#ಮೂರು_ವರ್ಷದ_ಹಿಂದಿನ_ನೆನಪು #ಕೊರಾನಾ_ಮುಂಜಾಗೃತೆ_ವಹಿಸದೆ_ಕೊರಾನಕ್ಕೆ_ಶೆಡ್ಡು_ಹೊಡೆಯುತ್ತಿದ್ದ_ನಮ್ಮ_ಊರ_ಜನರು #ಕೊರಾನಾ_ಕಾರಣದಿಂದ_ಮೊದಲ_ಬಾರಿಗೆ_ಬಸವನ_ಬೀದಿ_ಸೀಲ್_ಡೌನ್ #ಲಾಕ್_ಡೌನ್_ಸೀಲ್_ಡೌನ್_ಕೊರಂಟೈನ್_ಜೊತೆ_ಕೊರಾನ_ಕೂಡ_ಮರೆತುಹೋಗಿದೆ. 2020 ರ ಮಾರ್ಚ್ ತಿಂಗಳಿನಿಂದ ಭಾರತದಲ್ಲಿ ಕೊರಾನಾ ಮಾಡಿದ ಜೀವ ನಷ್ಟ ಆರ್ಥಿಕ ನಷ್ಟಗಳು ಯಾವ ಕಾರಣಕ್ಕೂ ಮರೆಯಲಾರದ ಇತಿಹಾಸದ ಕಪ್ಪು ಚುಕ್ಕೆ ಆದರೆ ಆಧುನಿಕ ಜಗತ್ತಿನ ವೇಗದಲ್ಲಿ ಕೇವಲ ಮೂರು ವರ್ಷದ ಹಿಂದಿನ ಈ ಕೊರಾನಾ ಅದಕ್ಕೆ ಸಂಬಂದ ಪಟ್ಟ ಲಾಕ್ ಡೌನ್, ಸೀಲ್ ಡೌನ್, ಕೊರಂಟೈನ್ ಎಲ್ಲಾ ಮರೆತೇ ಹೋಗಿದೆ. ಆಗಲೂ ಕೊರಾನಾ ಸುಳ್ಳು ಅಂತ, ಮಾಸ್ಕ್ ಹಾಕದೆ ಕೇಸ್ ಹಾಕಿದರೂ ಕೇರೇ ಎನ್ನದೆ ಸ್ಥಳಿಯ ಆಡಳಿತ ಬಂದಿಸಿ ಜೈಲಿಗೆ ಕಳಿಸಿದ ರಿಪ್ಪನ್ ಪೇಟೆಯ ಹೋರಟಗಾರ ಟಿ.ಆರ್.ಕೃಷ್ಣಪ್ಪ ಈಗಲೂ ಆ ಕೇಸಿನ ವಿಚಾರಣೆಗೆ ರಿಪ್ಪನ್ ಪೇಟೆಯಿಂದ ಹೊಸನಗರ ನ್ಯಾಯಾಲಯಕ್ಕೆ 25 ಕಿ.ಮಿ ಸೈಕಲ್ ಸವಾರಿ ಮಾಡುತ್ತಾರೆ. ನಮ್ಮ ಊರಿನ ಕೇರಳದ ಬೇಬಿ ಕೂಡ ಕೊರಾನಾಗೆ ಸವಾಲು ಹಾಕಿ ಆರಾಮಾಗಿ ಇದ್ದಾರೆ ಇದರ ನಡುವೆ ಅನೇಕರು ಕೊರಾನದಿಂದ ನಮ್ಮ ಊರಲ್ಲಿ ಜೀವ ಕಳೆದುಕೊಂಡವರಿದ್ದಾರೆ. ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಹೊರಗಿನವರಾರು ಊರ ಒಳಗೆ ಬರದಂತೆ ಪ್ರಾರಂಭದಲ್ಲಿ ಊರ ಪ್ರವೇಶದ ರಸ್ತೆಗೆ ಬೇಲಿ ಹಾಕಿದರು, ಮರ ಕಡಿದು ರಸ್ತೆ ಬಂದ್ ಮಾಡಿದರು ನಂತರ ಸರ್ಕಾರವ...