Blog number 1216. ನಮ್ಮ ತಾಲ್ಲೂಕಿನ ಸಜ್ಜನ ರಂಗಕರ್ಮಿ , ಕೇಂದ್ರ ಸರ್ಕಾರದ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು, ರಂಗಾಯಣದ ಮಾಜಿ ನಿರ್ದೇಶಕರು ಆದ ಚಿದಂಬರ್ ರಾವ್ ಜಂಬೆ ಆಗಮನ ನನಗೆ ಅತ್ಯಂತ ಖುಷಿ ಕೊಟ್ಟ ಕ್ಷಣ .
#ನಿನ್ನೆ_ಸಂಜೆ_ರಂಗಾಯಣದ_ಮಾಜಿ_ನಿರ್ಧೇಶಕರಾದ_ಜಂಬೆ_ಬಂದಿದ್ದರು. #ಅವರ_ಬೇಟಿ_ನನಗೆ_ತುಂಬಾ_ಸಂತೋಷ_ತಂದಿತು. #ದೆಹಲಿಯ_NSD_ವ್ಯಾಸಂಗ #ಹೆಗ್ಗೋಡಿನ_ನೀನಾಸಂ_ಪ್ರಾಂಶುಪಾಲರು #ರಂಗಾಯಣದ_ನಿರ್ದೇಶಕರು #ಕೇಂದ್ರದ_ಸಂಗೀತ_ನಾಟಕ_ಅಕಾಡೆಮಿ_ಪ್ರಶಸ್ತಿ_ವಿಜೇತರು #ಸಿದ್ದಿ_ಬುಡಕಟ್ಟು_ಜನಾಂಗದ_ಸಿದ್ಧಿ_ಕಲಾವಿದರ_ಹೊರಜಗತ್ತಿಗೆ_ಪರಿಚಯಿಸಿದವರು. #ಚಿದಂಬರ್_ರಾವ್_ಜ೦ಬೆ_ಶಿವಮೊಗ್ಗ_ಜಿಲ್ಲೆಯ_ನಮ್ಮ_ಸಾಗರ_ತಾಲ್ಲೂಕಿನವರು_ಎಂಬುದು_ನನಗೆ_ಹೆಮ್ಮೆ. ನಿನ್ನೆ ಸಂಜೆ ಚಿದಂಬರ್ ರಾವ್ ಜಂಬೆ ಅವರು ಶಿವಮೊಗ್ಗದಿಂದ ಅವರ ಬಾವ ನಿವೃತ್ತ ಭಾರತೀಯ ಸೈನ್ಯದ ಲಕ್ಷ್ಮೀನಾರಾಯಣರ ಜೊತೆ ಬಂದಿದ್ದರು. ಸುಮಾರು 25 ವರ್ಷದ ಹಿಂದೆ ಅಂದಾಜು 1997ರಲ್ಲಿ ಹೆಗ್ಗೋಡಿನಲ್ಲಿ ಚರಕ ಸಂಸ್ಥೆಯ ಪ್ರಸನ್ನ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಬಿಸಿದ್ದರು ಕಾರಣ ಅವರ ಮತ್ತು ನೀನಾಸಂ ಕೆ. ವಿ.ಸುಬ್ಬಣ್ಣ ಅವರ ನಡುವೆಯ ವ್ಯವಹಾರಿಕ ಬಿನ್ನಾಭಿಪ್ರಾಯ, ಇನ್ನಾವುದೋ ಚೆಕ್ ಕೇಸ್ ಅಂತಲೂ ಇನ್ನೂ ಕೆಲವರು ಪ್ರಸನ್ನರ ಪರ ಇರುವವರು ಕೆ.ವಿ.ಸುಬ್ಬಣ್ಣನವರ ಅಸಹಕಾರ ಮುಂತಾದ ಸುದ್ದಿಗಳಾಗಿತ್ತು. ಆಗ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರು ಪಕ್ಷೇತರರಾಗಿ ಲೋಕಸಭಾ ಸದಸ್ಯರಾಗಿದ್ದರು ಅವರ ಚುನಾವಣೆಗೆ ಮತ್ತಿಕೊಪ್ಪದ ಸಹಕಾರಿ ಬಂದು ಹರನಾಥ ರಾಯರ ನೇತೃತ್ವವಾಗಿತ್ತು ಆ ಕಾರಣದಿಂದ ಒಂದು ಸಂಜೆ ಅವರು ನನ್ನ ಕರೆದುಕೊಂಡು ಉಪವಾಸ ಸತ್ಯಾಗ್...