Skip to main content

Posts

Showing posts with the label he writes some best wishes in my 29 Small stories book

ಸದ್ಯದಲ್ಲೇ ಬಿಡುಗಡೆ ಆಗಲಿರುವ ನನ್ನ 29 ಸಣ್ಣ ಕಥಾ ಸಂಕಲನದಲ್ಲಿ ಶೃಂಗೇಶರ ಶುಭ ನುಡಿಗಳು ಮುದ್ರಣ ಆಗಿದೆ, ನನ್ನ ಅವರ ಗೆಳೆತನಕ್ಕೆ ಬೆಳ್ಳಿಹಬ್ಬವೂ ಹೌದು

 ಶೃಂಗೇಶರು ನನ್ನ ಒತ್ತಾಯಕ್ಕೆ ನನ್ನ ಕಥಾ ಸಂಕಲನಕ್ಕೆ ಶುಭ ನುಡಿ ಬರೆದಿದ್ದಾರೆ #ಮೊದಲ_ಕಾದಂಬರಿಯಂತೆ_ಮೊದಲ_ಕಥಾ_ಸಂಕಲನಕ್ಕೂ_ಅವರ_ಸಹಕಾರವಿದೆ. #ಗೆಳೆತನಕ್ಕೆ_ಬೆಳ್ಳಿ_ಹಬ್ಬ.     ನನ್ನ ಮತ್ತು ಶೃಂಗೇಶರ ಗೆಳೆತನಕ್ಕೆ 25 ವರ್ಷದ ಗಡಿ ದಾಟಿದೆ ಒಂದು ರೀತಿ ಗೆಳೆತನದ ಬೆಳ್ಳಿಹಬ್ಬದ ಆಚರಣೆ.   ಗೆಳೆತನ ಪರಿಚಯ ಪ್ರಾರಂಭ ಆಗಿದ್ದು ನನ್ನ ರಾಜಕೀಯ ಮತ್ತು ಅವರ ಪತ್ರಕರ್ತ ಜೀವನದಿಂದ,ಈಗ ರಾಜಕೀಯದಿಂದ ನಾನು ದೂರ ಆದಂತೆ ಶೃಂಗೇಶರು ಪತ್ರಿಕೋದ್ಯಮದಿಂದ ಒಂದು ಕಾಲು ತೆಗೆದಾಗಿದೆ.   ಜಿಲ್ಲಾ ಪಂಚಾಯತ್ ನಲ್ಲಿ ಸದಸ್ಯನಾಗಿ ಭ್ರಷ್ಟಾಚಾರ ವಿರೋದದ ನನ್ನ ಹೋರಾಟದ ದಿನಗಳವು..... ಜೆ.ಹೆಚ್.ಪಟೇಲರು ಮುಖ್ಯಮಂತ್ರಿ, ಯಡೂರಪ್ಪ ವಿರೋದ ಪಕ್ಷದ ನಾಯಕರು, ಈಶ್ವರಪ್ಪ, ಕಾಗೋಡು, ಆರಗ ಜ್ಞಾನೇಂದ್ರ, ಮಂತ್ರಿ ಬಸವಣ್ಯಪ್ಪ, ಸಂಸದ ಡಿ.ಬಿ.ಚಂದ್ರೇಗೌಡರೆಲ್ಲ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಭಾಗವಹಿಸುತ್ತಿದ್ದ ಕಾಲ ಅದು.   ಬಡವರಿಗೆ ಖರೀದಿಸಿದ ಕೋಟ್ಯಾಂತರ ರೂಪಾಯಿ ಔಷದಿ ಕಳಪೆ ಅಂತ ಜಿಲ್ಲಾ ಸರ್ಜನರು ನೀಡಿದ ಗುಪ್ತ ಮಾಹಿತಿ ಹಿಡಿದು ಸಭೆಯಲ್ಲಿ ತನಿಖೆಗೆ ಒತ್ತಾಯಿಸಿದ ಮರುದಿನ ಬಡವರ ಔಷದಿ ವಿದ್ಯುತ್ ಶಾರ್ಟ್ ಸರ್ಕೂಟ್ ನಿಂದ ಭಸ್ಮ ಅಯಿತೆಂಬ ಅಧಿಕಾರಿಗಳ ಪತ್ರಿಕಾ ಹೇಳಿಕೆ ನೋಡಿ ಗೊತ್ತಾಯಿತು ಉದ್ದೇಶ ಪೂರ್ವಕವಾಗಿ ಕಳಪೆ ಔಷದಿ ಸುಟ್ಟಿದ್ದಾರಂತ.   ಈ ಬಗ್ಗೆ ಸಿಓಡಿ ತನಿಖೆಗಾಗಿ ಹಠ ಹಿಡಿದಾಗ ಮುಖ...