Skip to main content

Posts

Showing posts with the label Mundagodu Tibet camp first identified in KENJIGAPURA of Anandapuram

ಭಾಗ -30, ಈಗ ಮುಂಡಗೋಡಿನಲ್ಲಿರುವ ಟಿಬೆಟ್ ಕ್ಯಾಂಪ್ ಮೊದಲಿಗೆ ಮಂಜೂರಾಗಿದ್ದು ಆನಂದಪುರಂನ ಕೆಂಜಿಗಾಪುರಕ್ಕೆ ಇದು ಮುಂಡಗೋಡಿಗೆ ಹೋಗಲು ಕಾರಣ ಕಾಗೋಡು ಹೋರಾಟದ ರೂವಾರಿ ಗಣಪತಿಯಪ್ಪರ ಹೋರಾಟ ಮತ್ತು ಆಗಿನ ಮುಖ್ಯಮಂತ್ರಿ ಕಡಿದಾಳು ಮಂಜಪ್ಪರ ಕೃಪೆ.

#ಭಾಗ_30. #ಆನ೦ದಪುರಂನ_ಕೆಂಜಿಗಾಪುರ_ಟಿಬೆಟ್_ನಿರಾಶ್ರಿತರ_ಕೇಂದ್ರವಾಗಿ_ರಾಜ್ಯಸಕಾ೯ರ_ಘೋಷಿಸಿತ್ತು. #ಇದನ್ನು_ಇಲ್ಲಿಂದ_ಮುಂಡಗೋಡಿಗೆ_ಬದಲಾಯಿಸಲು_ಕಾರಣ_ಕತ೯ರು_ಆಗಿನ_ಮುಖ್ಯಮಂತ್ರಿ_ಕಡಿದಾಳು_ಮಂಜಪ್ಪನವರು #ಇದರ_ಬಗ್ಗೆ_ಆಗಿನ_ಮುಖ್ಯಮಂತ್ರಿ_ಕಡಿದಾಳು_ಮಂಜಪ್ಪರನ್ನು_ಮನವೊಲಿಸಿದ್ದು_ಕಾಗೋಡು_ಹೋರಾಟದ_ನೇತಾರ_ಗಣಪತಿಯಪ್ಪ. #ಕೆಂಜಿಗಾಪುರ_ಕೇಂದ್ರವಾಗಿ_ಯಡೇಹಳ್ಳಿ_ಇರುವಕ್ಕಿ__ಹೆಬ್ಬೋಡಿ_ಅಡೂರು_ತಾವರೇಹಳ್ಳಿಯ #ಸುಮಾರು_5000_ಎಕರೆ_ಅರಣ್ಯ_ಭೂಮಿ_ಟಿಬೆಟ್_ನಿರಾಶ್ರಿತರಿಗೆ_ಗುರುತು_ಮಾಡಲಾಗಿತ್ತು. #ಈ_ಕಾರಣದಿಂದ_ಯಡೇಹಳ್ಳಿ_ಶಾಲಾವರಣದ_ರಂಗಮಂದಿರಕ್ಕೆ #ಕಾಗೋಡು_ಹೋರಾಟದ_ನೇತಾರ_ಗಣಪತಿಯಪ್ಪ_ರಂಗಮಂದಿರ_ಎಂದು_ನಾಮಕರಣ_ಮಾಡಲಾಗಿದೆ.   ಆನಂದಪುರಂ ಸಮೀಪದ ಕೆಂಜಿಗಾಪುರ ವೀರಭದ್ರೇಶ್ವರ ದೇವಸ್ಥಾನ ಪುರಾತನ ಶಿಲಾಮಯ ದೇವಸ್ಧಾನ ಇದನ್ನು ವಿಜಯನಗರದ ಅರಸು ಪ್ರೌಡ ಪ್ರತಾಪ ರಾಯರು ಕ್ರಿ.ಶ.1419ರಲ್ಲಿ ನಿರ್ಮಿಸಿದ ಶಾಸನವಿದೆ, ಈ ವೀರಭದ್ರ ದೇವರ ಭಕ್ತರು ಅಸಂಖ್ಯ, ಪ್ರತಿ ವರ್ಷ ಹೋಳಿ ಹುಣ್ಣಿಮೆಯ ರಥೋತ್ಸವಕ್ಕೆ ಬಂದು ಸೇರುವ ಮತ್ತು ಕಾಣಿಕೆ ಸಲ್ಲಿಸುವ ಆಚರಣೆ ಇದೆ.   ಇತ್ತೀಚಿಗೆ ಈ ದೇವಾಲಯ ಸಂಪೂರ್ಣ ನವೀಕರಣ ಆಗಿದೆ ಮತ್ತು ನೂತನ ಕಲ್ಯಾಣ ಮಂಟಪ ಕೂಡ ನಿರ್ಮಾಣ ಆಗುತ್ತಿದೆ ಇದಕ್ಕೆ ಮುಖ್ಯ ಕಾರಣ ಈ ದೇವರ ಭಕ್ತರೇ ಆದ ಸಮೀಪದ ತುಮರಿಕೊಪ್ಪದ ಬಂಗಾರಪ್ಪ ಗೌಡರ ಸೋದರರ ಪುತ್ರ ಮೇಘರಾಜ್ ಭ...