#ಪ್ರಸಕ್ತ ರಾಜ ಕಾರಣದ ಒಳಗುಟ್ಟು# ಲೋಕ ಸಭಾ ಚುನಾವಣಾ ಅಂಕಣ ಭಾಗ-13. (ಕೆ.ಅರುಣ್ ಪ್ರಸಾದ್) ಶಿವಮೊಗ್ಗ ಲೋಕಸಭಾ ಚುನಾವಣೆ ಮುಗಿಯಿತು ಇಬ್ಬರಿಗೂ ಗೆಲುವಿನ ಸೋಲಿನ ಚಾನ್ಸ್ 50:50. ನಿನ್ನೆಯ ಮತದಾನದ ನಂತರ ಇಷ್ಟು ದಿನದ ಪ್ರಚಾರದ ಶಬ್ದ ನಿಶ್ಯಬ್ದವಾಗಿದೆ, ಅಭ್ಯಥಿ೯ಗಳು ನಾಟ್ ಕವರೇಜ್ನಲ್ಲಿದ್ದರೆ, ಪದಾಧಿಕಾರಿಗಳು ಕಾಯ೯ಕತ೯ರು ಕೂಡ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಅಧಿಕಾರಿಗಳು, ಟ್ಯಾಕ್ಸಿಯವರು, ಪತ್ರಕತ೯ರು ಕೂಡ. ತಮ್ಮ ತಮ್ಮ ಮತ ಕೇಂದ್ರದಲ್ಲಿ ಏನಾಗಿದೆ ಅಂತ ಪ್ರತಮ ವತ೯ಮಾನ ತಿಳಿದಿದ್ದಾರೆ, ತಾಲ್ಲೂಕಗಳಲ್ಲಿ ಏನಾಗಬಹುದು? ಇದಕ್ಕೆ ಯಾರು ಕಾರಣ? ಹೀಗೆ ಚಚೆ೯ ಪ್ರಾರಂಭ ಆಗಿದೆ. ಮುಂದುವರಿದು ದೂರದ ಬೈoದೂರಿನಲ್ಲಿ ಆ ಪಕ್ಷ ಮುಂದಿದೆ, ಈ ಸಾರಿ ಭದ್ರಾವತಿ JDS ಪುಲ್ ಲೀಡ್, ಸೊರಬ ಬಿಜೆಪಿ ಕೈಬಿಟ್ಟಿದೆ, ಒಕ್ಕಲಿಗರು, ಈಡಿಗರು, ಅಲ್ಪಸಂಖ್ಯಾತರು ಮದುಗೆ ಓಟು ಮಾಡಿದ್ದಾರೆ, ಸಾಗರದಲ್ಲಿ ಹಾಲಪ್ಪರ ಸಾದನೆ ಸಾಕಾಗಿಲ್ಲ ಅಂತ ಮಾತಾಡುತ್ತಾರೆ. ಅದೇ ರೀತಿ ಕಾಂಗ್ರೇಸ್ ನವರು JDSಗೆ ಕೆಲಸ ಮಾಡಿಲ್ಲ, ಕೊಟ್ಟ ಹಣ ಮತದಾರನಿಗೆ ತಲುಪಿಲ್ಲ, ಕಿಮ್ಮನೆ ಮಂಜುನಾಥ ಗೌಡರು ಒಂದಾಗಲಿಲ್ಲ, ಅಪ್ಪಾಜಿಗೌಡರು ಸಂಗಮೇಶ್ ಸರಿ ಆಗಲಿಲ್ಲ ಎಂಬ ಚಚೆ೯ ಕೂಡ ಇದೆ. ಹಣ ಬರುತ್ತಾ ಇತ್ತು ಅಲ್ಲಲ್ಲಿ ರೈಡ್ ಆಯಿತು, ಭದ್ರಾವತಿಗೆ ಟೈರ್ ಲ್ಲಿ ಕಳಿಸಿದರು ಹಿಡಿದು ಬಿಟ್ಟರು ಅಂತ ಕೆ...