4115. ಮಳೆಗಾಲದಲ್ಲಿ_ಮಲೆನಾಡಿನಲ್ಲಿ_ಭೂಕುಸಿತ. ಈ ರೀತಿ ಭೂಕುಸಿತಕ್ಕೆ ಕಾರಣ ಏನು?... ಸೆನ್ಸಾರ್ ಉಪಕರಣಗಳ ಬಳಕೆ ಇನ್ನು ಪ್ರಾರಂಭವಾಗಿಲ್ಲ ಏಕೆ?....
ಮಳೆಗಾಲದಲ್ಲಿ_ಮಲೆನಾಡಿನಲ್ಲಿ_ಭೂಕುಸಿತ.
ಈ ರೀತಿ ಭೂಕುಸಿತಕ್ಕೆ ಕಾರಣ ಏನು?... ಸೆನ್ಸಾರ್ ಉಪಕರಣಗಳ ಬಳಕೆ ಇನ್ನು ಪ್ರಾರಂಭವಾಗಿಲ್ಲ ಏಕೆ?....
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನೂತನ ಮನೆ ನಿರ್ಮಾಣ ಕಾಮಗಾರಿಗೆ ನಿರ್ಮಿಸಿದ್ದ ತಡೆಗೋಡೆ ಮಣ್ಣು ಕಾರ್ಮಿಕರ ಶೆಡ್ ಮೇಲೆ ಕುಸಿದು ಮೂವರು ಕಾರ್ಮಿಕ ಕುಟುಂಬ ಭಾನುವಾರ ಮೃತರಾದ ದುರಂತ ನಡೆದಿದೆ.
ಮಲೆನಾಡು ಪಶ್ಚಿಮ ಘಟ್ಟಗಳ ಭಾಗದಲ್ಲಿ ಮಳೆಗಾಲದಲ್ಲಿ ಗುಡ್ಡ ಕುಸಿತ,ಭೂಕುಸಿತ ಸಂಭವಿಸಲು ನೈಸರ್ಗಿಕ ಕಾರಣಗಳು ಮತ್ತು ಮಾನವಕೃತ ಕಾರಣಗಳು ಪ್ರಮುಖ ಪಾತ್ರವಹಿಸುತ್ತವೆ.
ಮಲೆನಾಡಿನಲ್ಲಿ ಕೆಲವೇ ದಿನಗಳಲ್ಲಿ ಭಾರಿ ಪ್ರಮಾಣದ ಮಳೆ ಸುರಿಯುತ್ತಿದ್ದಾಗ ಮಣ್ಣು ಹೆಚ್ಚಿನ ಪ್ರಮಾಣದ ನೀರನ್ನು ಹೀರಿಕೊಂಡಾಗ,ಮಣ್ಣಿನ ಕಣಗಳ ನಡುವಿನ ಸಾಂದ್ರತೆ ಕಡಿಮೆಯಾಗಿ ಭಾರ ಹೆಚ್ಚುತ್ತದೆ.
ಗುಡ್ಡಗಳಲ್ಲಿ ಕೆಂಪು ಮಣ್ಣು ಮತ್ತು ಜೇಡಿಮಣ್ಣಿನ ಅಂಶ ಹೆಚ್ಚಿರುವಾಗ ನೀರು ಬಿದ್ದಾಗ ಈ ಮಣ್ಣು ಬೇಗನೆ ಸಡಿಲಗೊಂಡು ಜಾರಲು ಪ್ರಾರಂಭಿಸುತ್ತದೆ.
ಪಶ್ಚಿಮ ಘಟ್ಟಗಳ ಭೂಪ್ರದೇಶವು ಕಡಿದಾದ ಇಳಿಜಾರುಗಳನ್ನು ಹೊಂದಿದ್ದು, ಗುರುತ್ವಾಕರ್ಷಣೆಯ ಬಲದಿಂದಾಗಿ ಸಡಿಲಗೊಂಡ ಮಣ್ಣು ಮತ್ತು ಬಂಡೆಗಳು ವೇಗವಾಗಿ ಕೆಳಗೆ ಜಾರುತ್ತವೆ.
ಅವೈಜ್ಞಾನಿಕ ರಸ್ತೆ ಮತ್ತು ಹೆದ್ದಾರಿ ನಿರ್ಮಾಣ,ಗುಡ್ಡಗಳನ್ನು ಕಡಿದು ರಸ್ತೆ ಅಗಲೀಕರಣ ಮಾಡುವಾಗ ಸರಿಯಾದ ತಡೆಗೋಡೆಗಳನ್ನು ನಿರ್ಮಿಸದಿರುವುದರಿಂದ ಕೂಡ ಈ ಅಪಾಯ ಹೆಚ್ಚು.
ಮರಗಳ ಬೇರುಗಳು ಮಣ್ಣನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳುತ್ತವೆ ಆದರೆ ಬೃಹತ್ ಪ್ರಮಾಣದಲ್ಲಿ ಕಾಡು ನಾಶ ಮಾಡುವುದರಿಂದ ಮಣ್ಣ ಸವಕಳಿ ಹೆಚ್ಚಾಗಿ ಭೂಕುಸಿತಕ್ಕೆ ದಾರಿಯಾಗುತ್ತದೆ.
ನೈಸರ್ಗಿಕ ಅರಣ್ಯಗಳನ್ನು ಕಡಿದು ಏಕಬೆಳೆ ಅಂದರೆ ಅಡಿಕೆ, ಕಾಫಿ, ರಬ್ಬರ್ ಇತ್ಯಾದಿ ತೋಟಗಳನ್ನಾಗಿ ಪರಿವರ್ತಿಸುವುದರಿಂದ,
ಬಾರಿ ಯಂತ್ರಗಳ ಬಳಕೆ ಮತ್ತು ಕ್ವಾರಿಗಳು,ಬಂಡೆಗಳನ್ನು ಸ್ಫೋಟಿಸುವುದು ಹಾಗೂ ಬೆಟ್ಟ-ಗುಡ್ಡಗಳಲ್ಲಿ ಕಲ್ಲು ಗಣಿಗಾರಿಕೆ ಮಾಡುವುದರಿಂದ ಭೂಮಿಯ ಒಳಗಿನ ಪದರಗಳು ಕಂಪಿಸಿ ಸಡಿಲಗೊಳ್ಳುವುದರಿಂದ ಭೂಕುಸಿತ ಸಂಭವ ಜಾಸ್ತಿ ಆಗುತ್ತದೆ.
ಪ್ರಾಕೃತಿಕವಾಗಿ ಹರಿಯುವ ನೀರು ಹರಿವಿನ ಮಾರ್ಗ ಬದಲಾವಣೆ ಕೂಡ ಭೂಕುಸಿತಕ್ಕೆ ಕಾರಣ,ಗುಡ್ಡಗಳಿಂದ ಇಳಿಯುವ ನೈಸರ್ಗಿಕ ತೊರೆ ಮತ್ತು ಕಾಲುವೆಗಳನ್ನು ಮುಚ್ಚುವುದು ಅಥವಾ ಅವುಗಳ ದಾರಿ ಬದಲಿಸುವುದರಿಂದ ನೀರು ಗುಡ್ಡದ ಒಳಗಡೆ ಇಳಿದು ಮಣ್ಣು ಕುಸಿಯುತ್ತದೆ.
ನಿಸರ್ಗದ ಅತಿಯಾದ ಮಳೆಯ ಜೊತೆಗೆ ಬೆಟ್ಟ-ಗುಡ್ಡಗಳ ಇಳಿಜಾರಿನಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಮಾನವ ಚಟುವಟಿಕೆಗಳು ಮಲೆನಾಡಿನಲ್ಲಿ ಪ್ರಕೃತಿ ವಿಕೋಪ ಹೆಚ್ಚಾಗಲು ಮುಖ್ಯ ಕಾರಣವಾಗಿವೆ.
ಮಲೆನಾಡಿನಲ್ಲಿ ಗುಡ್ಡ ಕುಸಿತವನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗದಿದ್ದರೂ, ವೈಜ್ಞಾನಿಕ ಕ್ರಮಗಳು ಮತ್ತು ಸರಿಯಾದ ಯೋಜನೆಯ ಮೂಲಕ ಅಪಾಯವನ್ನು ಬಹುಮಟ್ಟಿಗೆ ಕಡಿಮೆ ಮಾಡಬಹುದು.
ಬೆಟ್ಟದ ಮೇಲಿಂದ ಹರಿಯುವ ಮಳೆ ನೀರು ನೇರವಾಗಿ ಮಣ್ಣಿನೊಳಗೆ ಇಳಿಯದೆ, ಸಣ್ಣ ಕಾಲುವೆಗಳ ಮೂಲಕ ಸುರಕ್ಷಿತವಾಗಿ ಹರಿದು ಹೋಗುವಂತೆ ಮಾಡುವುದು.
ಬೆಟ್ಟದ ಇಳಿಜಾರುಗಳಲ್ಲಿ ಮರ ನೆಡುವುದು, ಸ್ಥಳೀಯ ಜಾತಿಯ, ಆಳವಾದ ಬೇರು ಬಿಡುವ ಮರಗಳನ್ನು (ಉದಾ: ಹಾಲಮರ, ಹೆಬ್ಬಲಸು) ಮತ್ತು ಹುಲ್ಲುಗಳನ್ನು ನೆಡುವುದರಿಂದ ಬೇರುಗಳು ಮಣ್ಣನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳುತ್ತವೆ.
ಕಡಿದಾದ ಭೂಮಿಯನ್ನು ಮೆಟ್ಟಿಲುಗಳ ರೂಪದಲ್ಲಿ ಮಾಡುವುದರಿಂದ ಮಳೆ ನೀರಿನ ರಭಸ ಮತ್ತು ಮಣ್ಣಿನ ಸವಕಳಿ ಕಡಿಮೆಯಾಗುತ್ತದೆ.
ಸೂಕ್ಷ್ಮ ಪ್ರದೇಶಗಳಲ್ಲಿ ಬೆಟ್ಟಗಳನ್ನು ಸ್ಫೋಟಿಸುವುದು ಮತ್ತು ಭಾರಿ ಯಂತ್ರಗಳ ಬಳಕೆಯನ್ನು ಸಂಪೂರ್ಣವಾಗಿ ನಿಯಂತ್ರಿಸುವುದು.
ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಅವುಗಳ ರಕ್ಷಣೆ ಮಾಡುವುದು
ಹೆಚ್ಚು ಮಳೆ ಬೀಳುವ ಸಮಯದಲ್ಲಿ ಮಣ್ಣಿನ ತೇವಾಂಶ ಮತ್ತು ಚಲನೆಯನ್ನು ಅಳೆಯುವ ಸೆನ್ಸರ್‌ಗಳನ್ನು ಅಳವಡಿಸಿ, ಅಪಾಯಕ್ಕೂ ಮುನ್ನವೇ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬಹುದು ಇಂತಹ ಸೆನ್ಸಾರ್ ಪರಿಕರಗಳನ್ನ ಸ್ಥಳೀಯ ಸಂಸ್ಥೆಗಳು ಬಳಸಬೇಕು.
ಭೂಕುಸಿತ ಸಂಭವಿಸುವ ಮೊದಲು ಪ್ರಕೃತಿ ಮತ್ತು ಪರಿಸರದಲ್ಲಿ ಕೆಲವು ಪೂರ್ವಸೂಚನೆಗಳು ಕಂಡುಬರುತ್ತವೆ ಅದನ್ನು ಯಾವ ಕಾರಣಕ್ಕೂ ಕಡೆಗಾಣಿಸಬಾರದು.
ಇವುಗಳನ್ನು ಸರಿಯಾದ ಸಮಯಕ್ಕೆ ಗುರುತಿಸುವುದರಿಂದ ಅಪಾಯದಿಂದ ಪಾರಾಗಬಹುದು.
ನಿಮ್ಮ ಮನೆ, ರಸ್ತೆ, ಕಾಂಕ್ರೀಟ್ ನೆಲ ಅಥವಾ ತಡೆಗೋಡೆಗಳಲ್ಲಿ ದಿಢೀರನೆ ಹೊಸ ಬಿರುಕುಗಳು ಕಾಣಿಸಿಕೊಂಡರೆ ಅಥವಾ ಹಳೆಯ ಬಿರುಕುಗಳು ಅಗಲವಾದರೆ ಅದು ಭೂಮಿ ಸರಿಯುತ್ತಿರುವುದರ ಸಂಕೇತ.
ಬೆಟ್ಟದ ಇಳಿಜಾರಿನಲ್ಲಿರುವ ಮರಗಳು, ವಿದ್ಯುತ್ ಕಂಬಗಳು ಅಥವಾ ಬೇಲಿಗಳು ಒಂದು ಬದಿಗೆ ವಾಲುತ್ತಿದ್ದರೆ ಭೂಮಿ ಕುಸಿಯುತ್ತಿದೆ ಎಂದರ್ಥ.
ಹಠಾತ್ತಾಗಿ ಹೊಸ ಕಡೆಗಳಲ್ಲಿ ಬುಗ್ಗೆಗಳು ಚಿಮ್ಮುವುದು,
ಹರಿಯುವ ತೊರೆ ಅಥವಾ ನದಿಯ ನೀರು ದಿಢೀರನೆ ಕೆಸರುಮಯವಾಗಿ ಬದಲಾಗುವುದು,ಹರಿಯುತ್ತಿದ್ದ ನೀರು ದಿಢೀರನೆ ಇಂಗಿ ಹೋಗುವುದು ಅಥವಾ ಕಡಿಮೆಯಾಗುವುದು (ಮೇಲ್ಭಾಗದಲ್ಲಿ ನೀರು ತಡೆಯಲ್ಪಟ್ಟಿರುವುದರ ಸಂಕೇತ).
ಮನೆಯ ಬಾಗಿಲು ಮತ್ತು ಕಿಟಕಿಗಳು ಸಿಕ್ಕಿಕೊಳ್ಳುವುದು, ಭೂಮಿ ಸಲ್ಪ ಮಟ್ಟಿಗೆ ಜರುಗಿದಾಗ ಮನೆಗಳ ಬಾಗಿಲು ಅಥವಾ ಕಿಟಕಿ ಚೌಕಟ್ಟುಗಳು ವಂಕಿ, ಸರಿಯಾಗಿ ಮುಚ್ಚದಿರಬಹುದು.
ಬೆಟ್ಟದ ಒಳಗಿನಿಂದ ಮರಗಳು ಮುರಿಯುವ ಶಬ್ದ, ಕಲ್ಲುಗಳು ಉರುಳುವ ಶಬ್ದ ಅಥವಾ ಭಾರಿ ಸದ್ದು ಕೇಳಿಸುವುದು.
ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ನಿರಂತರ ಭಾರಿ ಮಳೆಯಾದಾಗ (ಉದಾಹರಣೆಗೆ: 24 ಗಂಟೆಗಳಲ್ಲಿ 100-200mm ಗಿಂತ ಹೆಚ್ಚು) ನೆಲ ನೀರನ್ನು ಹೀರಿಕೊಳ್ಳುವ ಸಾಮರ್ಥ್ಯ ಕಳೆದುಕೊಂಡು ಕುಸಿತ ಉಂಟಾಗುತ್ತದೆ.
ಭೂಕುಸಿತದ ಸೂಚನೆ ಸಿಕ್ಕರೆ ಏನು ಮಾಡಬೇಕು? ..
ತಕ್ಷಣ ಸುರಕ್ಷಿತ ಸ್ಥಳಕ್ಕೆ ತೆರಳಿ, ಯಾವುದೇ ಅಪಾಯದ ಲಕ್ಷಣ ಕಂಡ ತಕ್ಷಣ ಕೆಳಭಾಗದ ಮನೆಗಳನ್ನು ಖಾಲಿ ಮಾಡಿ ಎತ್ತರದ ಮತ್ತು ಗಟ್ಟಿ ನೆಲವಿರುವ ಪ್ರದೇಶಕ್ಕೆ ಹೋಗಿ.
ಗ್ರಾಮ ಪಂಚಾಯತಿ, ತಾಲೂಕು ಕಚೇರಿ ಅಥವಾ ತುರ್ತು ಸೇವೆಗೆ (112) ತಕ್ಷಣ ತಿಳಿಸಿ.
ಹರಿವಿನ ಹಾದಿಯಿಂದ ದೂರವಿರಿ,ಹಳ್ಳ-ಕೊಳ್ಳ ಮತ್ತು ಇಳಿಜಾರಿನ ನೇರ ಸಾಲಿನ ಪ್ರದೇಶಗಳಲ್ಲಿ ನಿಲ್ಲಬೇಡಿ.
ಅತಿಯಾದ ಮಳೆಯಿಂದಾಗಿ ಮಣ್ಣು ನೀರನ್ನು ಹೀರಿಕೊಂಡು ತೂಕ ಹೆಚ್ಚಾಗುತ್ತದೆ ಮತ್ತು ತನ್ನ ಗ್ರಿಪ್ ಕಳೆದುಕೊಳ್ಳುತ್ತದೆ.
ಮುಖ್ಯವಾಗಿ #Rain_Gauges #Sensors ಒಂದು ನಿರ್ದಿಷ್ಟ ಪ್ರದೇಶದಲ್ಲಿ ಬಿಡುವಿಲ್ಲದೆ ಹರಿಯುವ ಮಳೆಯ ಪ್ರಮಾಣ (Intensity) ಮತ್ತು ಸಮಯವನ್ನು (Duration) ನಿರಂತರವಾಗಿ ಅಳೆಯುತ್ತವೆ.
ಪ್ರತಿ ಬೆಟ್ಟ ಅಥವಾ ಇಳಿಜಾರಿನ ಮಣ್ಣಿನ ಗುಣಧರ್ಮಕ್ಕೆ ಅನುಗುಣವಾಗಿ, ಅದು ಎಷ್ಟು ಮಿಲಿಮೀಟರ್ ಮಳೆಯನ್ನು ತಡೆಯಬಲ್ಲದು ಎಂಬ "ಸುರಕ್ಷಿತ ಮಿತಿ" (Threshold) ಇರುತ್ತದೆ.
#ಟಿಲ್ಟ್_ಸಂವೇದಕಗಳು (Tilt Sensors)
ಕೆಲಸ ಮಾಡುವ ವಿಧಾನ, ಇವುಗಳನ್ನು ನೆಲದ ಮೇಲ್ಭಾಗದಲ್ಲಿ, ಬೆಟ್ಟದ ಇಳಿಜಾರಿನ ಬಂಡೆಗಳ ಮೇಲೆ, ತಡೆಗೋಡೆಗಳಲ್ಲಿ (Retaining walls) ಅಥವಾ ವಿದ್ಯುತ್ ಕಂಬಗಳ ಮೇಲೆ ಜೋಡಿಸಲಾಗುತ್ತದೆ.
ಇಳಿಜಾರು ಅಥವಾ ಗೋಡೆ ಕಣ್ಣಿಗೆ ಕಾಣಿಸದಷ್ಟು (ಮಿಲಿಮೀಟರ್ ಲೆಕ್ಕದಲ್ಲಿ) ವಾಲಿದರೂ (Angle of Tilt), ಈ ಸಂವೇದಕ ಅದನ್ನು ತಕ್ಷಣ ಗುರುತಿಸಿ ವೈರ್‌ಲೆಸ್ ಮೂಲಕ ಕಂಟ್ರೋಲ್ ರೂಮ್‌ಗೆ ಡೇಟಾ ಕಳುಹಿಸುತ್ತದೆ.
#Rainfall_Threshold_Sensors – ಯಾವಾಗ ಅಪಾಯ ಸಂಭವಿಸಬಹುದು?... ಮಳೆಯ ಆಧಾರದಲ್ಲಿ
Inclinometers & Tilt Sensors – ಭೂಮಿ ಈಗಾಗಲೇ ಜಾರಲು ಶುರುವಾಗಿದೆಯೇ?... ಮಣ್ಣಿನ ಚಲನೆಯ ಆಧಾರದಲ್ಲಿ,
ಈ ಎರಡೂ ವ್ಯವಸ್ಥೆಗಳನ್ನು ಒಂದಾಗಿಸಿ 'Early Warning System' ಆರಂಭಿಕ ಮುನ್ನೆಚ್ಚರಿಕಾ ವ್ಯವಸ್ಥೆ ನಿರ್ಮಿಸಲಾಗುತ್ತದೆ.
ಇದು ಪ್ರಾಣಹಾನಿಯನ್ನು ಸಂಪೂರ್ಣವಾಗಿ ತಡೆಯಲು ಸಹಾಯ ಮಾಡುತ್ತದೆ ಆದ್ದರಿಂದ ಬದಲಾದ ಕಾಲದಲ್ಲಿ ಸರ್ಕಾರಿ ಸಂಸ್ಥೆಗಳು ಕೂಡ ಬದಲಾಗಬೇಕು ಅದರಿಂದ ಅಮಾಯಕರ ಜೀವ ಉಳಿಸಲು ಸಾಧ್ಯವಿದೆ.
#landsliding #thirthahalli #shivamogga #heavyrain #sensor #mansoonseason
Comments
Post a Comment