ಕೊರಾನಾ ಲಾಕ್ ಡೌನ್ ಡೈರಿ -2020 ಲೆಟರ್ ನಂಬರ್- 38 ದಿನಾ೦ಕ: 20 -ಮೇ -2020 #ಸಕಾ೯ರ_ಅನುಮತಿ_ನೀಡಿದರೂ_ಸಲೂನ್_ಮಾಲಿಕರು_ಸಲೂನ್_ಸೀಲ್_ಡೌನ್_ಮಾಡಿದ್ದಾರೆ. *ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಸವಿತಾ ಸಮಾಜದ ಈ ತೀಮಾ೯ನ ಶ್ಲಾಘನೀಯ. *ತಾಲ್ಲೂಕಿನ ಎಲ್ಲಾ ಸಲೂನ್ ಗಳು ಮೇ 31ರ ವರೆಗೆ ತೆರೆಯುವುದಿಲ್ಲ. * ಎಲ್ಲಾ ಸಲೂನ್ ಸಲಕರಣೆಗಳನ್ನ ಒಂದು ಕಡೆ ಇಟ್ಟು ಸೀಲ್ ಮಾಡಿದ್ದಾರೆ. * ಸಂಘದ ಆದೇಶ ಮೀರಿ ಮನೆಗಳಿಗೆ ಹೋಗಿ ಕೆಲಸ ಮಾಡಿದರೆ 2000 ದ೦ಡ. ಸಣ್ಣ ಸಮಾಜ ಮತ್ತು ಸಮಾಜದಲ್ಲಿ ಅತ್ಯವಶ್ಯಕ ವೃತ್ತಿಯವರು ಇವರ ಆದಾಯವೂ ಸಣ್ಣದೆ ಆದರೆ ದೇಶದ ಆರೋಗ್ಯ ತುತು೯ ಪರಿಸ್ಥಿತಿ ತಂದಿರುವ ಕರೋನಾ ಸಂಕಪ್ಟ ಕಾಲದಲ್ಲಿ ಇವರ ತೀಮಾ೯ನ ಮಾತ್ರ ಬೆಲೆ ಕಟ್ಟಲಾಗದು. ಅತಿ ಹೆಚ್ಚು ಲಾಭದ ದಂದೆಯವರು ಲಾಕ್ಡೌನ್ ಮುಗಿದರೆ ಸಾಕು ನಮ್ಮ ವ್ಯವಹಾರ ಪ್ರಾರಂಬಿಸೋಣ ಎಂದು ಹಾತೊರೆಯುತ್ತಿದ್ದರೆ ಈ ಸಲೂನ್ ಮಾಲಿಕರ ಸಂಘದವರು ಸಕಾ೯ರ ಅನುಮತಿ ನೀಡಿದರೂ ಸಲೂನ್ ತೆರೆಯಲು ಮನಸ್ಸು ಮಾಡಿಲ್ಲ ಮತ್ತು ಇಡೀ ತಾಲ್ಲೂಕಿನಲ್ಲಿ ಯಾರೂ ಸಲೂನ್ ತೆರೆಯದಂತೆ ಅವರ ಪರಿಕರ ಸಾಮಗ್ರೀ ಒಂದು ಕಡೆ ತರಿಸಿ ಸೀಲ್ ಮಾಡಿದ್ದಾರೆ ಮತ್ತು ಯಾರಾದರೂ ಸಂಘಟನೆ ಆದೇಶ ಉಲ್ಲಂಘನೆ ಮಾಡಿದರೆ 2000 ದಂಡ ಹಾಕುತ್ತಾರೆ. ...