Skip to main content

Posts

Showing posts with the label Ganja crops popular in western ghats.

Blog number 918. ಗಾಂಜಾ ಬೆಳೆ ಮಲೆನಾಡು ಅಕ್ರಮಿಸಿತಾ?

#ಇದೊಂದು ಮನ ಮುಟ್ಟುವ ಕಥೆ   ಸಾಗರ ತಾಲ್ಲೂಕು, ಹೊಸನಗರ ತಾಲ್ಲೂಕುಗಳ ಹಳ್ಳಿಗಳಲ್ಲಿ ವಾಡಿಕೆ ಮಳೆ ಕಡಿಮೆ ಆದಾಗ ಹತ್ತಿ ಮತ್ತು ಜೋಳದ ಕೃಷಿ ಪ್ರಾರಂಭವಾಯಿತು ಅದರ ಮಧ್ಯ ಗಾಂಜಾ ಬೆಳೆ ಸೇರಿಕೊಂಡಿತು, ಮೊದಲಿಗೆ ಮನೆಯ ಹೆಣ್ಣು ಮಕ್ಕಳು ವಾಷಿ೯ಕ ಒಂದು 50 ಸಾವಿರ ಆದಾಯ ಪಡೆಯಲು ಪ್ರಾರಂಬಿಸಿದರು ನಂತರ ಇದಕ್ಕೆ ದೊಡ್ಡ ಮಾರುಕಟ್ಟೆಯೇ ಸೃಷ್ಟಿ ಆಯಿತು.  ಉತ್ತರ ಭಾರತದಿಂದ ಹಳ್ಳಿಗಳಿಗೆ ದಲ್ಲಾಳರು ಬಂದರು ಬೀಜ, ಮುಂಗಡ ನೀಡಿದರು ಮತ್ತು ಅವರೇ ಖರೀದಿ ಮಾಡಲು ಶುರು ಮಾಡಿದರು. ಬೇರೆಯವರಿಗೆ ಅನುಮಾನ ಬಾರ ಬಾರೆದೆಂದು ಬೆಡ್ ಶೀಟ್, ಬಟ್ಟೆ ವ್ಯಾಪಾರಿಗಳಾಗಿ ಸಂವಹನ ಶುರು ಮಾಡಿದರು.   ಒಬ್ಬರ ನೋಡಿ ಎಲ್ಲರೂ ಗಾಂಜಾ ಕೃಷಿಕರಾದರು ವಾಷಿ೯ಕ ಆದಾಯ ಕೆಲ ಲಕ್ಷಗಳಾಯಿತು, ಮನೆ, ಬೈಕ್, ಕಾರುಗಳು ಬಂತು ಜನಪ್ರತಿನಿಧಿಗಳು ಇವರ ಮನೆಗೆ ಬರಲು ಪ್ರಾರಂಭಿಸಿದರು ಎಲ್ಲೋ ಒಂದು ಕಡೆ ಸಿಕ್ಕಿಬಿದ್ದರೆ ಊರವರೆಲ್ಲ ಸೇರಿ ರಾಜಿ ಮಾಡಿ ಬಿಡಿಸಲು ಪ್ರಾರಂಭಿಸಿದರು ಅದಿಕಾರದಲ್ಲಿನ ರಾಜಕಾರಣಿಗಳು ಸಹಕರಿಸಿದರು.   ಹಳ್ಳಿಯ ಮಕ್ಕಳಿಗೆ ಕಾನ್ವೆ೦ಟ್ ಶಾಲೆಗೆ ಸೇರಿಸುವ ಮತ್ತು ಅವರನ್ನ ನಿತ್ಯ ಬರುವ ಶಾಲಾ ವಾಹನದಲ್ಲಿ ಕಳಿಸುವ ಶೋಕಿ ಪ್ರಾರ೦ಭವಾಯಿತು ಮುಂದೆ ಹೆಚ್ಚಿನ ಶಿಕ್ಷಣಕ್ಕೆ ಆಳ್ವಾಸ್ಗೆ ಸೇರಿಸಿದರು.   ಎಲ್ಲಾ ಸುಖಾಂತ್ಯದಲ್ಲಿ ಆಗಲಿಲ್ಲ ಮಗು ಈಗ ಡ್ರಗ್ ವ್ಯಸನಿ, ಅಲ್ಲಿ ಗಾಂಜಾದಿಂದ ಪ್ರಾರಂಭವಾಗಿ ಈಗ ಬಹಳ ಮುಂದುವರಿದಿದ್ದಾನೆ, ...