Skip to main content

Posts

Showing posts with the label 19th Anniversary of Shimoga district Kannada daily JANAHORATA

Blog number 1201. ಶೃಂಗೇಶ್ ಸಂಪಾದಕತ್ವದಲ್ಲಿ ಶಿವಮೊಗ್ಗ ಜಿಲ್ಲಾ ದೈನಿಕ ಜನ ಹೋರಾಟ ಪತ್ರಿಕೆಯ 19 ನೇ ಹುಟ್ಟುಹಬ್ಬದ ಶುಭಾಶಯಗಳು.

#ಶೃ೦ಗೇಶರ_ಜನಹೋರಾಟ_ದಿನ_ಪತ್ರಿಕೆಗೆ_18ರ_ಪ್ರಾಯ #ಇವತ್ತಿನ_ಪತ್ರಿಕೆ_19ನೇ_ವಷ೯ದ_ಮೊದಲ_ಪತ್ರಿಕೆ  #ಜನಹೋರಾಟ_ಶಿವಮೊಗ್ಗ_ಜಿಲ್ಲಾ_ದಿನಪತ್ರಿಕೆಯಾಗಿ_19ನೇ_ವಾಷಿ೯ಕೋತ್ಸವದ_ಸಂದರ್ಭದಲ್ಲಿ #ಸಂಪಾದಕರಾದ_ಶೃಂಗೇಶ್_ಮತ್ತು_ಅವರ_ಪತ್ರಿಕಾ_ಬಳಗಕ್ಕೆ_ಅಭಿನಂದನೆಗಳು.      ಶೃ೦ಗೇಶ್ ಶಿವಮೊಗ್ಗ ಪತ್ರಿಕೋದ್ಯಮದಲ್ಲಿ ಒಂದು ಹೊಸ ಆಯಮ ತಂದವರು.     ಶೃ೦ಗೇಶ್ ಪರಿಚಯ ನಾನು ಶಿವಮೊಗ್ಗ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗಿ೦ದ ಪ್ರಾರಂಭವಾದದ್ದು ಇಲ್ಲಿ ತನಕ ಮುಂದುವರಿದು ಕೊಂಡು ಬಂದಿದೆ.      ಅವರು ಶಿವಮೊಗ್ಗದ ಕ್ರಾಂತಿ ದೀಪ ಪತ್ರಿಕೆಯಲ್ಲಿ ವರದಿಗಾರರಾಗಿದ್ದಾಗ ಅವರ ಮೇಲಿನ ಹಲ್ಲೆ ಆದಾಗ ಅವರನ್ನೆಲ್ಲ ನಂಜಪ್ಪ ಆಸ್ಪತ್ರೆಗೆ ಸೇರಿಸಿದ್ದಾರೆಂದಾಗ ನಾವೆಲ್ಲ ಜಿಲ್ಲಾ ಪಂಚಾಯತ್ ಕಚೇರಿಯಿಂದ ಅಲ್ಲಿಗೆ ಹೋಗಿದ್ದೆವು.        ಮರುದಿನ ನಡೆದ ಪ್ರತಿಭಟನಾ ಮೆರವಣಿಗೆ ಮತ್ತು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆಯಲ್ಲಿ ಬಾಗಿಯಾದ ನೆನಪು ಹಸಿರಾಗಿದೆ.       ರವಿ ಬೆಳೆಗೆರೆ ಸಾರಥ್ಯದ ಹಾಯ್ ಬೆಂಗಳೂರಲ್ಲಿ ಇವರ ತನಿಖಾ ವರದಿಗಳು ಓದಲು ರೋಮಾಂಚನ ಉಂಟು ಮಾಡುತ್ತಿತ್ತು, ಇಂತಹ ವರದಿಗಳಿಂದ ಇವರಿಗೆ ರೋವಿಂಗ್ ರಿಪೋಟ೯ರ್ ಎಂಬ ಬಿರುದನ್ನ ರವಿ ಬೆಳೆಗೆರೆಯವರೆ ನೀಡಿದ್ದಾರೆ.       ನಮ್ಮ ನಾಡು ಪತ್ರಿಕೆಯ ಸಂಪಾದಕರಾಗಿ ಜಿಲ್ಲ...