#ಕೇರಳರಾಜ್ಯದ_ಪುಟ್ಟೂ_ಏನಿದರ_ಗುಟ್ಟು. #ಹದಿನೈದನೆ_ಶತಮಾನದಲ್ಲಿ_ಉಲ್ಲೇಖ #ಪೋರ್ಚುಗೀಸರಿಂದ_ಕೇರಳಕ್ಕೆ_ಬಂತೆ? #ಅಸ್ಸಾಂನಲ್ಲಿ_ಇಂತದ್ದೆ_ಸಂಗಪಿತ_ಇದೆ. #ಒಂದು_ಕಾಲದಲ್ಲಿ_ದೇಸಿ_ಪುಟ್ಟು_ತಯಾರಿಸುವ_ಬೊಂಬು_ಸಾದನವಿತ್ತು. ಕೇರಳದವರ ಪೆವರಿಟ್ ಉಪಹಾರ ಪುಟ್ಟೂ ಬೇರೆ ಭಾಗದವರಿಗೂ ಬಲು ಇಷ್ಟ ಆದರೆ ಇದು ತಯಾರಿಸಲು ಕಷ್ಟ ಎಂಬ ನಂಬಿಕೆಯಿಂದ ಪ್ರಯತ್ನವೇ ಮಾಡುವುದಿಲ್ಲ. ಕೇರಳ ಹೋದಾಗೆಲ್ಲ ಪುಟ್ಟು ಹಸಿಕಡಲೆ ಪಲ್ಯ ಮತ್ತು ಬೇಯಿಸಿದ ನೇಂದ್ರ ಬಾಳೆ ತಿನ್ನದೇ ಬರಲಾಗುವುದಿಲ್ಲ. ಹಾಗಾಗಿ ಮನೇನಲ್ಲಿ ಪುಟ್ಟೂ ತಯಾರಿಸುವ ಪಾತ್ರೆ ಒಂದು ಕೆಲ ವರ್ಷದ ಹಿಂದೆ ತಂದಿದ್ದೆ, ಎರೆಡು ವರ್ಷದ ಹಿಂದೆ ನಮ್ಮಣ್ಣ ತಂದು ಕೊಟ್ಟಿದ್ದ ಈ ಪುಟ್ಟೂ ಪಾತ್ರೆ ಮರೆತು ಹೋಗಿತ್ತು ಬಳಸಿರಲಿಲ್ಲ. ಇವತ್ತು ಹೊಸ ಪಾತ್ರೆಯಲ್ಲಿ ಪುಟ್ಟೂ ತಯಾರಿಸಿ ಕಡಲೆ ಪಲ್ಯದೊಡನೆ ಉಪಹಾರವೂ ಆಯಿತು. ಪುಟ್ಟು ಮಾಡುವುದು ತುಂಬಾ ಸರಳ,4 ಗಂಟೆ ಅಕ್ಕಿ ನೆನಸಿಡುವುದು ನಂತರ ನೀರು ತೆಗೆದು ಮಿಕ್ಸಿಯಲ್ಲಿ ರವೆಯಂತೆ ಪುಡಿ ಮಾಡಿ ಅದನ್ನು ಬಾಣಲೆಯಲ್ಲಿ ಸಣ್ಣ ಉರಿಯಲ್ಲಿ ಹುರಿಯಬೇಕು, ನಂತರ ತಣ್ಣಗಾದಾಗ ರುಚಿಗೆ ಬೇಕಾಗುವಷ್ಟು ಉಪ್ಪು ನೀರಲ್ಲಿ ಕರಗಿಸಿ ಕೈಯಿಂದ ಕಲಸಿ, ತೆಂಗಿನ ತುರಿ ಸೇರಿಸಿ, ಸ್ವಲ್ಪ ಸ್ವಲ್ಪ ಬಿಸಿ ನೀರು ಬೆರಸಿ ಹದವರಿತು ಪುಟ್ಟು ಹಿಟ್ಟು ಕಲಸಿಕೊಳ್ಳಬೇಕು (ಹೆಚ್ಚು ಹಸಿ ಆಗಬಾರದು ಮತ್ತು ಹೆಚ್ಚು ಒಣ ಪುಡಿಯೂ ಆಗದಂತೆ...