಯ್ಯಮಠ_ಬಿದನೂರುನಗರವಾಸಿ_ಅವರು_ನನ್ನ_ಕಾದಂಬರಿ_ಓದಿ_ಪ್ರತಿಕ್ರಿಯಿಸಿದ್ದು_ನನಗೆ_ಸಂತೋಷ_ತಂದಿದೆ ಕಾರಣ ಇವರು ಅನೇಕ ಪ್ರಸ್ತಕ ಬರೆದವರು (20ಕ್ಕೂ ಹೆಚ್ಚು ಪುಸ್ತಕ ಪ್ರಕಟ ಆಗಿದೆ) ಇವರು ಬರೆದ ''ಕೆಳದಿಯ ಕುಲ ತಿಲಕ ವೆಂಕಟಪ್ಪ ನಾಯಕ " ವಿಶೇಷವಾದದ್ದು ಇದರಲ್ಲಿ ಚಂಪಕಾಳ ಬಗ್ಗೆ ಬರೆದಿದ್ದಾರೆ, ಇತಿಹಾಸದಲ್ಲಿ ಬರುವ ಚಂಪಕಾಳ ಮ್ಲೇಚ್ಚಾ ಜಾತಿ ಎಂಬ ಬಗ್ಗೆ ವೈದಿಕ ಶಾಸ್ತ್ರದ ಅಥ೯ ಹಳೆಗನ್ನಡದ ಅಥ೯ದ ಬಗ್ಗೆ ಅನೇಕ ವಿದ್ವಾಂಸರಲ್ಲಿ ವಿಚಾರ ವಿನಿಮಯ ಮಾಡಿದ ಬಗ್ಗೆ ಪೋನಿನಲ್ಲಿ ತಿಳಿಸಿದರು.   ಕನಾ೯ಟಕ ಪವರ್ ಕಾರ್ಪೊರೇಷನ್ ನಲ್ಲಿ ವೃತ್ತಿ ಮಾಡಿ ವ್ಯವಸ್ಥಾಪಕರಾಗಿ ನಿವೃತ್ತರಾಗಿ ಶಿವಮೊಗ್ಗ ಜಿಲ್ಲೆಯ ನಗರದಲ್ಲಿ ನೆಲೆಸಿದ್ದಾರೆ, ದ.ಕ.ಜಿಲ್ಲೆಯ ಪುತ್ತೂರಿನಲ್ಲಿ ಹೆಚ್ಚು ವರ್ಷ ಸೇವೆ ಸಲ್ಲಿಸಿದವರು.   ಕೆಳದಿ ಅರಸೊತ್ತಿಗೆಯ ಇತಿಹಾಸದ ಬಗ್ಗೆ ಅದಿಕೃತವಾಗಿ ಮಾತಾಡುವ ಬರೆಯುವ ಕೆಲವೇ ಕೆಲವರಲ್ಲಿ ಅಂಬ್ರಯ್ಯ ಮಠ ಮುಂಚೂಣಿಯಲ್ಲಿದ್ದಾರೆ, ದೇಶ ವಿದೇಶ ಯಾತ್ರೆ ಮಾಡಿರುವ ಇವರು ನನ್ನ ಕಾದಂಬರಿ ಬಗ್ಗೆ ಏನು ಬರೆದಿದ್ದಾರೆ ನೋಡಿ. #ಬೆಸ್ತರರಾಣಿ_ಚಂಪಕಾ” ಕಾದಂಬರಿ ಕುರಿತು  ಒಂದು ಪ್ರತಿಕ್ರಿಯೆ  ಶ್ರೀ ಕೆ.ಅರುಣ್ ಪ್ರಸಾದ್ ಅವರು ಬರೆದ “ಬೆಸ್ತರರಾಣಿ ಚಂಪಕಾ” ಸಂಪೂರ್ಣವಾಗಿ  ಓದಿದೆ. ಓದಿದೆ ಎನ್ನುವುದಕ್ಕಿಂತ  ಕೃತಿ ಓದಿಸಿಕೊಂಡುಹೋಯಿತು ಎನ್ನುವುದು ಹೆಚ್ಚು ಸೂಕ್ತ ಎನ್ನಿಸುತ್ತದೆ. ಓ...