ಈ_ವರ್ಷ_ಲಿಂಗನಮಕ್ಕಿ_ಆಣೆಕಟ್ಟು_ತುಂಬುತ್ತಾ? ...
ಮಲೆನಾಡಿನಲ್ಲಿ ಮುಂಗಾರು ಮಳೆ ಕೊರತೆ ಆಗಿದೆ ಆದರೆ ಜೋಗ್ ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರು ನಿರಾಶೆ ಪಡಬೇಕಾಗಿಲ್ಲ ಯಾಕೆಂದರೆ ಜೋಗ್ ಜಲಪಾತ ಸುತ್ತಲಿನ ಪ್ರದೇಶದಲ್ಲಿ ಆಗುತ್ತಿರುವ ಮಳೆಯಿಂದ ಜೋಗ್ ಜಲಪಾತ ನೋಡಲು ಸುಂದರವಾಗಿ ಕಾಣುತ್ತದೆ.
2025 ಮತ್ತು 2024ರ ಆಗಸ್ಟ್ ತಿಂಗಳ 1 ನೇ ತಾರೀಖಿನಲ್ಲಿನ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1810 ಅಡಿ ತಲುಪಿತ್ತು.
ನಿನ್ನೆ ಬೆಳಿಗ್ಗೆ 8 am 31-ಜುಲೈ-2026 ಕ್ಕೆ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1776 ಅಡಿ ತಲುಪಿತ್ತು ಇದು ಜಲಾಶಯದ 31.30 % ಮಾತ್ರ ನೀರು ಸಂಗ್ರಹ ಆಗಿದೆ.
( 31 - ಜುಲೈ-2026 ರ ಬೆಳಗಿನ ಮಾಹಿತಿಯ ಪ್ರಕಾರ).
ಕಳೆದ ವರ್ಷ ಇದೇ ದಿನಕ್ಕೆ ಡ್ಯಾಮಿನಲ್ಲಿ 1811 ಅಡಿ ನೀರು ಸಂಗ್ರಹವಾಗಿತ್ತು ಅವತ್ತು ಡ್ಯಾಮ್ ಶೇಕಡಾ 83.12% ಭರ್ತಿ ಆಗಿತ್ತು.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಅಂಬುತೀರ್ಥದಲ್ಲಿ ಹುಟ್ಟಿ, ಸಾಗರ ತಾಲೂಕಿನ ಲಿಂಗನಮಕ್ಕಿ ಆಣೆಕಟ್ಟಿನಲ್ಲಿ ಸಂಗ್ರಹವಾಗಿ, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ಜೋಗ್ ಜಲಪಾತವಾಗಿ ಧುಮುಕಿ, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಅರಬಿ ಸಮುದ್ರ ಸೇರುತ್ತದೆ ಶರಾವತಿ ನದಿ.
1815 ಆಡಿದಾಟಿದ ಮೇಲೆ ಒಳಹರಿವು ಲೆಕ್ಕಾಚಾರ ಮಾಡಿ ಡ್ಯಾಮಿನ ಕ್ರಸ್ಟ್ ಗೇಟ್ ಗಳನ್ನು ತೆರೆದು ನೀರು ಹೊರಬಿಡುತ್ತಾರೆ ಆಗ ಶರಾವತಿ ಕಣಿವೆಯಲ್ಲಿ ಪ್ರವಾಹ ಉಂಟಾಗುತ್ತದೆ.
2024ರ ಆಗಸ್ಟ್ ಒಂದಕ್ಕೆ ಲಿಂಗನಮಕ್ಕಿ ಡ್ಯಾಮಿನ ಕ್ರೆಸ್ಟ್ ಗೇಟುಗಳನ್ನು ತೆರೆದು ಸುಮಾರು 15,000 ಕ್ಯೂಸೆಕ್ಸ್ ನೀರುಗಳನ್ನು ಹೊರ ಬಿಡಲಾಗಿತ್ತು.
ಅದು 1815 ಅಡಿ ತಲುಪುವ ಮುಂಚೆಯೇ ಬಿಡಲಾಗಿತ್ತು ಕಾರಣ ನಗರ ಹೊಸನಗರ ಭಾಗದಲ್ಲಿ ಭಾರಿ ಮಳೆ ಆಗುತ್ತಿದ್ದು ಚಕ್ರಾ ಮತ್ತು ವರಾಹಿ ಆಣೆಕಟ್ಟುಗಳು ತುಂಬಿ ಅಲ್ಲಿನ ನೀರು ಲಿಂಗನಮಕ್ಕಿ ಜಲಾಶಯಕ್ಕೆ ಒಳಹರಿವು ಐವತ್ತು ಸಾವಿರ ಕ್ಯೂಸೆಕ್ಸ್ ಗಿಂತ ಹೆಚ್ಚು ಉಂಟು ಮಾಡಿತು.
ಅದೇ ರೀತಿ ಕಳೆದ ವರ್ಷ 2025 ರ ಆಗಸ್ಟ್ 1 ನೇ ತಾರೀಖು ಕೂಡ ಮಲೆನಾಡಿನಲ್ಲಿ ಭರಪೂರ ಮಳೆ ಆಗಿತ್ತು.
ಜೋಗ ಜಲಪಾತ ಅತಿ ಹೆಚ್ಚು ನೀರುಗಳಿಂದ ರುದ್ರ ರಮಣೀಯ ದೃಶ್ಯ ಸೃಷ್ಟಿ ಮಾಡಿತ್ತು ಮತ್ತು ಪ್ರವಾಸಿಗಳು ಈ ದೃಶ್ಯ ಕಣ್ಣು ತುಂಬಿ ಕೊಳ್ಳಲು ಅಸಂಖ್ಯ ಸಂಖ್ಯೆಯಲ್ಲಿ ಆಗಮಿಸಿದ್ದರು ಆಗ ಜಲಪಾತದ ಮೇಲೆ ದಾಖಲೆ ಸಂಖ್ಯೆಯಲ್ಲಿ ಡ್ರೋನ್ ಗಳು ಹಾರಾಡಿ ಜಲಪಾತದ ಚಿತ್ರಿಕರಣವಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈ ವರ್ಷ ಮಲೆನಾಡಿನಲ್ಲಿ ಮುಂಗಾರು ಮಳೆ ಕೊರತೆ ಉಂಟಾಗಿದೆ,ಲಿಂಗನಮಕ್ಕಿ ಜಲಾಶಯದ ನೀರಿನ ಸಂಗ್ರಹ ಮಟ್ಟ ತುಂಬಾ ಕಡಿಮೆ ಇದೆ ಶೇಕಡಾ 30% ಭಾಗ ಕೂಡ ಭರ್ತಿ ಆಗಿಲ್ಲ ಹೀಗಾದರೆ ಈ ವರ್ಷ ಲಿಂಗನಮಕ್ಕಿ ಆಣೆ ಕಟ್ಟು ತುಂಬುವ ಭರವಸೆ ಇಲ್ಲವಾಗಿದೆ.
ಜೋಗ್ ಜಲಪಾತ ನೋಡಲು ಬರುವ ಪ್ರವಾಸಿಗರಿಗೆ ಆಗಾಗ್ಗೆ ಜಲಪಾತದ ಸುತ್ತಲಿನ ಪ್ರದೇಶದಲ್ಲಿ ಬೀಳುತ್ತಿರುವ ಮಳೆಯಿಂದ ನಿರಾಶೆ ಮೂಡಿಸಿಲ್ಲ, ಜೋಗ್ ಜಲಪಾತ ಮೈ ತುಂಬಿ ಹರಿಯುತ್ತಿದೆ ಇದು ಮಲೆನಾಡಿಗೆ ಜೋಗ್ ಫಾಲ್ಸ್ ಪ್ರವಾಸಕ್ಕೆ ಸೂಕ್ತ ಸಮಯ ಆಗಿದೆ.
#jogfalls #linganamakki #electric #powercorporation #mansoon #westernghats #sharavathiriver
.
Comments
Post a Comment