#ಸೀಮೆಎಣ್ಣೆ_ವಿತರಣೆ_ಯಾಕೆ_ಇಲ್ಲ #ವಿದಾನಪರಿಷತ್_ನಲ್ಲಿ_ಸದಸ್ಯ_ಸಿದ್ಧಿ_ಸೀಮೆಎಣ್ಣೆ_ಪಡಿತರದಲ್ಲಿ_ವಿತರಿಸಲು_ಒತ್ತಾಯಿಸಿದರು #ಕೇಂದ್ರಸರ್ಕಾರ_ಉಚಿತ_ಅಡುಗೆ_ಅನಿಲ_ಸಿಲೆಂಡರ್_ಸಂಪರ್ಕ_ನೀಡುವ_ಮೂಲಕ_ದೇಶ_ಸೀಮೆಎಣ್ಣೆ_ಮುಕ್ತಮಾಡಿದೆ. #ಬೆಂಗಳೂರಲ್ಲಿ_ಖಾಸಾಗಿ_ಸೀಮೆಎಣ್ಣೆ_85_ರಿಂದ_100_ರೂಗೆ_ಲಭ್ಯ. ಕೇಂದ್ರ ಇಂದನ ಸಚಿವರಾದ ರಾಮ ನಾಯಕರು 28- ನವೆಂಬರ್ -2003 ರಲ್ಲಿ ಕೆರೋಸಿನ್ ಆಮದು ಕಡಿತಗೊಳಿಸಲು ಆದೇಶಿಸುತ್ತಾರೆ. ಇವರಿಗೆ ದೇಶದ ಲಾರಿ ಮಾಲಿಕರ ಒತ್ತಾಯವೂ ಕಾರಣ ಏನೆಂದರೆ ಪಡಿತರ ವ್ಯವಸ್ಥೆಯ ಸೀಮೆ ಎಣ್ಣೆ ಕಳ್ಳ ಮಾರುಕಟ್ಟೆಯ ವ್ಯವಸ್ಥೆಯಲ್ಲಿ ಡಿಸೇಲ್ ಗೆ ಕಲಬೆರಕೆ ಆಗುತ್ತಿದೆ ಇದರಿಂದ ಅನೇಕ ಲಾರಿ ಮಾಲಿಕರು ಕಡಿಮೆ ಬಾಡಿಗೆಯಲ್ಲಿ ಸಾಗಾಣಿಕೆ ಮಾಡುತ್ತಾರೆ ಇದರಿಂದ ಪರಿಸರಕ್ಕೂ ಹಾನಿ, ಸರ್ಕಾರದ ಸಹಾಯದನ ಕೂಡ ದುರ್ಬಳಕೆ ಎಂಬ ಮುಖ್ಯ ಕಾರಣ. ಭಾರತ 1.2 ಮಿಲಿಯನ್ ಬ್ಯಾರಲ್ ಸೀಮೆ ಎಣ್ಣೆ ವಾರ್ಷಿಕ ಆಮದು ಮಾಡಿ ಅದಕ್ಕೆ ಸಹಾಯಧನ ನೀಡಿ ಪಡಿತರ ವ್ಯವಸ್ಥೆಯಲ್ಲಿ ವಿತರಣೆ ಮಾಡುತ್ತಿದ್ದ ಸೀಮೆ ಎಣ್ಣೆ ಶೇಕಡಾ 99 ದುರುಪಯೋಗ ಆಗುತ್ತಿದೆ ಎಂಬ ಸರ್ಕಾರದ ವರದಿಯೂ ಇದೆ. ಹಾಗಾಗಿ ಮೋದಿಯವರ ಸರ್ಕಾರ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಉಚಿತ ಅನಿಲ ಸಂಪರ್ಕ ನೀಡಿ ಸೀಮೆ ಎಣ್ಣೆ ಮುಕ್ತ ಭಾರತ ಮಾಡಿದೆ. ವಿದ್ಯುತ್ ಸಂಪರ್ಕ ಇಲ್ಲದ ಗುಡ್ಡಗಾಡು ಪ್ರದೇಶದಲ್ಲಿ, ನಿರಂತರ ವಿದ್ಯುತ್ ನೀಡಲಾಗದ ಪ್ರದೇ...