ಭಾಗ_9_ಕಾಳುಮೆಣಸಿನ_ರಾಣಿ
#ಚೆನ್ನಬೈರಾದೇವಿ_ಸಮಾದಿ_ಸ್ಥಳ_ಇಲ್ಲಿದೆ.
ರಾಷ್ಟ್ರೀಯ ಸ್ಮಾರಕ ಮಾಡಿ ಸಂರಕ್ಷಣೆ ಮಾಡ ಬೇಕಾದ ಪುರಾತತ್ವ ಇಲಾಖೆ ಮತ್ತು ಸರ್ಕಾರಿ ಸಂಶೋದಕರ ನಿರಾಸಕ್ತಿಯಿಂದ ಅಮೂಲ್ಯವಾದ ರಾಣಿ ಚೆನ್ನ ಬೈರಾದೇವಿ ಸಮಾಧಿ ಶಾಸನ/ ನಿಶಿಧಿ ಶಾಸನ ಒಡೆದು ಕಿತ್ತು ನಿಶಿದಿ ಮಂಟಪದಿಂದ ಹೊರಕ್ಕೆ ಒಗೆಯಲಾಗಿದೆ.
#ಶಿವಮೊಗ್ಗ ಜಿಲ್ಲೆಯ #ಸಾಗರ ತಾಲೂಕಿನ #ಆವಿನಹಳ್ಳಿ ಸಮೀಪದ #ಗೆಣಸಿನಕುಣಿಯ_ಸಿದ್ದೇಶ್ವರ_ದೇವಾಲಯವೇ ಮಹಾ ಮಂಡಲೇಶ್ವರಿ ಚೆನ್ನ ಬೈರಾದೇವಿ ಸಮಾಧಿ ಸ್ಥಳ.
ಅನೇಕ ಊರಲ್ಲಿ ಜೈನ ಸಮಾದಿ ಸ್ಥಳ ನಿಶಿದಿ ಮಂಟಪಗಳು ಸಿದ್ದಪ್ಪ - ಸಿದ್ದೇಶ್ವರ ಗುಡಿಗಳಾಗಿದೆ ಅದಕ್ಕೆ ಕಾರಣ ವಿವರಿಸುವ ಹಿಂದಿನ ನನ್ನ ಪೇಸ್ ಬುಕ್ ಲೇಖನ ಸರಣಿಗಳಲ್ಲಿ ನೋಡಿದ್ದೀರಿ.
ಗೆಣಸಿನಕುಣಿಯ ಸಿದ್ದೇಶ್ವರ ದೇವಾಲಯದಲ್ಲಿ ಇರುವ ಮೂಲ ರಾಣಿ ಚೆನ್ನ ಬೈರಾದೇವಿ ಸಮಾಧಿ ಪೀಠದ ಮೇಲೆ ಇನ್ನೊಂದು ಶಿವಲಿಂಗದ ಪೀಠ ಇಟ್ಟು ಅದರ ಮೇಲೆ ಲಿಂಗ ಪ್ರತಿಷ್ಠಾಪನೆ ಮಾಡಲಾಗಿದೆ.
ಇಕ್ಕೇರಿ ಕೋಟೆಯಲ್ಲಿ ಕೆಳದಿ ರಾಜ ವೆಂಕಟಪ್ಪ ನಾಯಕರ ಬಂದನದಲ್ಲಿದ್ದ ಗೇರುಸೊಪ್ಪೆಯ ಸಾಳ್ವ ವಂಶದ ಪೋರ್ಚುಗೀಸರಿಂದ ಕಾಳು ಮೆಣಸಿನ ಬಿರುದು ಪಡೆದ ರಾಣಿ ಚೆನ್ನ ಬೈರಾದೇವಿ 10 ಅಕ್ಟೋಬರ್ 1608 ರಲ್ಲಿ ಸಲ್ಲೇಖನ ವೃತ ಕೈಗೊಂಡು ಇಹಲೋಕ ತ್ಯಜಿಸಿದರು.
ಅವರ ಅಂತ್ಯಕ್ರಿಯೆ ಅವಿನಹಳ್ಳಿ ಸಮೀಪದ ಗೆಣಸಿನಕುಣಿಯಲ್ಲಿ ನೆರವೇರಿಸಿ ಅಲ್ಲಿ ಸಮಾದಿ ಮಾಡಿ ಸಮಾದಿ ಸ್ಥಳದ ಮೇಲೆ ನಿಶಿದಿ ಪೀಠ ಸ್ಥಾಪಿಸಿ ಅದರ ಹಿಂಬಾಗದಲ್ಲಿ ನಿಶಿದಿ ಶಾಸನ ನಿಲ್ಲಿಸಿ ಅದರ ಮೇಲೆ ಗೋಪುರದ ಮಂಟಪವಾದ ನಿಶಿದಿ ಮಂಟಪ ನಿರ್ಮಿಸಿದ್ದರು.
ಈ ಸಮಾದಿ ಮಂದಿರವನ್ನು ಜೈನ ಸಮಾಜದಲ್ಲಿ ನಿಶಿದಿ ಮಂಟಪ ಎನ್ನುತ್ತಾರೆ.
ಕಾಲಾಂತರದಲ್ಲಿ ಕೆಳದಿ ರಾಜರ ರಾಜಧಾನಿ ಇಕ್ಕೇರಿಯಿಂದ ಬಿದನೂರು ನಗರಕ್ಕೆ ಸ್ಥಳಾಂತರವಾದಾಗ ಇಲ್ಲಿನ ಪ್ರದೇಶ ಜನ ನಿಬಿಡ ಪ್ರದೇಶವಾಗಿ ಕಾಡಾಯಿತು.
ಇಲ್ಲಿನ ಸ್ಥಳೀಯ ಜೈನರೂ ವಲಸೆ ಹೋಗಿದ್ದರಿಂದ ರಾಣಿ ಚೆನ್ನ ಬೈರಾದೇವಿ ಸುಮಾದಿ ಎಂಬ ಮಾಹಿತಿ ಹೇಳುವವರು ಸ್ಥಳದಲ್ಲಿ ಯಾರೂ ಉಳಿದಿರಲಿಲ್ಲ.
ಸುಮಾರು 250 ವರ್ಷಗಳ ನಂತರ ಒಂದು ಅಂದಾಜಿನಂತೆ 1950 ರ ನಂತರ ಪುನಃ ಜನ ಸಂಚಾರ ಜನವಸತಿಗಳು ಈ ಪ್ರದೇಶದಲ್ಲಿ ಪ್ರಾರಂಭವಾದ ನಂತರ ಈ ಸಮಾದಿ ಮಂದಿರವನ್ನು ಸ್ಥಳೀಯರು ಸಿದ್ದೇಶ್ವರ ದೇವರ ಗುಡಿ ಎಂದು ಸ್ವಾಭಾವಿಕವಾಗಿ ತಮ್ಮ ಅಜ್ಞಾನದಿಂದ ಆರಾದಿಸಲು ಪ್ರಾರಂಭಿಸಿದರು.
ಈ ಸಮಾದಿಯಲ್ಲಿ ನಿಶಿದಿ ಫೀಠದ ಮೇಲಿನ ಶಿಲಾ ಪಾದುಕೆಗಳನ್ನು ನೋಡಿದ ಜನ ಇದು ಸಿದ್ದರ ಗುಡಿ ಅಥವ ಸಿದ್ದೇಶ್ವರರ ಗುಡಿ ಎಂದು ಕರೆದರು.
1800 ರಲ್ಲಿ ಅನೇಕ ಸಂಶೋಧಕರು ರಾಣಿ ಚೆನ್ನ ಬೈರಾದೇವಿ ಸಮಾಧಿ ಸ್ಥಳವಾದ ಈ ನಿಶಿದಿ ಮಂಟಪಕ್ಕೆ ಬೇಟಿ ಮಾಡಿ ಅಲ್ಲಿನ ನಿಶಿದಿ ಶಾಸನವನ್ನ ದಾಖಲಿಸಿದ್ದಾರೆ ಅದೆಲ್ಲ ದಾಖಲೆಗಳು ಲಭ್ಯವಿದೆ.
#ಕರ್ನಲ್_ಕಾಲಿನ್_ಮೆಕೆಂಜೆ, #ಡಾ_ಪ್ರಾನ್ಸಿಸ್_ಬುಕ್ಯಾನಿನ್ ಮತ್ತು ಮೈಸೂರು ರಾಜ್ಯದ ಆರ್ಕಾಲಾಜಿಕಲ್ ಡೈರೆಕ್ಟರ್ #ಬಿ_ಎಲ್_ರೈಸ್ ಇದರಲ್ಲಿ ಪ್ರಮುಖರು.
ಇತ್ತೀಚಿಗೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ #ವಿರೇಂದ್ರಹೆಗ್ಗಡೆಯವರು ಸ್ಥಳೀಯರ ಮನವಿಗೆ ಸುಮಾರು ಐದು ಲಕ್ಷ ರೂಪಾಯಿ ಹಣ ನೀಡಿದರು ಇದರಿಂದ ಜೈನರ ರಾಣಿ ಚೆನ್ನ ಬೈರಾದೇವಿ ಸಮಾದಿ ಸಿದ್ದೇಶ್ವರ ದೇವಾಲಯವಾಗಿ ಪುನಃ ನವೀಕರಣಗೊಂಡಿದೆ.
ಈಗ ರಾಣಿ ಚೆನ್ನ ಬೈರಾದೇವಿ ಮೇಲೆ ಸಿನಿಮಾ ಮಾಡಲು ಮುಂದಾಗಿರುವ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಗೆ ಇದು ರಾಣಿ ಚೆನ್ನ ಬೈರಾದೇವಿ ಸಮಾಧಿಯಾದ ನಿಶಿದಿ ಮಂಟಪ ಎಂದು ತಡವಾಗಿ ಗೊತ್ತಾಗಿದೆ.
ನಿಶಿದಿ ಮಂಟಪ ಶಿಲಾ ಸ್ಥಂಬಗಳ ಮೇಲೆ ನಿರ್ಮಿಸಿ ಹಿಂಬಾಗದಲ್ಲಿ ಮಾತ್ರ ಗೋಡೆ ನಿರ್ಮಿಸಿ ಮೂರು ಬಾಗದಿಂದ ಪಾದುಕೆ ಪೀಠ ಮತ್ತು ಅದರ ಹಿಂಬಾಗದಲ್ಲಿ ಪೀಠ ಮತ್ತು ಗೋಡೆ ಮಧ್ಯ ನಿಲ್ಲಿಸಿದ್ದ ನಿಶಿದಿ ಶಾಸನ ವೀಕ್ಷಿಸಲು ಮೂರು ಭಾಗ ತೆರೆದ ಸ್ಥಳವಾಗಿಸಿರುತ್ತಾರೆ.
ಜೈನ ರಾಣಿಯ ಈ ಸಮಾದಿ ಮಂದಿರ ಕೂಡ ಮೊದಲು ಹಾಗೆ ಇತ್ತು ಆದರೆ ಸಿದ್ದೇಶ್ವರ ಗುಡಿ ಆಗಿ ಪರಿವರ್ತನೆ ಮಾಡಲು ಇಲ್ಲಿ ಗರ್ಭಗುಡಿ ಮತ್ತು ಬಾಗಿಲು ನಿಮಿ೯ಸಲು ಸುತ್ತಲು ಗೋಡೆ ನಿರ್ಮಿಸಿ ಬಾಗಿಲು ಅಳವಡಿಸುವಾಗ ಒಳಗೆ
ಪಾದುಕೆ ಪೀಠದ ಹಿಂಬಾಗದಲ್ಲಿ ನಿಲ್ಲಿಸಿದ್ದ ರಾಣಿ ಚೆನ್ನ ಬೈರಾದೇವಿ ನಿಶಿಧಿ ಶಾಸನವನ್ನ ಕಿತ್ತು ಹೊರ ಹಾಕಲಾಗಿದೆ.
ಈಗಿನ ಗರ್ಭಗುಡಿ ಗೋಡೆ ನಿರ್ಮಿಸಿದರೂ ಒಳಗೆ ಇರುವ ನಿಶಿದಿ ಮಂಟಪದ ನಾಲ್ಕು #ಶಿಲಾ_ಸ್ಥಂಭಗಳು ರಾಣಿ ಚೆನ್ನ ಬೈರಾದೇವಿ ಮೂಲ ಸಮಾದಿ ಮಂಟಪದ ಕಥೆ ಹೇಳುತ್ತದೆ.
ನಿಶಿದಿ ಶಾಸನ ಕೀಳುವಾಗ ಉದ್ದೇಶ ಪೂರ್ವಕವಾಗಿಯೋ ಅಥವ ಅಚಾತುರ್ಯದಿಂದಲೋ ರಾಣಿ ಚೆನ್ನ ಬೈರಾದೇವಿ ನಿಶಿಧಿ ಶಾಸನ ಕೆಲವು ತುಂಡುಗಳಾಗಿದೆ, ಇದು ಈಗಲೂ ಈ ಮಂದಿರದ ಹೊರ ಆವರಣದಲ್ಲಿ ಕೆಲವು ತುಂಡಾಗಿರುವ ಶಿಲಾಫಲಕಗಳು ಮಣ್ಣಾಗಿದೆ ಹುಡುಕಿದರೆ ಸಿಗುತ್ತದೆ.
ನಮ್ಮ ದೇಶದಲ್ಲಿ ಮಾತ್ರವಲ್ಲ ಯುರೋಪಿನ ದೇಶದಲ್ಲೂ ಪ್ರಖ್ಯಾತಳಾಗಿದ್ದ ಗೇರುಸೊಪ್ಪೆಯ ಜೈನ ರಾಣಿ ಚೆನ್ನ ಬೈರಾದೇವಿ ಸಮಾಧಿಯ ದಾಖಲೆ ಹೇಳುವ ನಿಶಿಧಿ ಶಾಸನ ಈ ರೀತಿ ತುಂಡರಿಸಿ ಅವಶೇಷ ಮಾಡಿರುವುದು ಯಾರೇ ಮಾಡಿದ್ದರು ಅದು ಕಾನೂನಿಗೆ ಮತ್ತು ಇತಿಹಾಸಕ್ಕೆ ಅವರು ಮಾಡಿರುವ ದೊಡ್ಡ ಅಪರಾದವೇ ಆಗಿದೆ.
ನಿಶಿಧಿ ಶಾಸನದ ಮೇಲಿನ ಕನ್ನಡದ ಬರಹ ಓದಲಾಗದ ಅನಕ್ಷರಸ್ಥರಲ್ಲ ಈ ಜನ, ಕನಿಷ್ಟ ರಾಣಿ ಚೆನ್ನ ಬೈರಾದೇವಿ ನಿಶಿದಿ ಶಾಸನವನ್ನ ಜೋಪಾನವಾಗಿ ಹೊರಗೆ ಇಡಬಹುದಿತ್ತು ಆದರೆ ಸಾಕ್ಷಿ ನಾಶಕ್ಕಾಗಿಯೇ ಒಡೆದಿರಬಹುದಾ ಎಂಬ ಅನುಮಾನ ಕೆಲವರು ವ್ಯಕ್ತಪಡಿಸುತ್ತಾರೆ.
ಈ ಸಿದ್ದೇಶ್ವರ ಗುಡಿಯ ಈಶ್ವರನ ಲಿಂಗ ಮತ್ತು ಅದರ ಪೀಠ ಇರಿಸಿದ ಕೆಳಗೆ ಇನ್ನೊಂದು ಕೆಲವು ಶತಮಾನಗಳ ಹಿಂದಿನ #ಪುರಾತನ_ಪೀಠ ಇದೆ ನೋಡಿ (ಇದರ ಪೋಟೋ ಕೂಡ ಹಾಕಿದ್ದೇನೆ ನೋಡಿ).
ಶಿವಲಿಂಗದ ಪೀಠದ ಕಲ್ಲಿಗೂ ಅದರ ಕೆಳಗಿನ ಪುರಾತನ ಶಿಲಾ ಪೀಠದ ಕಲ್ಲುಗಳು ಬೇರೆ ಬೇರೆ ಅಂತ ನೋಡಿದ ತಕ್ಷಣ ನೀವು ತಿಳಿಯಬಹುದು.
ಪುರಾತನ ಜೈನ ಸಮಾದಿ ಪಾದುಕೆಯ ಶಿಲಾ ಪೀಠದ ಎದುರು ಭಾಗದಲ್ಲಿ ನಾಲ್ಕು ದಳಗಳುಳ್ಳ ಹೂವಿನ ಆಕೃತಿಯನ್ನು ಹೋಲುವ #ಶ್ರೀವತ್ಸ ಎಂಬ ಮಂಗಳಕರ ಲಾಂಛನ ಕೆತ್ತಿರುತ್ತಾರೆ ಅದು ಇಲ್ಲಿನ ಪೀಠದ ಎದುರು ಭಾಗದಲ್ಲೇ ಇದೆ ಅದನ್ನು ನೀವು ನೋಡಬಹುದು ಆದರೆ ಅದನ್ನು ಮರೆ ಮಾಚುವಂತೆ ಕಾಣದಂತೆ ಚಿಕ್ಕ ಉತ್ಸವ ಮೂರ್ತಿ ಅದಕ್ಕೆಅಡ್ಡವಾಗಿ ಇಟ್ಟಿರುತ್ತಾರೆ.
ಕರಾವಳಿ ಮತ್ತು ಮಲೆನಾಡಿನ ನಿಷಿದಿ ಪೀಠಗಳ ಮುಂಭಾಗದಲ್ಲಿ ಈ ರೀತಿ ಸರಳವಾದ ನಾಲ್ಕು ದಳದ ಹೂವಿನ ಜ್ಯಾಮಿತೀಯ ಆಕೃತಿಯಲ್ಲಿ ಶ್ರೀವತ್ಸ ಕೆತ್ತಿರುತ್ತಾರೆ.
ಇಂತಹ ನಿಶಿದಿ ಪೀಠ ಸಲ್ಲೇಖನ ವೃತದಲ್ಲಿ ಸಮಾದಿ ಆದ ಜೈನ ಧರ್ಮದ ಮುನಿಗಳು, ರಾಜರುಗಳ ಅಥವ ರಾಣಿಯ ಸಮಾದಿ ಮೇಲೆ ಇರಿಸಲಾಗುತ್ತದೆ.
ಈ ಪೀಠದ ಸುತ್ತ ಶಿಲಾ ಕಂಬಗಳನ್ನ ನಿಲ್ಲಿಸಿ ಅದರ ಮೇಲೆ ಕಲ್ಲಿನ ಮೇಲು ಚಾವಣೆ ನಿರ್ಮಿಸಿ ಮೊದಲ ಅಂತಸ್ತಿನಲ್ಲಿ ಜೈನ ಧರ್ಮದ ಮುನಿ ಮಹಾರಾಜರು ದ್ಯಾನ ಮಾಡಲು ಅತ್ಯಂತ ಚಿಕ್ಕದಾದ ಒಂದು ದ್ಯಾನದ ಕೋಣೆ ನಿರ್ಮಿಸಿ ಅದರ ಮೇಲೆ ಬೆಸ ಸಂಖ್ಯೆಯ ಪಾವಟಿಯ ಶಿಖರ ಗೋಪುರ ನಿರ್ಮಾಣ ಮಾಡಿರುತ್ತಾರೆ.
ಗೆಣಸಿನ ಕುಣಿಯ ಸಿದ್ದೇಶ್ವರ ಗುಡಿಯಲ್ಲಿ ಮೇಲೆ ತಿಳಿಸಿದ ಎಲ್ಲಾ ಜೈನ ಧರ್ಮದ ಸಮಾದಿಯ ವಾಸ್ತು ಶಿಲ್ಪದ ಗುರುತುಗಳು ಇದೆ ಅದನ್ನು ಈಗಲೂ ನೀವು ಅಲ್ಲಿಗೆ ಹೋದರೆ ನೋಡಬಹುದು.
ಕಾಲಾಂತರದಲ್ಲಿ ಸ್ಥಳೀಯ ಜೈನರು ವಲಸೆ ಹೋದಾಗ ಅಥವ ಬೇರಾವುದೋ ಕಾರಣದಿಂದ ಆ ಪ್ರದೇಶ ಪಾಳು ಬಿದ್ದಾಗ ಇದು ಹಿಂದೂ ದೇವಾಲಯವಲ್ಲ ಜೈನ ಮುನಿಗಳ ಸಲ್ಲೇಖನ ವೃತದಲ್ಲಿ ಮೃತರಾದವರಿಗೆ ನಿರ್ಮಿಸಿದ ಸುಮಾದಿ ಮಂಟಪ ಎಂದು ಹೇಳಲು ಆ ಪ್ರದೇಶದಲ್ಲಿ ಯಾರೂ ಉಳಿದಿರಲಿಲ್ಲ.
ಕೆಳದಿ ಅರಸರ ರಾಜಧಾನಿ ಆಗಿದ್ದ ಇಕ್ಕೇರಿ ಬಿದನೂರಿಗೆ ಸ್ಥಳಾಂತರವಾದಾಗ ಈ ಪ್ರದೇಶ ಕೂಡ ಸಂಪೂರ್ಣ ನಿರ್ಜನವಾಯಿತು.
ಕೆಳದಿ ಸಂಸ್ಥಾನದ ರಾಜಧಾನಿ ಇಕ್ಕೇರಿಯಿಂದ ಬಿದನೂರಿಗೆ ಪ್ರಸ್ತುತ ನಗರಕ್ಕೆ ಬದಲಾದ ವರ್ಷ 1639 ಇದಕ್ಕೆ ಮುಖ್ಯ ಕಾರಣ ರಕ್ಷಣಾತ್ಮಕ ಮತ್ತು ಭೌಗೋಳಿಕ ಸುರಕ್ಷತೆ.
ಇಕ್ಕೇರಿಯು ಮೈದಾನ ಪ್ರದೇಶಕ್ಕೆ ಹತ್ತಿರದಲ್ಲಿದ್ದು, ಶತ್ರುಗಳ ದಾಳಿಗೆ ಸುಲಭವಾಗಿ ತುತ್ತಾಗುವ ಸಾಧ್ಯತೆಯಿತ್ತು.
ಬಿದನೂರು ದಟ್ಟವಾದ ಮಲೆನಾಡಿನ ಅರಣ್ಯ ಮತ್ತು ಬೆಟ್ಟಗುಡ್ಡಗಳಿಂದ ಆವೃತವಾಗಿದ್ದರಿಂದ ಸೈನ್ಯದ ರಕ್ಷಣೆಗೆ ಮತ್ತು ಶತ್ರುಗಳನ್ನು ತಡೆಯಲು ಬಿದನೂರು ಅತ್ಯಂತ ಸುರಕ್ಷಿತವಾದ ಸ್ಥಳವಾಗಿತ್ತು.
ಅಂದಿನ ಕೆಳದಿಯ ಅರಸರಾದ ವೀರಭದ್ರ ನಾಯಕರು ಆಳುತ್ತಿದ್ದ ಸಮಯದಲ್ಲಿ ಬಿಜಾಪುರದ ಸುಲ್ತಾನರ ದಂಡನಾಯಕ #ರಣದುಲ್ಲಾ_ಖಾನ್ ಇಕ್ಕೇರಿಯ ಮೇಲೆ ದಂಡೆತ್ತಿ ಬಂದನು ಈ ಯುದ್ಧದಲ್ಲಿ ಇಕ್ಕೇರಿಗೆ ಹೆಚ್ಚಿನ ಹಾನಿಯಾಯಿತು.
ಭವಿಷ್ಯದಲ್ಲಿ ಇಂತಹ ದಾಳಿಗಳಿಂದ ರಾಜ್ಯವನ್ನು ಕಾಪಾಡಿಕೊಳ್ಳಲು ರಾಜಧಾನಿಯನ್ನು ಈ ಕಾರಣದಿಂದ ಹೆಚ್ಚು ಸುರಕ್ಷಿತವಾದ #ಬಿದನೂರಿಗೆ ಸ್ಥಳಾಂತರಿಸಲಾಯಿತು.
ತದನಂತರ ಈ ಬಿದನೂರು ನಗರವು ಕೆಳದಿ ನಾಯಕರ ಪ್ರಮುಖ ಸಾಂಸ್ಕೃತಿಕ ಮತ್ತು ಆಡಳಿತ ಕೇಂದ್ರವಾಗಿ ಬೆಳೆಯಿತು ಹಳೆಯ ರಾಜಧಾನಿ #ಇಕ್ಕೇರಿ ಪ್ರದೇಶ ಸುಮಾರು ಮುನ್ನೂರು ವರ್ಷ ಅಂದರೆ 1639 ರಿಂದ 1950ರ ವರೆಗೆ ಸಂಪೂರ್ಣವಾಗಿ ಜನನಿಭಿಡ ಪ್ರದೇಶವಾಗಿ ದಟ್ಟ ಅರಣ್ಯವಾಗಿ ಹಾಳಾಯಿತು.
1950 ರ ನಂತರ ಪುನಃ ಈ ಪ್ರದೇಶದಲ್ಲಿ ಜನ ಸಂಚಾರ ವಾಸ್ತವ್ಯ ಪ್ರಾರಂಭ ಆದಾಗ ಈ ಸಮಾದಿ ಮಂದಿರ ಜ್ಞಾನದ ಕೊರತೆಯಿಂದ ಸಿದ್ದರ ಅಥವ ಸಿದ್ದೇಶ್ವರ ದೇವಸ್ಥಾನವಾಗಿ ಪರಿವರ್ತನೆ ಆಗಿದೆ.
ಜೈನ ಸಮಾದಿಯ ನಿಶಿದಿ ಪೀಠದ ಮೇಲೆ ಶಿವಲಿಂಗ ದೇವರ ಮೂರ್ತಿ ಸ್ಥಾಪಿಸಿ ಸ್ಥಳೀಯರು ಪೂಜೆ ಪ್ರಾರಂಬಿಸಿರುತ್ತಾರೆ.
ಈ ರೀತಿ ಸಮಾದಿ ಮೇಲೆ ಹಿಂದೂ ದೇವರ ಪ್ರತಿಷ್ಠಾಪನೆ ಮತ್ತು ಪೂಜೆಗೆ ಹಿಂದೂ ಧರ್ಮದ ಅಗಮ ಶಾಸ್ತ್ರದಲ್ಲಿ ನಿಶೇದವಿದೆ.
ಜೈನ ಸಮಾದಿ ಪೀಠದ ಕಲ್ಲಿನ ಮುಂಬಾಗದಲ್ಲಿ ಶ್ರೀವತ್ಸ ಚಿಹ್ನೆ ಅಂದರೆ ನಾಲ್ಕು ದಳಗಳುಳ್ಳ ಹೂವಿನ ಚಿಹ್ನೆ ಇರುತ್ತದೆ ಅದರ ಮೇಲೆಯೇ ಈಶ್ವರ ಲಿಂಗ ಮತ್ತು ಅದರ ಪೀಠ ಸ್ಥಾಪನೆ ಮಾಡಿರುತ್ತಾರೆ ಇದರಿಂದಲೇ ಇದು ಜೈನರ ಸಮಾದಿ ಎಂದು ತಿಳಿದು ಬರುತ್ತದೆ.
ಈ ಪೀಠದ ಮೇಲುಭಾಗದಲ್ಲಿ ಪಾದಗಳ ಕೆತ್ತನೆ ಮಾಡಿರುತ್ತಾರೆ ಮತ್ತು ಈ ಪೀಠದ ಹಿಂಬಾಗದಲ್ಲಿ ನಿಶಿಧಿ ಶಾಸನದ ಕಲ್ಲು ಅಂದರೆ ಅದರಲ್ಲಿ ಸಲ್ಲೇಖನ ವೃತದಿಂದ ಸಮಾದಿ ಆದವರ ವಿವರ ಮತ್ತು ಚಿತ್ರಗಳನ್ನ ಶಿಲೆಯಲ್ಲಿ ಕೆತ್ತಿರುವುದನ್ನು ನಿಲ್ಲಿಸಿರುತ್ತಾರೆ.
ನಿಷಿದಿ ಪಾದ ಕೆತ್ತಿದ ಪೀಠದ ಮುಂಬಾಗದಲ್ಲಿ ಸಾಮಾನ್ಯವಾಗಿ ಪದ್ಮ (ಕಮಲದ ಹೂವು) ಅಥವಾ ಶ್ರೀವತ್ಸ ಹೂವಿನ ಆಕೃತಿಯನ್ನು ಕಾಣಬಹುದು.
ಶ್ರೀವತ್ಸ ಎಂಬುದು ಜೈನ ಧರ್ಮದಲ್ಲಿ ಅತ್ಯಂತ ಪವಿತ್ರ ಮತ್ತು ಪ್ರಾಚೀನವಾದ ಎಂಟು ಮಂಗಳಕರ ಚಿಹ್ನೆಗಳಲ್ಲಿ (ಅಷ್ಟಮಂಗಲಗಳಲ್ಲಿ) ಒಂದಾಗಿದೆ.
ನಿಷಿದಿ ಕಲ್ಲುಗಳಲ್ಲಿ ಮತ್ತು ತೀರ್ಥಂಕರರ ವಿಗ್ರಹಗಳಲ್ಲಿ ಇದನ್ನು ವಿಶೇಷವಾಗಿ ಕೆತ್ತಲಾಗಿರುತ್ತದೆ.
ಜೈನ ಧರ್ಮದ ಅಧಿಕೃತ ಲಾಂಛನದಲ್ಲಿಯೂ ಸಹ ಮೇಲ್ಭಾಗದಲ್ಲಿ ಮೂರು ಚುಕ್ಕೆಗಳ ಕೆಳಗೆ ಈ ಚಿಹ್ನೆಯ ರೂಪವನ್ನು ನಾವು ಗಮನಿಸಬಹುದು.
ಜೈನ ತೀರ್ಥಂಕರರ (ವಿಶೇಷವಾಗಿ ದಿಗಂಬರ ಸಂಪ್ರದಾಯದ) ಮೂರ್ತಿಗಳ ಎದೆಯ ಮಧ್ಯಭಾಗದಲ್ಲಿ ಒಂದು ವಿಶಿಷ್ಟವಾದ ಹೂವು ಅಥವಾ ಗಂಟಿನ ಆಕೃತಿಯ ಚಿಹ್ನೆ ಇರುತ್ತದೆ.
ಅದನ್ನೇ 'ಶ್ರೀವತ್ಸ' ಎನ್ನಲಾಗುತ್ತದೆ ಇದು ತೀರ್ಥಂಕರರನ್ನು ಸಾಮಾನ್ಯ ಮಾನವ ಮೂರ್ತಿಗಳಿಂದ ಪ್ರತ್ಯೇಕಿಸಲು ಇರುವ ಪ್ರಮುಖ ಗುರುತು.
ಇದು ನೋಡಲು ನಾಲ್ಕು ದಳಗಳುಳ್ಳ ಹೂವು, ಅನಂತ ಗಂಟು ಅಥವಾ ಸ್ವಸ್ತಿಕದ ಒಂದು ರೂಪದಂತೆ ಕಾಣುತ್ತದೆ.
'ಶ್ರೀ' ಎಂದರೆ ಲಕ್ಷ್ಮಿ ಅಥವಾ ಜ್ಞಾನದ ಸಂಪತ್ತು, 'ವತ್ಸ' ಎಂದರೆ ಪ್ರೀತಿಯ ಮಗು ಅಥವಾ ವಾಸಸ್ಥಾನ ಅಂದರೆ ಕೇವಲಜ್ಞಾನ (ಅನಂತ ಜ್ಞಾನ) ನೆಲೆಸಿರುವ ಜಾಗ ಎಂದು ಅರ್ಥ.
ಇದು ಲೌಕಿಕ ಆಸೆಗಳನ್ನು ಗೆದ್ದು, ಸಂಪೂರ್ಣ ವೈರಾಗ್ಯ ತಳೆದು, ಆತ್ಮಶುದ್ಧಿ ಸಾಧಿಸಿದ ಜೀವದ ಸಂಕೇತವಾಗಿದೆ.
ನಿಷಿದಿ ಪೀಠದ ಎದುರು ಭಾಗದಲ್ಲಿ ಇದನ್ನು ಕೆತ್ತಲು ಕಾರಣ ಇಲ್ಲಿ ಸಮಾಧಿ ಹೊಂದಿದ ಮುನಿಯು ಜಿನರ ಮಾರ್ಗವನ್ನು ಅನುಸರಿಸಿ ಭವಬಂಧನಗಳಿಂದ ಮುಕ್ತನಾಗಿದ್ದಾನೆ ಎಂಬುದನ್ನು ಸಾರುವುದಕ್ಕಾಗಿ.
ಜೈನ ನಿಷಿದಿ ಪಾದುಕೆ ಪೀಠದ ಎದುರು ಭಾಗದಲ್ಲಿ (ಅಥವಾ ಪಾದದ ಗುರುತುಗಳ ಮಧ್ಯೆ/ಸುತ್ತಲೂ) ಮುಖ್ಯವಾಗಿ ತಾವರೆ ಹೂವಿನ (ಕಮಲ) ಚಿತ್ರವನ್ನು ಕೆತ್ತಲಾಗಿರುತ್ತದೆ.
ಜೈನ ಧರ್ಮದ ಸಾಂಪ್ರದಾಯಿಕ ಮತ್ತು ಶಾಸನಗಳ ಹಿನ್ನೆಲೆಯಲ್ಲಿ ಈ ಕೆಳಗಿನ ವಿವರಗಳನ್ನು ಗಮನಿಸಬಹುದು.
ಪದ್ಮ (ತಾವರೆ ಹೂವು) ಜೈನ ಧರ್ಮದಲ್ಲಿ ತಾವರೆ ಹೂವನ್ನು ಅತ್ಯಂತ ಪವಿತ್ರ ಮತ್ತು ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ.
ಪೀಠದ ಮುಂಭಾಗದಲ್ಲಿ ಅಥವಾ ಪಾದುಕೆಗಳ ಕೆಳಗೆ ಅರಳಿದ ತಾವರೆ ಹೂವಿನ ಕೆತ್ತನೆ ಇರುತ್ತದೆ ಇದು ಲೌಕಿಕ ಪ್ರಪಂಚದ ಮೋಹ-ಮಾಯೆಗಳಿಂದ ದೂರವಿದ್ದು, ಆಧ್ಯಾತ್ಮಿಕವಾಗಿ ಪರಿಶುದ್ಧತೆಯನ್ನು ಕಾಯ್ದುಕೊಂಡು ಮುಕ್ತಿ ಹೊಂದಿದ್ದನ್ನು ಪ್ರತಿನಿಧಿಸುತ್ತದೆ.
#ಶ್ರೀವತ್ಸ_ಸಂಕೇತ ಎಂದರೆ ಕೆಲವು ನಿಷಿದಿ ಪೀಠಗಳಲ್ಲಿ ನಾಲ್ಕು ದಳಗಳುಳ್ಳ ಹೂವಿನ ಆಕೃತಿಯನ್ನು ಹೋಲುವ 'ಶ್ರೀವತ್ಸ' ಎಂಬ ಮಂಗಳಕರ ಲಾಂಛನವನ್ನು ಕೆತ್ತಿರುತ್ತಾರೆ ಇದು ಈ ದೇವಾಲಯದ ಪೀಠದಲ್ಲಿ ಈಗಲೂ ನೋಡ ಬಹುದು.
ಇದು ಅರಿಹಂತರ ಅಥವಾ ತೀರ್ಥಂಕರರ ಎದೆಯ ಮೇಲಿರುವ ಪವಿತ್ರ ಚಿಹ್ನೆಯಾಗಿದ್ದು, ಜೀವಿಯು ಜನ್ಮ-ಮರಣಗಳ ಚಕ್ರದಿಂದ ಮುಕ್ತನಾಗಿ 'ಮುಕ್ತಿ' ಅಥವಾ ಸಾಲ್ವೇಶನ್ ಪಡೆದಿದ್ದಾನೆ ಎಂಬುದನ್ನು ಸೂಚಿಸುತ್ತದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅವಿನಹಳ್ಳಿ ಸಮೀಪದ ಗೆಣಸಿನಕುಣಿಯಲ್ಲಿ ನಿತ್ಯ ಪೂಜಿಸಲ್ಪಡುತ್ತಿರುವ ಸಿದ್ದೇಶ್ವರ ದೇವಾಲಯವೇ ಇತಿಹಾಸ ಪ್ರಸಿದ್ಧ ಗೇರುಸೊಪ್ಪೆಯ ಜೈನ ರಾಣಿ ಕಾಳು ಮೆಣಸಿನ ರಾಣಿ ಎಂದು ಪೋರ್ಚುಗೀಸರಿಂದ ಬಿರುದಾಂಕಿತ ಮಹಾ ಮಂಡಲೇಶ್ವರಿ ರಾಣಿ ಚೆನ್ನ ಬೈರಾದೇವಿ ಸಮಾಧಿ ಮಂಟಪ ಆಗಿದೆ.
ನಾನು 2016ರಲ್ಲಿ ಕೆಲ ಇತಿಹಾಸ ಸಂಶೋದಕರ ಜೊತೆ ಸಾಗರ ತಾಲೂಕಿನ ರೈತ ಮುಖಂಡರ ಜೊತೆ ಎರೆಡು ಬಾರಿ ಈ ಸ್ಥಳಕ್ಕೆ ಹೋಗಿದ್ದೆ.
ಈಗ ರಾಣಿ ಚೆನ್ನ ಬೈರಾದೇವಿ ಸಿನೆಮಾ ಖ್ಯಾತ ನಿರ್ದೇಶಕ #ರಾಜೇಂದ್ರ_ಸಿಂಗ್_ಬಾಬು ನಿರ್ದೇಶನದಲ್ಲಿ ಚಿತ್ರಿಕರಣ ಮಾಡುತ್ತಾರೆಂದಾಗ ಈ ವಿಚಾರ ಮುನ್ನಲೆಗೆ ಬಂದಿದೆ.
ಕಳೆದ ವರ್ಷ 2025 ರಲ್ಲಿ ನಾನು ಈ ಸ್ಥಳವೇ ರಾಣಿ ಚೆನ್ನ ಬೈರಾದೇವಿ ಸಮಾಧಿ ಎಂದು ಘೋಷಣೆ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿದ್ದೆ.
ರಾಣಿ ಚೆನ್ನ ಬೈರಾದೇವಿ ಇತಿಹಾಸ ಪ್ರಸಿದ್ಧ ಜೈನರ ರಾಣಿ ಆಗಿರುವುದರಿಂದ ಅವರ ಸಮಾದಿ ಸ್ಥಳ ರಾಷ್ಟ್ರೀಯ ಸ್ಮಾರಕ ಮಾಡಬೇಕು ಇಲ್ಲಿ #ಸಾಳ್ಟ_ವಂಶದ_ಹಿಸ್ಟೋರಿಕಲ್_ಥೀಮ್_ಪಾರ್ಕ್ ಮತ್ತು ಸಂಶೋಧನ ಕೇಂದ್ರಗಳನ್ನ ನಿರ್ಮಿಸ ಬೇಕು ಈ ಮೂಲಕ ಈ ಸ್ಥಳ ನಮ್ಮ ಜಿಲ್ಲೆಯ ಪ್ರವಾಸೋದ್ಯಮ ತಾಣವಾಗಬೇಕು.
ಸ್ಥಳೀಯರ ಭಾವನೆಗೆ ಗೌರವಿಸಿ ಅವರ ಆರಾದನೆಗೆ ಪ್ರತ್ಯೇಕ ಭವ್ಯವಾದ ಸಿದ್ದೇಶ್ವರ ದೇವಾಲಯ ನಿರ್ಮಿಸಿ ಕೊಡುವ ಕೆಲಸವನ್ನೂ ಮಾಡಬೇಕು ಈ ಮೂಲಕ ಸ್ಥಳೀಯರ ಬಾವನೆಗಳಿಗೆ ಗೌರವಿಸಬೇಕು.
ಅಪೂರ್ವವಾದ ರಾಣಿ ಚೆನ್ನ ಬೈರಾದೇವಿ ವಿಶಿಧಿ ಶಾಸನದ ಕಲ್ಲು ಕಿತ್ತಿದ ಮತ್ತು ತುಂಡರಿಸಿದ ನಿಜ ಕಥೆ ದೀಘ೯ವಾಗಿದೆ ಅದನ್ನು ಪ್ರತ್ಯಕ್ಷ ಸಾಕ್ಷಿಗಳು ಹೇಳಿದ್ದರೂ ಪುನಃ ಅದನ್ನು ಇಲ್ಲಿ ಉಲ್ಲೇಖಿಸಲು ನನಗೆ ಇಷ್ಟವಿಲ್ಲ.
ರಾಣಿ ಚೆನ್ನ ಬೈರಾದೇವಿ ನಿಶಿದಿ ಮಂಟಪ ಸ್ಥಳ ಪರಿಶೀಲನೆ ಮಾಡಿ ರಾಷ್ಟ್ರೀಯ ಸ್ಮಾರಕ ಮಾಡಲು ಧರ್ಮಸ್ಥಳ ವೀರೇಂದ್ರ ಹೆಗ್ಗಡೆ, ಹುಂಚದ ಜೈನ ಮಠದ ಸ್ವಾಮೀಜಿಗಳು, ಶ್ರವಣ ಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳು, ಸೊಂದದ ಅಕಲಂಕ ಜೈನ ಮುನಿಗಳು, ಮೂಡುಬಿದರೆ ಜೈನ ಸಂಸ್ಥಾನಗಳು ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಬೇಕು.
ಸಾಗರ ತಾಲೂಕಿನ ಜನತೆ ಕೂಡ ಈ ಮಹಾನ್ ಕೆಲಸಕ್ಕೆ ಬೆಂಬಲಿಸಿ ಕೈ ಜೋಡಿಸಬೇಕು ಮತ್ತು ದೇಶದ ಇತಿಹಾಸ ಸಂರಕ್ಷಣೆಗೆ ಸ್ಥಳೀಯರು ಬೆಂಬಲಿಸ ಬೇಕು.
ಸ್ಥಳೀಯ ಶಾಸಕರಾದ #ಗೋಪಾಲಕೃಷ್ಣಬೇಳೂರು ಮತ್ತು ಸಂಸದರಾದ #ರಾಘವೇಂದ್ರ ರಾಣಿ ಚೆನ್ನ ಬೈರಾದೇವಿ ಸಮಾದಿ ಸ್ಥಳ ರಾಷ್ಟ್ರೀಯ ಸ್ಮಾರಕವಾಗಿ ಮಾಡಲು ಮುಂದಾಳತ್ವ ವಹಿಸಬೇಕು,ಇದು ಮುಂದೊಂದು ದಿನ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪ್ರವಾಸಿ ಕೇಂದ್ರ ಆಗಿ ಬದಲಾಗಲಿದೆ.
( ಈ ಸರಣಿ ಇಲ್ಲಿಗೆ ಮುಕ್ತಾಯ)
#gerusoppe #rajendrasingbabu #salvadynasty #chennabyradevi #jainism
#shravanabelagola #humcha #akalankapeta #mudubidare #samadi #darmasthala #nishadi
#historian
Comments
Post a Comment