Skip to main content

Posts

Showing posts with the label Gangadhar Nayak my best friend passed away with memories

Blog number 1040. ಸಾಗರದ ಜೀವವಿಮಾ ಕ್ಷೇತ್ರದಲ್ಲಿ ದಾಖಲೆ ಮಾಡಿದ್ದ ಗಂಗಾದರ್ ನಾಯಕರಿಗೆ ಅಶ್ರುತರ್ಪಣಗಳು.

#ಸಾಗರದ_ಜೀವವಿಮಾ_ಗಂಗಾಧರ್_ನಾಯಕರಿಗೆ_ಅಶ್ರು_ತರ್ಪಣಗಳು. #ಅವರ_ಕೊನೆಯ_ಆಸೆ_ಈಡೇರಿಸದ_ಅಸಾಹಯಕತೆ_ನನ್ನದು. #ಕುಂದಾಪುರದ_ಬಸ್ರೂರಿನಿಂದ_ಸಾಗರಕ್ಕೆ_ಬಂದು_ಜೀವನ_ಕಟ್ಟಿಕೊಂಡ_ಶ್ರಮಿಕರು. #ಪೇಸ್_ಬುಕ್_ಮೂಲಕ_ಸಾಮಾಜಿಕ_ಜಾಲತಾಣದಲ್ಲಿ_ಸಕ್ರಿಯರಾಗಿದ್ದರು.       ಕರಾವಳಿಯಿಂದ ಘಟ್ಟ ಪ್ರದೇಶವಾದ ಶಿವಮೊಗ್ಗ ಜಿಲ್ಲೆಯ ಸಾಗರ, ಹೊಸನಗರ ಮತ್ತು ತೀರ್ಥಹಳ್ಳಿಯಲ್ಲಿ ನೆಲೆಸಿ ಉದ್ಯೋಗ ಮತ್ತು ವ್ಯವಹಾರದಿಂದ ಸ್ಥಳಿಯರೇ ಆದ ಸಾವಿರಾರು ಜನರಿದ್ದಾರೆ.     ಇದರಲ್ಲಿ  LIC ಗ೦ಗಾಧರ್ ನಾಯಕ್ ಅಂದರೆ ಸಾಗರ ಪೇಟೆ ಮತ್ತು ಸಾಗರ ಗ್ರಾಮಾಂತರದಲ್ಲಿ ಪ್ರಸಿದ್ಧರು, ಗ್ರಾಮೀಣ ಪ್ರದೇಶದ ದೊಡ್ಡ ದೊಡ್ಡ ಅಡಿಕೆ ಬೆಳೆಗಾರರಿಗೆ ಗಂಗಾದರ್ ನಾಯಕ್ ರು ಜೀವ ವಿಮಾ ಯೋಜನೆಗಳಿಂದ ಚಿರಪರಿಚಿತರು, LIC ಚೇರ್ಮನ್ ಕ್ಲಬ್ ಸದಸ್ಯರು.   ಯಕ್ಷಗಾನ - ಕೃಷಿ- ಉಳಿತಾಯದ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದ ಗಂಗಾದರ್ ನಾಯಕ್ ರು ಕನ್ನಡ ಸಾಹಿತ್ಯಾಸಕ್ತರು ಇವರಿಗೆ ಓದುವ ಹವ್ಯಾಸ ಜಾಸ್ತಿ, ಸಾಮಾಜಿಕ ಜಾಲ ತಾಣದಲ್ಲಿ ತರ್ಕಬದ್ದ ಚರ್ಚೆಯಲ್ಲಿ ಯಾವತ್ತೂ ಮುಂದಿದ್ದರು.   ಎರೆಡು ಬಾರಿ ನನ್ನ ಕಛೇರಿಗೆ ದಂಪತಿ ಸಮೇತ ಬಂದು ಕುಶಲೋಪರಿ ಜೊತೆ ಅನೇಕ ವಿಚಾರ ವಿನಿಮಯ ಮಾಡಿದ್ದರು.    ಅವರು ಕುಂದಾಪುರ ಸಮೀಪದ ಬಸ್ರೂರಿನವರು, ತಂದೆ ತಾಯಿಗಳು ನಡೆಸುತ್ತಿದ್ದ ಸಣ್ಣ ಹೋಟೆಲ್, ವಿಧ್ಯಾಬ್ಯಾಸದ ನಂತರ ತಾಯ...