Skip to main content

Posts

Showing posts with the label My memories in writing at 4th wedding anniversary of my daughter and suninlaw

Blog number 1819. ಮಗಳು ಅಳಿಯರ ನಾಲ್ಕನೆ ವಿವಾಹ ವಾರ್ಷಿಕೋತ್ಸವದ ದಿನ ಈ ನೆನಪಿನ ಬರಹ.

#ಇವತ್ತಿಗೆ_ನಾಲ್ಕು_ವರ್ಷದ_ಹಿಂದೆ_ನನ್ನ_ಮಗಳ_ವಿವಾಹ_ಮಹೋತ್ಸವ_ನಡೆದಿತ್ತು. #ಮಗಳು_ಅಳಿಯರಿಗೆ_ನಾಲ್ಕನೆ_ವಿವಾಹ_ವಾರ್ಷಿಕೋತ್ಸವ_ಇವತ್ತು #ಅವತ್ತು_ನನ್ನ_ದೇಹದ_ತೂಕ_140_ಕಿಲೊ #ಮುಖ_ತಾಮ್ರದ_ತಪ್ಪಲೆ_ಕುತ್ತಿಗೆ_ಕಾಣುತ್ತಿರಲಿಲ್ಲ #ಅವತ್ತಿನ_ಆಯಾಸ_ಮರೆಸಿದ್ದು_ನನ್ನ_ಆಮಂತ್ರಣಕ್ಕೆ_ಆಗಮಿಸಿದ್ದ_ಹಿತೈಷಿಗಳು. #ಗೆಳೆಯ_ನಾಗೇಂದ್ರಸಾಗರ್_ನನ್ನ_ಮಗಳ_ಮದುವೆ_ಅಕ್ಷರ_ರೂಪದಲ್ಲಿ_ದಾಖಲಿಸಿದ್ದಾರೆ.   ಇವತ್ತಿಗೆ ಸರಿಯಾಗಿ ನಾಲ್ಕು ವರ್ಷಗಳ ಹಿಂದೆ ಇದೇ ದಿನ 10- ನವೆಂಬರ್ - 2019 ಭಾನುವಾರ ನನ್ನ ಮಗಳ ವಿವಾಹ ನನ್ನ ತಂದೆ-ತಾಯಿ ಸ್ಮರಣಾರ್ಥ ನಮ್ಮ ಊರಲ್ಲಿ ನಾವು ನಿರ್ಮಿಸಿದ ಶ್ರೀಕೃಷ್ಣ ಸರಸ ಕನ್ವೆನ್ಷನ್ ಹಾಲ್ ನಲ್ಲಿ ಸಾಂಗವಾಗಿ ನೆರವೇರಿತು.   ಅದರ ಹಿಂದಿನ ದಿನ ಹುಬ್ಬಳ್ಳಿಯಿಂದ ದಿಬ್ಬಣ ಹೊರಡುವಾಗಲೇ ಸರ್ವೋಚ್ಚ ನ್ಯಾಯಾಲಯ ಆಯೋಧ್ಯೆಯ ತೀರ್ಪು ಪ್ರಕಟಿಸಿದ್ದರಿಂದ ದಿಬ್ಬಣದ ಸವಾರಿ ನಮ್ಮ ಊರಿಗೆ ಸರಾಗವಾಗಿ ತಲುಪುವ ಬಗ್ಗೆ ಆತಂಕ ಇತ್ತು.   ನನ್ನ ಬೀಗರು "ಏನೂ ತೊಂದರೆ ಇಲ್ಲ ಯಾವುದೇ ತೊಂದರೆ ಇಲ್ಲದೆ ತಲುಪುವ ವ್ಯವಸ್ತೆ ತಮ್ಮ ಸಹೋದರ ಮಾಡಿದ್ದಾರೆ " ಎಂದಿದ್ದರೂ ಕೊಂಚ ಭಯ ಪಟ್ಟಿದ್ದೆ ಆದರೆ ಯಾವುದೇ ಅಡೆ ತಡೆ ಇಲ್ಲದೆ ದಿಬ್ಬಣ ನಮ್ಮಲ್ಲಿಗೆ ಸಂಜೆ ಬಂದು ಸೇರಿತ್ತು.   ಮಗಳು ಹುಬ್ಬಳ್ಳಿಯಲ್ಲಿ ಎಲ್.ಎಲ್.ಎಮ್ ಮಾಡುವಾಗ ಇಬ್ಬರೂ ಇಷ್ಟ ಪಟ್ಟಿದ್ದಾರೆ, ಹುಡುಗನ ತಂದೆ ತಾಯಿ ಒಪ್ಪಿದ್ದಾರೆ ಆದರೆ ಇದಾವುದು ನನಗೆ ತಿ...