Skip to main content

Posts

Showing posts from November, 2020

ನಾವಿಬ್ಬರು ಸಹೋದರರು ನಮ್ಮಿಬ್ಬರ ವಯಸ್ಸು ಅಣ್ಣನದ್ದು 65, ನನ್ನದು 55 ಇಲ್ಲಿಯವರೆಗೆ ನಮ್ಮಿಬ್ಬರ ಜೀವನ ಸಾಮರಸ್ಯದಿಂದ ನಡೆದಿದೆ

#ನಾನು_ನನ್ನ_ಸಹೋದರ ಹೆಚ್ಚಿನ ಕುಟುಂಬದಲ್ಲಿ ಸಹೋದರರು ಮದುವೆ ಆಗುತ್ತಲೇ ಆಸ್ತಿ ಪಾಲು ಮಾಡಿಕೊಂಡು ಅಥವ ಪಿತ್ರಾಜಿ೯ತ ಆಸ್ತಿ ಮಾರಿಕೊಂಡು ಹಣ ಹಂಚಿಕೊಂಡು ಪ್ರತ್ಯೇಕರಾಗಿ ಬಿಡುತ್ತಾರೆ.  ಪರಸ್ಪರ ಹೊಡೆದಾಟ ದ್ವೇಷದಲ್ಲಿ ಒಂದೇ ತಾಯಿ ಮಕ್ಕಳಲ್ಲ ಎನ್ನುವಂತೆ ವತಿ೯ಸುತ್ತಾರೆ.  ನಾನು ಬಾಲ್ಯದಲ್ಲೇ ಒ0ದು ತೀಮಾ೯ನ ಮಾಡಿದ್ದೆ ನಾನು ನನ್ನ ಅಣ್ಣ ಜೀವನ ಪಯ೯೦ತ ಜೊತೆಯಲ್ಲಿರಬೇಕು ಅಂತ.  ನನ್ನೆಲ್ಲ ದಶಾವತಾರಗಳನ್ನ ಹತ್ತು ಹಲವು ವ್ಯವಹಾರಗಳನ್ನ ನನ್ನಣ್ಣ ಪ್ರಶ್ನಿಸದೇ ಸಹಕರಿಸಿದ್ದ, ನಮ್ಮ ತಂದೆ ದೇಹಾಂತ್ಯದ ನಂತರ ಬ್ಯಾಂಕಿನ ಸಾಲ ಸೋಲಗಳಿಗೂ ಕಣ್ಣು ಮುಚ್ಚಿ ಸಹಿ ಹಾಕಿದ್ದ, ನಂತರ ಉದ್ದಿಮೆಯಲ್ಲಿ ನಷ್ಟವಾಗಿ ಸಾಲ ತೀರಿಸಲಾಗದೇ ಆಸ್ತಿ ಹರಾಜಿಗೆ ಬಂದರೂ "ನಿನ್ನಿ೦ದ ನಾನು ಆಸ್ತಿ ಕಳೆದುಕೊಂಡೆ " ಅಂತ ಒಂದು ದಿನವೂ ಅನ್ನಲಿಲ್ಲ.  ದೇವರ ದಯೆಯಿಂದ ಎಲ್ಲಾ ಸಾಲಗಳನ್ನು ತೀರಿಸಿ ಆಸ್ತಿ ಉಳಿಸಿಕೊಂಡೆವು 2015 ರ ತನಕ ಒಂದೇ ಮನೆಯಲ್ಲಿ ವಾಸವಾಗಿದ್ದೆವು ನಂತರ ಒಂದೇ ತರದ ಎರೆಡು ಮನೆ ನಿಮಿ೯ಸಿ ಅಕ್ಕ ಪಕ್ಕದಲ್ಲಿ ಇದ್ದೇವೆ.  ನಮ್ಮೆಲ್ಲ ವ್ಯವಹಾರ ಈಗಲೂ ಅಧಿಕೃತ ಕಾನೂನು ಬದ್ದ ಪಾಲುದಾರಿಕೆಯಲ್ಲಿ ಲಾಭ ನಷ್ಟದಲ್ಲಿ ಸರಿ ಸಮನಾಗಿ ನಡೆಸುತ್ತಿದ್ದೇವೆ.  ಈಗಲೂ ಲೆಖ್ಖ ಪತ್ರ ನಾನೇ ನೋಡುತ್ತೇನೆ ಆದರೆ ಬ್ಯಾಂಕ್ ಅಕೌಂಟ್ ಮತ್ತು ಚೆಕ್ ಗೆ ನನ್ನ ಅಣ್ಣನೆ ಸಹಿ ಮಾಡಬೇಕು

ಚಿಕ್ಕಮಗಳೂರು ಜಿಲ್ಲೆಯ ಹೊಯ್ಸಳ ಖ್ಯಾತಿಯ ವಾಸಂತಿಕಾ ಪರಮೇಶ್ವರಿ ದೇವಸ್ಥಾನದ ಪ್ರದಾನ ಅಚ೯ಕರು ಸಾಗರ ತಾಲ್ಲೂಕಿನ ಕರೂರು ಮೂಲದವರು, ಇಲ್ಲಿನ ಎರೆಡು ಬೃಹದಾಕಾರದ ಸಂಪಿಗೆ ಮರ ಒಂದು ಸಾವಿರ ವರ್ಷದ ಪುರಾತನದ್ದು ಎಂದು ಸಾಬೀತಾಗಿದೆ.

#ಐತಿಹಾಸಿಕ_ಹೊಯ್ಸಳ_ಖ್ಯಾತಿಯ_ವಾಸಂತಿಕ_ದೇವಾಲಯದ_ಪ್ರದಾನ_ಅಚ೯ಕರ_ವಿಮಷೆ೯  ಚಿಕ್ಕಮಗಳೂರು ಜಿಲ್ಲೆಯ ಮುಡಿಗೆರೆ ತಾಲ್ಲೂಕಿನ ಅಂಗಡಿ ಗ್ರಾಮದ ಪುರಾಣ ಪ್ರಸಿದ್ದ ವಾಸಂತಿಕ ದೇವಸ್ಥಾನ ಐತಿಹಾಸಿಕವಾಗಿಯೂ ಪ್ರಮುಖ ಸ್ಥಳ ಹೊಯ್ಸಳ ವಂಶ ಸ್ಥಾಪಕಕ ಸಳ ತನ್ನ ವಿದ್ಯಾಬ್ಯಾಸದ ಕಾಲದಲ್ಲಿ ಗುರುಗಳ ಆದೇಶ "ಹೊಯ್ - ಸಳ " ಎಂದಿದ್ದರಿಂದ ಎದುರಿಗೆ ಬಂದಿದ್ದ ಹುಲಿ ಸಂಹಾರ ಮಾಡಿದ್ದ ಸ್ಥಳವೂ ಇದೇ.   ಈ ದೇವಾಲಯದ ಎದುರು ಬೃಹದಾಕಾರದ ಎರೆಡು ಸಂಪಿಗೆ ಮರವೂ ಇದೆ, ಇದನ್ನ ಕಾಬ೯ನ್ ಟೆಸ್ಟಿಂಗ್ ನಲ್ಲಿ ಒಂದು ಸಾವಿರ ವರ್ಷ ಪುರಾತನವಾಗಿದ್ದೆಂದು ಸಾಬೀತಾಗಿದೆ.   ವಾಸಂತಿಕ ದೇವಿ ವಿಗ್ರಹ  ಮಣ್ಣಿನದ್ದು (ಕಡು ಶಾಕ೯ರ ಪಾಕ), ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯವರಿಗೆ ಇದೆಲ್ಲ ಗೊತ್ತಿದೆ ಆದರೆ ರಾಜ್ಯದ ಇತರ ಜಿಲ್ಲೆಯವರಿಗೆ ಇದರ ಮಾಹಿತಿ ಕಡಿಮೆ, ನಾನು ಈ ದೇವಾಲಯ ನೋಡಿದ್ದೇನೆ.  ಈ ದೇವಾಲಯದ ಪ್ರದಾನ ಅಚ೯ಕರು #ಕಮಕೋಡು_ದತ್ತಾತ್ರೇಯ ಭಟ್ಟರು ಇವರು ಸಾಗರ ತಾಲ್ಲೂಕಿನ ಕರೂರು ಹೋಬಳಿ ಮೂಲದವರು, ಇವರು ನಿಟ್ಟೂರು ಸಮೀಪದ ಮುಳುಗಡೆ ಆದ ಕಮಕೋಡಿನವರು ಈ ಊರು ಕೆಳದಿ ಸಂಸ್ಥಾನದ ಸೈನಿಕ ತರಬೇತಿ ಪ್ರದೇಶ ಇದನ್ನೆಲ್ಲ ಇಲ್ಲಿ ಉಲ್ಲೇಖಿಸಲು ಕಾರಣ ನನ್ನ ಬೆಸ್ತರ ರಾಣಿ ಚಂಪಕಾ ಇವರು ಓದಿದ್ದಾರೆ ಮತ್ತು ಈ ಪುಸ್ತಕದ ವಿಮಷೆ೯ #ನಿಟ್ಟೂರು_ರವೀಶ್ ಮಾಡುವಾಗ ಈ ಕಮಕೋಡು ಕೆಳದಿ ಅರಸರ ಸೇನಾ ಶಿಬಿರ, ತರಬೇತಿ ಮತ್ತು ಶಸ್ತ್ರಾಗಾರ ತಯಾರಿ ಕೇಂದ

ಕೆಳದಿ ಇತಿಹಾಸದ ಜೀವಂತ ಜ್ಞಾನ ಭಂಡಾರ ಡಾ.ಕೆಳದಿ ಗು೦ಡಾ ಜೋಯಿಸರು ನಾನು ಬರೆದು ಪ್ರಕಟಿಸಿರುವ ಕೆಳದಿ ರಾಜಾ ವೆಂಕಟಪ್ಪ ನಾಯಕ ಮತ್ತು ರಾಣಿ ಚಂಪಕಾಳ ದುರಂತ ಪ್ರೇಮ ಕಥೆ ಆದರಿಸಿ ಬರೆದ ಬೆಸ್ತರ ರಾಣಿ ಚಂಪಕಾ ಓದಿ ವಿಮಷೆ೯ ಮಾಡಿ ಸೊಗಸಾಗಿ ನಿರೂಪಿಸಿದ್ದೀರಿ ಎಂದು ಅಭಿನಂದಿಸಿದ್ದಾರೆ.

#ಕೆಳದಿ_ಇತಿಹಾಸ_ಅದಿಕೃತವಾಗಿ_ಮಾತಾಡ_ಬಲ್ಲವರು_ದೃಡೀಕರಿಸ_ಬಲ್ಲವರು_ಕೆಳದಿ_ಗುಂಡಾಜೋಯಿಸರು. ನನ್ನ ಕಾದಂಬರಿ #ಕೆಳದಿ_ಇತಿಹಾಸ_ಮರೆತ_ಬೆಸ್ತರರಾಣಿ_ಚಂಪಕಾ ಕೆಳದಿ ರಾಜಾ ವೆಂಕಟಪ್ಪ ನಾಯಕರ ಮತ್ತು ಚಂಪಕಾ ರಾಣಿಯ ದುರಂತ ಪ್ರೇಮ ಕಥೆಯನ್ನ (ಅವರ ಪತ್ನಿ ಅನಾರೋಗ್ಯ ಮತ್ತು ಇವರ ವೃದ್ದಾಪ್ಯದಲ್ಲೂ) ಬಿಡುವು ಮಾಡಿಕೊಂಡು ಓದಿ ವಿಮಷೆ೯ ಸ್ವಹಸ್ತದಲ್ಲಿ ಬರೆದ ಪತ್ರವನ್ನು ಕಳಿಸಿದ್ದಾರೆ.   "ಕೆಳದಿ ಇತಿಹಾಸದ ಅಭಿಮಾನಿಯಾಗಿ ಕುತೂಹಲಾಸಕ್ತಿಯಿಂದ ಅವಲೋಕಿಸಿದೆನು, ಸೊಗಸಾಗಿ ನಿರೂಪಿಸಿದ್ದೀರಿ ಅಭಿನಂದನೆಗಳು" ಅಂತ ನನ್ನ ಚೊಚ್ಚಲ ಕಾದಂಬರಿಯನ್ನು ದೃಡೀಕರಿಸಿದ್ದಾರೆ, ಇದು ನನ್ನ ಕಾದಂಬರಿಗೆ ಸಿಕ್ಕಿದ ಅತಿ ದೊಡ್ಡ ಪ್ರಶಸ್ತಿ ಅಂತ ಬಾವಿಸುತ್ತೇನೆ ಮತ್ತು ಅವರು ಓದಿ ವಿಮಷಿ೯ಸಿದ್ದಕ್ಕೆ ಅವರಿಗೆ ನನ್ನ ಸಾಷ್ಟಾ೦ಗ ಪ್ರಣಾಮಗಳನ್ನ ಅಪಿ೯ಸುತ್ತಾ ದೇವರು ಅವರಿಗೆ ಆಯುರಾರೋಗ್ಯ ಆಯಸ್ಸು ದಯಪಾಲಿಸಲಿ ಎಂದು ದೇವರಲ್ಲಿ ಪ್ರಾಥಿ೯ಸುತ್ತೇನೆ.   ದೀಘ೯ವಾಗಿ ಮನದಾಳದಿಂದ ಬರೆದ ಅವರ ಪತ್ರದಲ್ಲಿ ಅವರ ವೃದ್ಧಾಪ್ಯದಿಂದ ದೇಶದಲ್ಲೇ ಅತ್ಯಂತ ವಿಸ್ತಾರವಾಗಿದ್ದ ವಿದೇಶಿ ವಿದ್ವಾಂಸರಿಂದ ಪ್ರಶಂಸಿಲ್ಪಟ್ಟ ಕೆಳದಿ ಸಂಸ್ಥಾನದ ಹೆಚ್ಚಿನ ಕೆಲಸ ಮುಂದುವರಿಸಲಾಗದ ಬಗ್ಗೆ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.   ಮುಖ್ಯಮಂತ್ರಿ ಯಡೂರಪ್ಪರಿಗೆ ಎಲ್ಲೆಲ್ಲಿ ಯಾವ ಯಾವ ಕೆಳದಿ ರಾಜರ ಮತ್ತು ರಾಣಿಯರ ನಾಮಕರಣ ಮಾಡಬಹು

ಶಿವರಾಂ ಪಾಟೀಲ್ ಎಂಬ ನನ್ನ ವ್ಯವಹಾರ ಉಸ್ತುವಾರಿ ಅವರ ಮಲೆನಾಡು ಗಿಡ್ದ ದನದ ಗಿಣ್ಣ ಮತ್ತು ತುಪ್ಪ ನನಗಾಗಿ

#ಮಲೆನಾಡು_ಗಿಡ್ದ_ದನದ_ಗಿಣ್ಣು_ತಪ್ಪದೆ_ತಂದು_ಕೊಡುವ_ಆತ್ಮಿಯ_ಮಿತ್ರ_ಶಿವರಾಂ_ಪಾಟೀಲ್   ನಮ್ಮ ಪಕ್ಕದ ಊರಾದ ಆಚಾಪುರದ ಶಿವರಾಂ ಪಾಟೀಲ್ ನಮ್ಮ ಆಪ್ತ ಬಳಗದವರು, ಬೆಂಗಳೂರು, ಮುಂಬೈ, ಪೂನಾ, ಸತಾರ ಮತ್ತು ಗೋವಾದಲ್ಲಿ ಅನೇಕ ವರ್ಷ ವ್ಯವಹಾರ ಮಾಡಿದವರು ಈಗ ನೆಮ್ಮದಿಯ ಜೀವನ ಮಾಡುತ್ತಿದ್ದಾರೆ ನನ್ನ ವ್ಯವಹಾರದಲ್ಲಿ ಇವರು ಪ್ರಮುಖ ಜವಾಬ್ದಾರಿವಹಿಸುತ್ತಾರೆ.   ಇವರು ತಮ್ಮ ನಿತ್ಯ ಹಾಲಿಗಾಗಿ ಮಲೆನಾಡು ಗಿಡ್ದ ದನಗಳನ್ನ ಸಾಕಿದ್ದಾರೆ ಅವು ಕರು ಹಾಕಿದಾಗೆಲ್ಲ ನನಗೆ ಗಿಣ್ಣ ಮಾಡಿ ತಂದು ಕೊಡುತ್ತಾರೆ ಹಾಗೆ ನಿನ್ನೆ ತಂದು ಕೊಟ್ಟ ಗಿಣ್ಣದ ಚಿತ್ರ ತೆಗೆದು ಹಾಕಿದ್ದೇನೆ.  ಮಲೆನಾಡು ಗಿಡ್ಡದ ತುಪ್ಪ ಸದ್ಯದಲ್ಲಿ ಅವರಿಂದ ಪಡೆಯಲು ಕಾಯುತ್ತಿದ್ದೇನೆ.

ಓದುಗನ ಹೃದಯದ ಬಾಗಿಲು ತಟ್ಟುತ್ತದಾ ನನ್ನ ಕಾದಂಬರಿ ಅಂತ ನನ್ನ ಅಂತರಂಗ ಅನುಮಾನಿಸುತ್ತಿತ್ತು,ಈಗಬೆಸ್ತರ ರಾಣಿ ಚಂಪಕಾ ಕಾದಂಬರಿ ಈ ಅನುಮಾನ ಸುಳ್ಳಾಗಿಸಿದೆ ಇದು ಬರಹಗಾರನಿಗೆ ಸಾಥ೯ಕತೆ ನೀಡಿದಂತಾಗಿದೆ.

#ಜಿ_ಟಿ_ಸತ್ಯನಾರಾಯಣ್_ಚಂಪಕ_ಸರಸ್ಸುನಲ್ಲಿ  ಒಬ್ಬ ಲೇಖಕನಿಗೆ ತನ್ನ ಬರಹ ಓದುಗನ ಹೃದಯದ ಬಾಗಿಲು ತಟ್ಟಿತೆಂದರೆ ಅದಕ್ಕಿ೦ತ ಸಾಥ೯ಕತೆ ಬೇರೆ ಇರಲಿಕ್ಕಿಲ್ಲ.  ಇದೆಲ್ಲ ಯಾಕೆಂದರೆ 10 ವರ್ಷದ ಹಿಂದೆ ನಾನು ಬರೆದ ಕಾದಂಬರಿ ಪ್ರಕಟ ಆದ ನಂತರ ಅದಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಗಳು.  400 ವರ್ಷದ ಹಿಂದೆ ರಾಜ ವೆಂಕಟಪ್ಪ ನಾಯಕ ರಾಣಿ ಚಂಪಕಾಳಿಗಾಗಿ ಕಟ್ಟಿಸಿದ ಈ ಸ್ಮಾರಕ ಈಗಲೂ ಗಟ್ಟು ಮುಟ್ಟಾಗಿದೆ, 2024ಕ್ಕೆ ಈ ಸ್ಮಾರಕಕ್ಕೆ 400 ನೇ ವಷಾ೯ಚಾರಣೆ ಮತ್ತು ಆನಂದ ಪುರ ಎಂದು ನಾಮಕರಣಕ್ಕೂ ಕೂಡ.   ನನ್ನ ಈ ಕಾದಂಬರಿ ಓದಿ ಸ್ಥಳ ಬೇಟಿ ಅನೇಕರು ಮಾಡುತ್ತಿದ್ದಾರೆ, ಪ್ರತಿನಿತ್ಯ ಹೊಸ ಪ್ರವಾಸಿಗಳು ಹೆಚ್ಚು ಬರುತ್ತಾರೆ ಅಂತ ಸ್ಥಳಿಯರು ಹೇಳುತ್ತಾರೆ.  ನಿನ್ನೆ ಪತ್ರಕತ೯,ಸಾಹಿತಿ ತುಮರಿ ಬಾಗದ ಜನಪರ ಹೋರಾಟಗಾರ, ಉಪನ್ಯಾಸಕರೂ ಆಗಿರುವ ಜಿ.ಟಿ. ಸತ್ಯನಾರಾಯಣ್ ಚಂಪಕ ಸರಸ್ಸು ಸಂದಶಿ೯ಸಿದ್ದಾರೆ.   ನಾನು ಅವರ ಸರಣಿ ವಿಡಿಯೋ ಮಾಲಿಕೆ GT ವಿಥ್ TRUTH ನ ನಿರಂತರ ವೀಕ್ಷಕ ನಿನ್ನೆಯಿಂದ ಇದು ಚಂಪಕಸರಸ್ಸುವಿನ ಸುದ್ದಿಯಿಂದ U TUBE ಮಾಲಿಕೆ ಆಗಿ ಬದಲಾಗಿದೆ ಇವರ ಸರಣಿ ವಿಡಿಯೋ ಹೊಸ ರೂಪಕ್ಕೆ ಯಶಸ್ಸು ಹಾರೈಸುತ್ತೇನೆ.   ನಿಜ 400 ವರ್ಷದಿಂದ ಚಂಪಕಾಳ ಆತ್ಮ ಅಲ್ಲಿ ಅತೃಪ್ತಿಯಿಂದ ಕಾದಿದೆ, ಜಿಟಿಯವರ ಲೇಖನಕ್ಕೆ ಪ್ರತಿಕ್ರಿಯೆ ಬರೆಯುವ ಮಧ್ಯದಲ್ಲಿ ಪ್ರಖ್ಯಾತ ಪರಿಸರ ಮತ್ತು ಜಲ ತಜ್ಞ ಸಿಸಿ೯ಯ ಕಳವೇ ಶಿವಾನಂದರು ಪೋನ್ ಮಾಡಿ ಶುಭ ಸಮಾ

ಹೋಳಿಗೆ ತುಪ್ಪದ ಲಾಜಿಕ್ ಶಾಂತವೇರಿ ಗೋಪಾಲಗೌಡರು ಗಮನಿಸಿದ್ದರು ಇದನ್ನು ಕಾಗೋಡು ತಿಮ್ಮಪ್ಪರಿಂದ ಕೇಳಿದ್ದು ನನಗೆ ಪ್ರತಿ ಹಬ್ಬದಲ್ಲಿ ನನ್ನ ಸಿಬ್ಬಂದಿ ಮತ್ತು ಗೆಳೆಯರಿಗೆ ಹೋಳಿಗೆ ತುಪ್ಪದ ಉಡುಗೊರೆಗೆ ಮತ್ತು ನಮ್ಮ ಊರ ರಥೋತ್ಸವದಲ್ಲಿ ಅನ್ನ ಸಂತಪ೯ಣೆಗೆ ಹೋಳಿಗೆ ತುಪ್ಪ ಬಡಿಸಲು ಪ್ರೇರಣೆ ಆಯಿತು

ನನಗೆ ಪ್ರತಿ ವಷ೯ ದೀಪಾವಳಿಯಲ್ಲಿ ನೆನಪಾಗುವ  #ಕಾಗೋಡು_ತಿಮ್ಮಪ್ಪನವರು_ಪುನರುಚ್ಚರಿಸಿದ_ಶಾಂತವೇರಿ_ಗೋಪಾಲಗೌಡರು_ಹೇಳುತ್ತಿದ್ದ_ಹೋಳಿಗೆ_ಕಥೆ    ಬಂಗಾರಪ್ಪನವರು ಜಾರಿಗೆ ತಂದ ಬಗರ್ ಹುಕುಂ ಮಂಜೂರು ಪತ್ರ ನನ್ನ ಗ್ರಾಮ ಪಂಚಾಯತ್ ವ್ಯಾಪ್ತಿಯ ಅನೇಕ ಹಳ್ಳಿಯಲ್ಲಿನ ಬಡ ರೈತರಿಗೆ ಭೂಮಾಲಿಕತ್ವ ತಂದ ಮೊದಲ ದೀಪಾವಳಿ ಆಗಿತ್ತು.   ಹಕ್ಕು ಪತ್ರ ಸಿಗುವ ಸಂದಭ೯ದಲ್ಲಿ ರಾಜಕೀಯ ಸ್ಥಿತ್ಯಂತರದಲ್ಲಿ ಬಂಗಾರಪ್ಪರ ಪದಚ್ಯುತಿ ಆಗಿ ಮೊಯ್ಲಿ ಮುಖ್ಯಮಂತ್ರಿ ಮತ್ತು ಗೃಹ ಮಂಡಳಿ ಅಧ್ಯಕ್ಷ ಸ್ಥಾನದಿಂದ ಕಾಗೋಡು ಮಂತ್ರಿ ಆಗಿದ್ದರು.  ರಾಜ್ಯದಲ್ಲಿ ಮೊದಲ ಬಗರ್ ಹುಕುಂ ಪತ್ರಗಳು ನಮ್ಮ ಗ್ರಾಮ ಪಂಚಾಯಿತಿಯಲ್ಲಿ ವಿತರಿಸಿದ್ದು ಇದಕ್ಕೆ ನನ್ನ ಶ್ರಮ ಕಾಗೋಡರಿಗೆ ತುಂಬಾ ಸಂತೋಷ ಉಂಟು ಮಾಡಿತ್ತು.  ಇದೇ ಸಂದರ್ಭದಲ್ಲಿ ಮಂತ್ರಿಗಳ ಜೊತೆ ನಾನು, ಬೀಮನೇರಿ ಶಿವಪ್ಪ ಮತ್ತು ತೀ.ನಾ. ಶ್ರೀನಿವಾಸ್ ಸಾಗರ ತಾಲ್ಲೂಕಿನ ಆವಿನಳ್ಳಿ ಹೋಬಳಿಯ ಪ್ರವಾಸದಲ್ಲಿ ಜೊತೆಗೆ ಇದ್ದೆವು, ದೀಪಾವಳಿಯ ಬೆಳಗಿನ ಉಪಹಾರ ಆವಿನಳ್ಳಿ ರೈಸ್ ಮಿಲ್ ಮಾಲಿಕರಾದ ಹೆಚ್.ಎಂ.ಬಸವರಾಜ್ ಗೌಡರ ಮನೆಯಲ್ಲಿ ಹೋಳಿಗೆ ಜೊತೆಗೆ ಉಪಹಾರ.   ನಂತರದ ಸಭೆಯೊಂದರಲ್ಲಿ ಕಾಗೋಡು ನನ್ನ ಹೊಗಳಿದ್ದೇ ಹೊಗಳಿದ್ದು ಕಾರಣ ನನ್ನ ಗ್ರಾಮ ಪಂಚಾಯಿತಿಯಲ್ಲಿ ಯಶಸ್ವಿ ಆಗಿ ಬಗರ್ ಹುಕುಂ ಹಕ್ಕು ಪತ್ರ ವಿತರಿಸಿದ್ದಕ್ಕೆ ಈ ಹೊಗಳಿಕೆ ನನಗೆ ನಾಚಿಕೆ ತರಿಸುತ್ತಿತ್

ರವಿ ಬೆಳೆಗೆರೆ ಹಾಯ್ ಬೆಂಗಳೂರೆಂಬ ಆಸಾಮಾನ್ಯ ಕನ್ನಡಿಗ ಇನ್ನು ನೆನಪು ಮಾತ್ರ

#ರವಿಬೆಳೆಗೆರೆ_ಹಾಯ್_ಬೆಂಗಳೂರು  ನಿನ್ನೆ ಮಧ್ಯರಾತ್ರಿ ಪ್ರಜಾವಾಣಿ ವಿಭಾಗೀಯ ಪ್ರಸರಾಣಾಧಿಕಾರಿ ಸಂಗಣ್ಣ ಪ್ರಕಾಶ್ ವಾಟ್ಸ್ ಪ್ ನಲ್ಲಿ ರವಿ ಬೆಳೆಗೆರೆ ಅಸ್ತಂಗತ ಅಂತ ಸುದ್ದಿ ಕಳಿಸಿದ್ದು ನೋಡಿ ನನ್ನ ಮನಸ್ಸು ಸೂತಕದ ಮನೆ ಅಂತಾಯಿತು.  ಮೊದಲ ಪ್ರತಿ ಹಾಯ್ ಬೆಂಗಳೂರಿಂದ ಇವತ್ತಿನ ಸಾವಿರದ ಇನ್ನೂರು ದಾಟಿದ ಪ್ರತಿ ಪತ್ರಿಕೆ, ಅವರು ಬರೆದ ಅನುವಾದಿಸಿದ ಎಲ್ಲಾ ಪುಸ್ತಕ ಓದಿದ್ದೇನೆ.   ನನ್ನ ಜೀವನದ ಎಲ್ಲಾ ಏಳು ಬೀಳಿನಲ್ಲಿ ರವಿ ಬೆಳೆಗೆರೆಯ ಬರಹಗಳು ಅವರ ಜೀವನದ ಅನುಭವ ನನಗೆ ವಿಪರೀತ ಪ್ರಭಾವ ಉಂಟು ಮಾಡಿತ್ತು.   ಇವರ ನನ್ನ ಮೊದಲ ಬೇಟಿ ಹೇಗಾಯಿತೆ೦ದರೆ ಶಿವಮೊಗ್ಗ ಜಿಲ್ಲಾ ಪಂಚಾಯತ್ ಕೋಟ್ಯಾಂತರ ರೂಪಾಯಿ ಹಣ ಕಳಪೆ ಔಷದಿ ಖರೀದಿಸಿ ಲಕ್ಷಾಂತರ ರೂಪಾಯಿ ಹೊಡೆದು ತಿಂದ ಕಥೆ ಅವತ್ತಿನ ಜಿಲ್ಲಾ ಸಜ೯ನ್ ರಹಸ್ಯವಾಗಿ ತಿಳಿಸಿದ್ದನ್ನ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಮಂಡಿಸಿ ತನಿಖೆಗೆ ಒತ್ತಾಯಿಸಿದ್ದರಿಂದ ಅವತ್ತು ರಾತ್ರಿಯೇ ಈ ಔಷದಿ ಗೋದಾಮ ವಿದ್ಯುತ್ ಅವಘಡದಿಂದ ಸುಟ್ಟು ಹೋಯಿತೆಂದು ಮಾಡಿ ಇದನ್ನು ಪ್ರತಿಭಟಿಸಿದ ನನ್ನ ಮೇಲೆ ಸುಳ್ಳು ಕೇಸ್ ಮಾಡಿ ಜೈಲಿಗೆ ಕಳಿಸಿದ ಪ್ರಕರಣದಲ್ಲಿ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಅಧಿಕಾರ ಹೊಂದಿದ್ದ ಎಲ್ಲಾ ರಾಜಕಾರಣಿಗಳು ಪಾಲುದಾರರಾಗಿದ್ದಾಗ ನಾನು ಒಬ್ಬಂಟಿ ಆಗಿದ್ದೆ ಆ ಸಂದಭ೯ದಲ್ಲಿ ಹಾಯ್ ಬೆಂಗಳೂರು ನನ್ನ ಪರವಾಗಿ ಪ್ರಕಟಿಸಿದ ವರದಿ ನನಗೆ ನನ್ನ ಹೋರಾಟದ

ಪಂಚಮುಖಿ ಗಾಯಿತ್ರಿ ಗಣಪತಿ ಆಂಜನೇಯ ಕ್ಷೇತ್ರ ಮರೀಲು ಪುತ್ತೂರಿನ ದೇವಾಲಯ ನಿಮಿ೯ಸಿರುವ ಖ್ಯಾತ ಜೋತಿಷಿ ದೇವರ ಆರಾದಕ ನರಸಿಂಹ ಶಾಸ್ತ್ರೀ ದಂಪತಿಗಳು ನನ್ನ ಇವತ್ತಿನ ಅತಿಥಿಗಳು (11- ನವೆಂಬರ್ -2020)

       ಇವತ್ತಿನ ನನ್ನ ಅತಿಥಿಗಳು ಖ್ಯಾತ ಜೋತಿಷಿ ಯಕ್ಷಗಾನ ಕಲಾವಿದರಾದ ಪುತ್ತೂರು ನರಸಿಂಹ ಶಾಸ್ತ್ರೀಗಳು.    ಪುತ್ತೂರಿನ ಪಂಚಮುಖಿ ಗಾಯಿತ್ರಿ ಗಣಪತಿ ಆಂಜನೇಯ ಕ್ಷೇತ್ರ ಮರೀಲು  ದೇವಾಲಯ ಇವರದ್ದೇ, ಜೋತಿಷಿಗಳೂ, ಯಕ್ಷಗಾನ, ತಾಳಮದ್ದಲೆಗಳಲ್ಲಿ ಇವರ ಇಂಪಾದ ದ್ವನಿಯ ಭಾಗವತಿಕೆ ಕೂಡ ಹೆಚ್ಚು ಪ್ರಸಿದ್ದಿ ಪಡೆದಿದೆ.   ನ್ಯಾಯಕ್ಕಾಗಿ ಯಾರನ್ನು ಎದುರಿಸುವ ದೈಯ೯ತೋರುವ ಇವರು ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವುದರಲ್ಲೂ ಮುಂದು.  ಓದುವ ಮತ್ತು ಬರೆಯುವ ಹವ್ಯಾಸದ ನರಸಿಂಹ ಶಾಸ್ತ್ರೀಗಳು ಎರಡು ವರ್ಷದ ಹಿಂದೆ ಈ ಮಾಗ೯ದಲ್ಲಿ ಬಂದಿದ್ದಾಗ ಬೇಟಿ ಆಗಿದ್ದರು.   ಇವತ್ತು ನರಸಿಂಹ ಶಾಸ್ತ್ರೀ ದಂಪತಿಗಳು ಈ ಮಾರ್ಗದಲ್ಲಿ ಬಂದಾಗ ನನ್ನ ಹೊಸ ಕಛೇರಿಗೆ ಬೇಟಿ ನೀಡಿದ್ದರು.   ನನ್ನ ನೂತನ ಉದ್ಯಮಕ್ಕೆ ಶುಭ ಹಾರೈಸಿದ ಜೋತಿಷಿ ಮತ್ತು ದೇವರ ಆರಾದಕರಾದ ಪುತ್ತೂರು ನರಸಿಂಹ ಶಾಸ್ತ್ರೀ ದಂಪತಿಗಳಿಗೆ ಗೌರವಿಸಿ ನಾನು ಬರೆದ ಬೆಸ್ತರ ರಾಣಿ ಚಂಪಕಾ ಪುಸ್ತಕ ಸಮಪ೯ಣೆ ಮಾಡಿದೆ.