#ಆನಂದಪುರಂನಲ್ಲಿ_ಎರೆಡು_ರಾಷ್ಟ್ರೀಯ_ಹೆದ್ದಾರಿಗೆ_ಬೈಪಾಸ್ #ಎರೆಡೂ_ರಾಹೆ_ವಿಂಗಡಿಸುವ_ಬೃಹತ್_ಪ್ಲೈಒವರ್ #ರಾಣಿಬೆನ್ನೂರು_ಬೈಂದೂರು_ರಾಹೆ_766ಸಿಗೆ_ಬೈಪಾಸ್ #ಹೊನ್ನಾವರ_ಚಿತ್ತೂರು_ರಾಹೆ_69ಕ್ಕೆ_ಬೈಪಾಸ್ #ಕನಾ೯ಟಕದಲ್ಲಿ_14_ರಾಷ್ಟ್ರೀಯ_ಹೆದ್ದಾರಿ_ಹಾದು_ಹೋಗಿದೆ #ಐದು_ಸ್ಥಳದಲ್ಲಿ_ಮಾತ್ರ_ಎರೆಡು_ರಾಷ್ಟ್ರೀಯ_ಹೆದ್ದಾರಿ_ಹಾದು_ಹೋಗಿದೆ. #ಅದರಲ್ಲಿ_ನಮ್ಮ_ಆನಂದಪುರಂ_ಒಂದು ನ್ಯಾಷನಲ್ ಹೈವೇ ಅಥಾರಿಟಿ ಆನಂದಪುರಂನಲ್ಲಿ ಹಾದು ಹೋಗುವ NH 766 C (ರಾಣಿಬೆನ್ನೂರು ಬೈಂದೂರು) ಮತ್ತು NH 69 (ಹೊನ್ನಾವರ ಚಿತ್ತೂರು) ರಾಷ್ಟ್ರೀಯ ಹೆದ್ದಾರಿಗೆ ಬೈಪಾಸ್ ನಿರ್ಮಿಸಲು ಎಲ್ಲಾ ರೀತಿಯ ತಯಾರಿ ನಡೆಸಿ ಈಗ ಡಿಪಿಆರ್ ಆಗಿದೆ. ಡಿಟೈಲ್ ಪ್ರಾಜೆಕ್ಟ್ ರಿಪೋರ್ಟ್ (DPR) ನನ್ನ ಟೀಬಲ್ ಮೇಲೆ ಇದೆ ಇದನ್ನ ವಿವರವಾಗಿ ನೋಡಿದ್ದೇನೆ ಅದರ ಫೋಟೋಗಳನ್ನ ಲಗತ್ತಿಸಿದ್ದೇನೆ ನೋಡಿ. ಈ ಬೈಪಾಸ್ ಜೋಡಿ ರಸ್ತೆ ದಾಸಕೊಪ್ಪ ವೃತ್ತದ ಕಮಲಾಕ್ಷ ನಾಯಕರ ಜಾಗದಿಂದ ಗೌರಿಕೆರೆ ಕೆಳಗಿನ ಗುಂಡಿಬೈಲು ಜಮೀನಿನಲ್ಲಿ ಸಾಗಿ, ರಂಗನಾಥ ಸ್ವಾಮಿ ದೇವಾಲಯದ ಕೆಳಗಿನ ಕೆ.ಎಂ.ಎಸ್ ಲೇಔಟ್ ಗೆ ತಾಗಿ ಯಡೇಹಳ್ಳಿ ಕೆರೆ ಕೆಳಗಿನ ಗುಂಡಿಬೈಲು ಜಮೀನಿನ ಮುಖಾಂತರ ಯಡೇಹಳ್ಳಿ ಆಚಾಪುರ NH 69ರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪೂವಪ್ಪಣ್ಣರ ಬಾವನ ವರ್ಕ್ ಶಾಪ್ ಪಕ್ಕದಲ್ಲಿ ರಾಷ್ಟ್ರೀಯ ಹೆದ್ದಾರಿ NH 69 ಕ್ರಾಸ್ ಮಾ...