Skip to main content

Posts

Showing posts with the label Untold real story of Kelasi history

Blog number 3419. ಕೆಂಪಿ ಶಾಪ

#ಕೆಳದಿ_ಅರಸರಿಗೆ_ಶಾಪ!? #ಕಾಳುಮೆಣಸಿನ_ರಾಣಿ_ಬಂದನ_ವಿರೋಧಿಸಿ #ಅಂತಿಮ_ಕ್ಷಣದವರೆಗೆ_ಕವಣೆ_ಕಲ್ಲಿಂದ_ದಾಳಿ_ಮಾಡಿದ_ಕುಣುಬಿ_ಜನಾಂಗದ_ಸೈನಿಕರು #ಕುಣುಬಿ_ಜನಾಂಗದ_ಕೆಂಪಿ_ಕೆಳದಿ_ಅರಸರಿಗೆ_ಹಾಕಿದ_ಶಾಪ #ಕುಣುಬಿ_ಜನಾಂಗದ_ಸ್ವಾಮಿ_ನಿಷ್ಟೆಗೆ_ಪ್ರತೀಕವಾದ_ಇತಿಹಾಸದ_ದಾಖಲೆ #ಯಮ_ಸಲ್ಲೇಖನ_ವೃತ_ಪಾಲಿಸಿ_ಇಕ್ಕೇರಿ_ಕೋಟೆಯಲ್ಲಿ_ಜಿನೈಕ್ಯಳಾಗುವ_ರಾಣಿಚೆನ್ನಬೈರಾದೇವಿ. #gerusoppe #keladi #kunubi #tribals #ikkerifort #avinahalli #chennabyaradevi       ಶರಾವತಿ ನದಿ ದಂಡೆಯ ಏಕೈಕ ಸಾಮ್ರಾಜ್ಯವಾದ ಗೇರುಸೊಪ್ಪೆ ಸಾಮ್ರಾಜ್ಯವನ್ನು 54 ವರ್ಷವಾಳಿದ ಜೈನ ರಾಣಿ ಚೆನ್ನಬೈರಾದೇವಿಯನ್ನು ಯುರೋಪಿನವರು ಕಾಳುಮೆಣಸಿನ ರಾಣಿ ಎಂದೇ ಕರೆದರು.    ವರದಾನದಿ ದಂಡೆಯ ಕೆಳದಿ ರಾಜವಂಶದ 43 ವರ್ಷ ಆಳ್ವಿಕೆ ಮಾಡುವ, ಸಾಗರ ಪಟ್ಟಣ ಸದಾಶಿವ ಸಾಗರ  ನಿರ್ಮಿಸಿದ ರಾಜ ಹಿರಿಯ ವೆಂಕಟಪ್ಪ ನಾಯಕ ರಾಣಿ ಚೆನ್ನಾಬೈರಾದೇವಿಯನ್ನು ಗೇರುಸೊಪ್ಪೆಯಲ್ಲಿ ಬಂದಿಸಿ ಇಕ್ಕೇರಿ ಕೋಟೆಯ ಜೈಲಿಗೆ ಕರೆತರುತ್ತಾರೆ.    ಇದನ್ನು ವಿರೋಧಿಸಿ ಕೊನೆ ತನಕ ಹೋರಾಟ ಮಾಡಿದವರು ಗುಡ್ಡಗಾಡು ಜನಾಂಗದ ಸ್ವಾಮಿ ನಿಷ್ಟೆಗೆ ಹೆಸರಾದ ಕುಣುಬಿ ಜನಾಂಗದವರು.    ಕಣಿವೆಯ ಮೇಲಿಂದ ಕವಣೆ ಕಲ್ಲಿನಿಂದ ದಾಳಿ ಮಾಡುವ ಕುಣುಬಿ ಜನಾಂಗದ ಪ್ರಜೆಗಳ ಹೋರಾಟದ ವಿವರಗಳು ಈ ಘಟನೆ ನಡೆದ ಸಾಗರ ತಾಲ್ಲೂಕಿನವರೇ ಆದ ನಮಗೆ ಗೊತ್ತೇ...