#ಮದುಸೂದನ್_ಬೇಕಲ್ ಕೃಷ್ಣ ಸ್ಟೋರ್ ಮಾಲಿಕರು ಆನಂದಪುರಂ ಹೆಸರು ಪ್ರಚಾರಕ್ಕೆ ಆಸೆ ಪಡದ ನಿಸ್ವಾರ್ಥಿ ದೈವ ಭಕ್ತ #Anandapuram #sagar #shivamogga #bakal #kerala #Kumble #kasaragodnews #kasaragod #ayyappaswamy #shabarimala #temple ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರಂನ ಹೊಸನಗರ ರಸ್ತೆಯಲ್ಲಿರುವ ಯಡೇಹಳ್ಳಿ ಎಂಬ ನಮ್ಮೂರ ಪುರದೈವ ವರಸಿದ್ಧಿ ವಿನಾಯಕ ಸ್ವಾಮಿಯ ಹಿಂದಿನ ವರ್ಷದ ರಥೋತ್ಸವದ ಒಂದು ಬೆಳಗಿನ ಫೋಟೋ ನೋಡಿ. ಇಲ್ಲಿನ ರಥ ಬೀದಿಯಲ್ಲಿ ಕಸ ಗುಡಿಸುತ್ತಿರುವವರು,ಉದ್ದನಾದ ಕಸಬರಿಗೆ ಹಿಡಿದುಕೊಂಡಿರುವವರೇ ಮಧುಸೂದನ್ ಬೇಕಲ್. ಆನಂದಪುರಂನ ಶ್ರೀಮಂತ ಸುಸಂಸ್ಕೃತ ವ್ಯಾಪಾರಿ ಮನೆತನದ ಕಾಸರಗೋಡು ಮೂಲದ ದಿವಂಗತ ಜಲ ಕೃಷ್ಣಣ್ಣರ ಜೇಷ್ಠ ಪುತ್ರ ಇವರು. 60ರ ದಶಕದಲ್ಲಿ ಇವರ ತಂದೆ ಆನಂದಪುರಂಗೆ ಬಂದು ಪ್ರಾರಂಬಿಸಿದ ಕೃಷ್ಣ ಸ್ಟೋರ್ ಎಂಬ ದಿನಸಿ ಅಂಗಡಿ ಇಡೀ ಆನಂದಪುರಂಗೆ ಹೆಸರುವಾಸಿ ಆಯಿತು. ಈ ಅಂಗಡಿ ಈಗಲೂ ಮುಂದುವರೆದಿದೆ, ಮೂಲ ಮಾಲೀಕರಾದ ಇವರ ತಂದೆ ಬೇಕಲ್ ಜಲಕೃಷ್ಣಣ್ಣ ಈಗಿಲ್ಲ ಅವರು ಮತ್ತು ಅವರ ಹೆಂಡತಿಯ ತಮ್ಮ ಕೊರಗಣ್ಣ ಈ ಅಂಗಡಿ ಖ್ಯಾತಿಗೆ ಕಾರಣರಾಗಿದ್ದರು. ಈಗ ಈ ಅಂಗಡಿಯನ್ನು ಮಧುಸೂದನ್ ಬೇಕಲ್ ನಡೆಸಿಕೊಂಡು ಹೋಗುತ್ತಿದ್ದಾರೆ. ಇವರ ಸಹೋದರ ಸಂತೋಷ್ ಬೇಕಲ್ ಮತ್ತು ಗಿರೀಶ್ ಬೇಕಲ್ ಪ್ರತ್ಯೇಕವಾಗಿದ್ದಾರೆ ಮೂವರು...