Skip to main content

Posts

Showing posts with the label Babiya very famous crocodile died and it's history

Blog number 1012. ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಕುಂಬಳೆಯ ಅನಂತಪುರದ ಅನಂತಪದ್ಮನಾಭ ದೇವಾಲಯದ ಕೊಳದಲ್ಲಿನ ಬಬಿಯಾ ಎಂಬ ಮೊಸಳೆಯ ಮೃತ್ಯುವಿನ ಸುದ್ದಿ ವೈರಲ್

#ದೇಶ_ವಿದೇಶದಲ್ಲಿ_ಪ್ರಖ್ಯಾತವಾಗಿದ್ದ_ಬಬಿಯಾ_ಎಂಬ_ಮೊಸಳೆ. #ನಿನ್ನೆ_ಕೇರಳದ_ಕಾಸರಗೋಡು_ಜಿಲ್ಲೆಯಲ್ಲಿ_ಶೋಕಾಚಾರಣೆ #ಬಬಿಯಾ_ಸಾವಿನ_ಸುದ್ದಿ_ವಿಶ್ವದಾದ್ಯಂತ_ವೈರಲ್ #ಬಬಿಯಾ_ಹೆಸರಿನ_ಅರ್ಥ? #ಮು೦ದಿನ_ಬಬಿಯಾಳ_ಆಗಮನದ_ನಿರೀಕ್ಷೆ_ಹುಸಿಯಾಗದಿರಲಿ     ಬಬಿಯಾ ಎಂದರೆ ಇಂಗ್ಲೀಷ್ ನಲ್ಲಿ ಲಿಟಲ್ ಗರ್ಲ್, ಸ್ವೀಟ್ ಗರ್ಲ್, ಯಂಗ್ ಗರ್ಲ್ ಅಂತ ಈ ಹೆಸರು 80 ವಷ೯ದ ಹಿಂದಿನ ಈ ದೇವಾಲಯದಲ್ಲಿದ್ದ ಮೊಸಳೆಗೂ ಇದೇ ಹೆಸರು ಇತ್ತು ಅಂದರೆ ಈ ಹೆಸರು ಬ್ರಿಟಿಷರೇ ಕರೆದಿರಬೇಕು.    1945 ಕ್ಕೆ ಪೂರ್ವದಲ್ಲಿ ಬ್ರಿಟಿಷ್ ಅಧಿಕಾರಿ ಹಿಂದಿನ ಈ ದೇವಾಲಯದ ಮೊಸಳೆ ಬಬಿಯಾಕ್ಕೆ ಗುಂಡಿಕ್ಕಿ ಸಾಯಿಸಿದ್ದ ಅದರ ಮರುದಿನವೇ ಈ ಕೊಳದಲ್ಲಿ ಇನ್ನೊಂದು ಮೊಸಳೆ ಪ್ರತ್ಯಕ್ಷ ಆಯಿತು ಇದು ಭಕ್ತರಿಗೆ ಪವಾಡದಂತೆ ಕಂಡು ಬಂದು ಹರ್ಷ ವ್ಯಕ್ತವಾಯಿತು ಮತ್ತು ಅದಕ್ಕೆ ಬಬಿಯಾ ಅಂತಲೇ ನಾಮಕರಣ ಮಾಡಿದರು.    ಸಾಮನ್ಯವಾಗಿ ಮೊಸಳೆಗಳ ಆಯಸ್ಸು 70 ರಿಂದ 120 ವರ್ಷ ತನಕ ಇದೆ, ನಿನ್ನೆ ಮೃತವಾದ ಬಬಿಯಾಕ್ಕೆ ಸುಮಾರು 80 ವರ್ಷ ಆಗಿದೆ ಎನ್ನುತ್ತಾರೆ.   ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲ್ಲೂಕಿನ ಕುಂಬಳೆ ಸಮೀಪದ ಅನಂತಪುರ (ಕೆಲ ದಾಖಲೆಯಲ್ಲಿ ಆನಂದಪುರಂ ಅಂತಲೂ ಕರೆಯುವ) ದ ಅನಂತಪದ್ಮನಾಭ ದೇವಸ್ಥಾನದ ಹಾಲಿ ಅರ್ಚಕರು ಹವ್ಯಕರು.    ಈ ದೇವಾಲಯ ವಿಷ್ಣುವಿನ ದೇವಾಲಯ ಇಲ್ಲಿನ ಕೆರೆಯ ಗುಹೆ ತ...