Skip to main content

4162.ನೇಪಾಳದ_ಕಾಳಿಗಂಡಿಕೆ_ನದಿಯಲ್ಲಿನಸಾಲಿಗ್ರಾಮದ_ಬೃಹತ್_ಪ್ರತಿಕೃತಿ.


ನೇಪಾಳದ_ಕಾಳಿಗಂಡಿಕೆ_ನದಿಯಲ್ಲಿನ
ಸಾಲಿಗ್ರಾಮದ_ಬೃಹತ್_ಪ್ರತಿಕೃತಿ.

  ಪ್ರವಾಹ ಬರುವ ಹಲವು ತಿಂಗಳುಗಳ ಹಿಂದೆಯೇ ಇದು ಯಾತ್ರಿಕರ ಪ್ರಮುಖ ಫೋಟೋ ಸ್ಪಾಟ್ ಆಗಿತ್ತು ಆದರೆ ಸಾಮಾಜಿಕ ಜಾಲತಾಣದಲ್ಲಿ 26- ಆಗಸ್ಟ್ -2026ರಂದು ನೇಪಾಳದಲ್ಲಿ ಸಂಭವಿದ ಮಹಾ ದುರಂತ ಬೋಟಿ ಕೋಶಿ ನದಿಯಲ್ಲಿ ತೇಲಿ ಬಂದ ಬೃಹತ್  ಸಾಲಿಗ್ರಾಮದ ಶಿಲೆ ಎಂದು ಹರಿದಾಡುತ್ತಿದೆ ಆದರೆ ಇದು ತಪ್ಪು ಮಾಹಿತಿ.

  ನಾನು ಸಾಲಿಗ್ರಾಮದ ಮೇಲೆ ಒಂದು ಪುಸ್ತಕ ಪ್ರಕಟ ಮಾಡಲಿದ್ದೇನೆ ಆದ್ದರಿಂದ ವಿಶ್ವದ ಸಾಲಿಗ್ರಾಮದ ಬಗ್ಗೆ ಅನೇಕ ಮಾಹಿತಿ ಸಂಗ್ರಹಿಸಿ ಬರೆದಿದ್ದೇನೆ ಆದ್ದರಿಂದ ಈ ಸಾಮಾಜಿಕ ಜಾಲತಾಣದ ಈ ತಪ್ಪು ಸಂದೇಶಕ್ಕೆ ಸರಿಯಾದ ಮಾಹಿತಿ ನೀಡಲು ಈ ಲೇಖನ ಬರೆದಿದ್ದೇನೆ, ನನ್ನ ಪುಸ್ತಕದ ಒಂದೆರೆಡು ಅದ್ಯಾಯ ಕೂಡ ಮುಂದಿನ ದಿನಗಳಲ್ಲಿ ಪೇಸ್ ಬುಕ್ ನಲ್ಲಿ ಪೋಸ್ಟ್ ಮಾಡುತ್ತೇನೆ ....

 ಈ ಬೃಹತ್ ಸಾಲಿಗ್ರಾಮದ ಪ್ರತಿಕೃತಿ ಇರುವುದು #ನೇಪಾಳದ_ಮುಸ್ತಾಂಗ್_ಜಿಲ್ಲೆಯ_ಕಾಳಿಗಂಡಕಿ_ನದಿಯ_ತೀರದಲ್ಲಿರುವ_ಜೋಮ್ಸೋಮ್ ಪ್ರದೇಶದಲ್ಲಿದೆ. 

  ನೇಪಾಳ ರಾಜ್ಯದ ಮುಸ್ತಾಂಗ್ ಜಿಲ್ಲೆಯ ಕಾಳಿಗಂಡಕಿ ನದಿಯ ಜೋಮ್ಸಮ್ ಪ್ರದೇಶದಲ್ಲಿ 2026ರ ಏಪ್ರಿಲ್ 20 ರಿಂದ ಮೇ 4ರವರೆಗೆ ನಡೆದ #ನೇಪಾಳ_ಅಕಾಡೆಮಿ ಆಫ್ ಫೈನ್ ಆರ್ಟ್ಸ್ ಕಾರ್ಯಾಗಾರದಲ್ಲಿ ನದಿ ದಂಡೆಯ ಬೃಹತ್ ಬಂಡೆ ಕೆತ್ತಿ ರಚಿಸಿದ ಸಾಲಿಗ್ರಾಮದ ಪ್ರತಿ ಕೃತಿ ಇದು,ಅಲ್ಲಿ ಇದೊಂದೆ ಅಲ್ಲ ಇಂತಹ ಸುಮಾರು 18 ಶಿಲ್ಪಗಳ ಪ್ರತಿಕೃತಿ ಇಲ್ಲಿದೆ.

 ಇಲ್ಲಿಗೆ ಈ ವರ್ಷ ಮೇ ತಿಂಗಳಲ್ಲಿ ಬೇಟಿ ನೀಡಿದ #ಶೃಂಗೇರಿ ಕಿರಿಯ ಸ್ವಾಮೀಜಿ ಪೂಜೆ ಮಾಡಿದ ಪೋಟೊ ಇದು, ದಿಡೀರ್ ಪ್ರವಾಹದ ದುರಂತ ನಡೆದ ಸ್ಥಳ ಇಲ್ಲಿಂದ ಪೂರ್ವಕ್ಕೆ 100 ಕಿ.ಮೀ. ದೂರದ #ಬೋಟಿ_ಕೋಶಿ ನದಿ ಪ್ರದೇಶದ ನೇಪಾಳ ಮತ್ತು ಚೀನಾ ದೇಶದ ಎರೆಡೂ ಕಡೆಯ ನದಿ ಪಾತ್ರಗಳು.

    ನೀವು ಸಾಲಿಗ್ರಾಮ ನೋಡಿದ್ದೀರಾ? ...ಸ್ಪರ್ಷಿಸಿದ್ದಿರಾ? ... ನಿಮ್ಮ ಮನೆಗಳಲ್ಲಿ ಸಾಲಿಗ್ರಾಮ ಪೂಜಿಸುತ್ತೀರಾ? ಪ್ರತಿಕ್ರಿಯಿಸಲು ವಿನಂತಿ. 

   ಇದು ಕಳೆದ ಜನವರಿ 26ರಲ್ಲಿ ನೇಪಾಳ ಚೀನಾ ಬಾರ್ಡರ್ ನಲ್ಲಿ ಆದ ದಿಡೀರ್ ಪ್ರವಾಹದಲ್ಲಿ ಪತ್ತೆಯಾದ ಬೃಹತ್ ಸಾಲಿಗ್ರಾಮದ ಪಳೆಯುಳಿಕೆ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ #ವೈರಲ್ ಆಗಿ ಹರಿದಾಡುತ್ತಿದೆ.

  ಕೇಸರಿ ಬಟ್ಟೆ ಕಟ್ಟಿರುವ ಈ ದೊಡ್ಡ ಕಪ್ಪು ಕಲ್ಲು 22 ಅಡಿ ಎತ್ತರದ ಸಾಲಿಗ್ರಾಮ ಶಿಲೆಯ ಪ್ರತಿಕೃತಿ  ಇದು “#ವಿಶ್ವದ_ಅತಿ_ದೊಡ್ಡ_ಸಾಲಿಗ್ರಾಮದ_ಪ್ರತಿಕೃತಿ” ಎಂದು ದಾಖಲಾಗಿದೆ. 

   ಇದನ್ನು 2026ರ ಏಪ್ರಿಲ್ 20ರಿಂದ ಮೇ 4ರವರೆಗೆ ನಡೆದ #ನೇಪಾಳ_ಅಕಾಡೆಮಿ_ಆಫ್_ಫೈನ್_ಆರ್ಟ್ಸ್‌ನ ಕಾರ್ಯಾಗಾರದಲ್ಲಿ ನದಿಯ ದಡದಲ್ಲಿದ್ದ ಬೃಹತ್ ಬಂಡೆಯನ್ನೇ ಕಲಾವಿದರು ಸಾಲಿಗ್ರಾಮದ ಆಕೃತಿ ಕೆತ್ತಿ ಪ್ರತಿಕೃತಿ ನಿರ್ಮಿಸಿದ್ದಾರೆ ಅಲ್ಲಿ ಇದೊಂದೆ ಅಲ್ಲ ಈ ರೀತಿ ಶಿಲ್ಪ ಕಲಾವಿದರು ನಿರ್ಮಿಸಿದ 18ಕ್ಕೂ ಹೆಚ್ಚು ವಿವಿದ ಗಾತ್ರದ ಸಾಲಿಗ್ರಾಮ ಪ್ರತಿಕೃತಿಗಳು ಇದೆ.

  ಇದರ ಹಿಂದಿನ ಉದ್ದೇಶ ಪೂಜನೀಯ ಸಾಲಿಗ್ರಾಮ ಶಿಲೆಗಳು ಸಿಗುವ ನೇಪಾಳ ರಾಜ್ಯದ ಕಾಳಿ ಗಂಡಿಕೆ ನದಿಯನ್ನು ಹೆಚ್ಚು ಪ್ರವಾಸಿಗರಿಗೆ ಆಕರ್ಷಿಸುವಂತೆ ಮಾಡಿ ಪ್ರವಾಸೋದ್ಯಮದ ಅಭಿವೃದ್ದಿ ಕೂಡ ಆಗಿದೆ.
 
    ಈ ವರ್ಷ ಮೇ ತಿಂಗಳಲ್ಲಿ ನೇಪಾಳ ರಾಜ್ಯಕ್ಕೆ ಬೇಟಿ ನೀಡಿದ ಶೃಂಗೇರಿ ಮಠದ ಕಿರಿಯ ಸ್ವಾಮಿಗಳು ಈ ಪ್ರತಿಕೃತಿ ಬಂಡೆಯ ಸ್ಥಳಕ್ಕೆ ಬೇಟಿ ನೀಡಿ ಈ ಸಾಲಿಗ್ರಾಮದ ಪ್ರತಿಕೃತಿಗೆ ಪೂಜೆ ಮಾಡಿದ ಫೋಟೋ ಇಲ್ಲಿದೆ ನೋಡಿ.
  
  ಆಗಸ್ಟ್ 26ರಂದು ಸಂಭವಿಸಿದ ದುರಂತವು ಇಲ್ಲಿಂದ ನೂರಾರು ಕಿಲೋಮೀಟರ್ ಪೂರ್ವಕ್ಕೆ  ರಸುವಾ ಪ್ರದೇಶದ ಭೋಟೆ ಕೋಶಿ ನದಿಯಲ್ಲಿ ಸಂಭವಿಸಿತ್ತು.

  ಅಂದರೆ ಪ್ರವಾಹ ಬರುವ ಹಲವು ತಿಂಗಳುಗಳ ಹಿಂದೆಯೇ ಇದು ಯಾತ್ರಿಕರ ಪ್ರಮುಖ #ಫೋಟೋ_ಸ್ಪಾಟ್ ಆಗಿತ್ತು ಆದರೆ ಸಾಮಾಜಿಕ ಜಾಲತಾಣದಲ್ಲಿ 26- ಆಗಸ್ಟ್ -2026ರಂದು ನೇಪಾಳದಲ್ಲಿ ಸಂಭವಿದ ಮಹಾ ದುರಂತ ಬೋಟಿ ಕೋಶಿ ನದಿಯಲ್ಲಿ ತೇಲಿ ಬಂದ ಬೃಹತ್  ಸಾಲಿಗ್ರಾಮದ ಶಿಲೆ ಎಂದು ಹರಿದಾಡುತ್ತಿದೆ.
 
  ಮನೆಗಾತ್ರದ ಈ ಬೃಹತ್ ಕೆತ್ತನೆಗಳು ಪ್ರವಾಹದ ನಂತರ ಭೂಮಿಯಿಂದ ಹೊಸದಾಗಿ ಹೊರಬಂದವು ಅಥವಾ “ಇದುವರೆಗೆ ಪತ್ತೆಯಾದ ಅತಿ ದೊಡ್ಡ ಸಾಲಿಗ್ರಾಮಗಳು” ಎಂಬ ಹೇಳಿಕೆಗೆ ಯಾವುದೇ ಆಧಾರವಿಲ್ಲ.

 ಸಾಲಿಗ್ರಾಮದ ಹೆಚ್ಚಿನ ಮಾಹಿತಿ ಮುಂದಿನ ಲೇಖನದಲ್ಲಿ ನಿರೀಕ್ಷಿಸಿ.

#nepala #kaligandikeriver #saligrama #photospot #botekoshiriver #flashflood #jomsom #sringeri.
#sculptureart #sculptureartist #academyoffinearts

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...