ಗಾಯತ್ರಿ_ಮಂತ್ರ ಮಹರ್ಷಿ_ವಿಶ್ವಾಮಿತ್ರರು ಭಾಗ_2. ಗಾಯತ್ರಿ ಮಂತ್ರ ಋಗ್ವೇದದ ಅತ್ಯಂತ ಪ್ರಸಿದ್ಧ ಹಾಗೂ ಪ್ರಮುಖವಾದ ಮಂತ್ರ. ಇದು ಸೂರ್ಯದೇವನ ಜ್ಞಾನಶಕ್ತಿಯನ್ನು ಆರಾಧಿಸುವ ಪ್ರಾರ್ಥನೆಯಾಗಿದೆ. ನಿಮಗೆ ಗಾಯಿತ್ರಿ ಮಂತ್ರದ ಬಗ್ಗೆ ಆಸಕ್ತಿ ಇದ್ದರೆ ಈ ಲೇಖನ ಪೂರ್ಣ ಓದಿ ನಿಮ್ಮ ಆತ್ಮೀಯರಿಗೆ ಗಾಯಿತ್ರಿ ಮಂತ್ರದ ಈ ಪೋಸ್ಟ್ ಶೇರ್ ಮಾಡಿ. ಬ್ರಹ್ಮರ್ಷಿ ವಿಶ್ವಾಮಿತ್ರರು ಪ್ರಾಚೀನ ಭಾರತೀಯ ಇತಿಹಾಸ ಮತ್ತು ಪುರಾಣಗಳಲ್ಲಿ ಅತ್ಯಂತ ಪ್ರಭಾವಶಾಲಿ ಋಷಿಗಳಲ್ಲಿ ಒಬ್ಬರು. ಹುಟ್ಟಿನಿಂದ ರಾಜನಾಗಿದ್ದರೂ ಕಠಿಣ ತಪಸ್ಸಿನ ಮೂಲಕ ಬ್ರಹ್ಮರ್ಷಿ ಪದವಿ ಪಡೆದ ಅಸಾಧಾರಣ ವ್ಯಕ್ತಿತ್ವ ಇವರದು. ಮೂಲ ಹೆಸರು ಕೌಶಿಕ (ಕುಶಿಕ ವಂಶದ ರಾಜ) ಕನ್ಯಾಕುಬ್ಜದ ಇಂದಿನ ಕನೌಜ್ ಪ್ರಬಲ ಅರಸನಾಗಿದ್ದ ವಿಶ್ವಾಮಿತ್ರರು, ವಸಿಷ್ಠ ಮಹರ್ಷಿಗಳ ಬಳಿಯಿದ್ದ ಕಾಮಧೇನುವನ್ನು ಪಡೆಯಲು ಹೋಗಿ ಪರಾಭವಗೊಂಡರು. ರಾಜಬಲಕ್ಕಿಂತ (ಕ್ಷಾತ್ರ ತೇಜಸ್ಸು) ಆತ್ಮಬಲ ಮತ್ತು ತಪೋಬಲವೇ (ಬ್ರಹ್ಮ ತೇಜಸ್ಸು) ಶ್ರೇಷ್ಠವೆಂದು ಅರಿತು, ರಾಜ್ಯ ತೊರೆದು ಕಠಿಣ ತಪಸ್ಸಿಗೆ ತೆರಳಿದರು. ಋಗ್ವೇದದ ಅತ್ಯಂತ ಪವಿತ್ರವಾದ 'ಗಾಯತ್ರಿ ಮಂತ್ರ' ವಿಶ್ವಾಮಿತ್ರರಿಗೆ ತಪಸ್ಸಿನಲ್ಲಿ ದರ್ಶನವಾಯಿತು. ಸಶರೀರವಾಗಿ ಸ್ವರ್ಗಕ್ಕೆ ಹೋಗಬಯಸಿದ ತ್ರಿಶಂಕು ರಾಜನಿಗೆ ಇಂದ್ರ ಪ್ರವೇಶ ನಿರಾಕರಿಸಿದಾಗ ತನ್ನ ತಪೋಶಕ್...