Blog number 1952. ನನ್ನ ರಾಜಕಾರಣದ ನಿವೃತ್ತಿಗೆ ಒಂದು ದಶಕ, 2014 ಲೋಕ ಸಭಾ ಚುನಾವಣೆಯ ಪ್ರಚಾರ ಸಭೆಗಳು ರಾಜಕಾರಣದ ಕೊನೆಯ ದಿನಗಳ ನೆನಪು.
#ಪುಲ್ವಾಮ_ಭಾರತೀಯ_ಸೈನಿಕರ_ಹತ್ಯಾಕಾಂಡಕ್ಕೆ_ಐದು_ವರ್ಷ #ಭಯೋತ್ಪಾದನೆ_ನಿಗ್ರಹ_ಅಷ್ಟು_ಸುಲಭವಲ್ಲ_ವಿಶ್ವದ_ಹಿರಿಯಣ್ಣ_ಅಮೇರೀಕಾವೇ_ಬಸವಳಿದಿದೆ. #ಅಯನೂರು_ಮಂಜುನಾಥರು_2014ರ_ಲೋಕಸಭಾ_ಚುನಾವಣೆಯಲ್ಲಿ_ಜಿಲ್ಲಾ_ಭಾಜಪ_ಅಧ್ಯಕ್ಷರು #ಅವರ_ಮಾತುಗಳು_ಪರಿಣಾಮಕಾರಿಯಾಗಿ_ಮತಗಳಾಗಿ_ಪರಿವರ್ತನೆ_ಆಯಿತು #ಈ_ಚುನಾವಣೆಯೇ_ನನ್ನ_ರಾಜಕೀಯ_ಜೀವನದ_ಕೊನೆ #ರಾಜಕೀಯದಿಂದ_ನಿವೃತ್ತಿ_ಫೋಷಿಸಿಕೊಂಡು_10_ವರ್ಷ_ಆಯಿತು. ಇವತ್ತಿಗೆ ಸರಿಯಾಗಿ 5 ವರ್ಷದ ಹಿಂದೆ ಪುಲ್ವಾಮ ಸೈನಿಕರ ಹತ್ಯಾಕಂಡ ನಡೆಯಿತು,ಇಲ್ಲಿ ಈಗ ಈ ವಿಚಾರ ರಾಜಕೀಯ ಪಕ್ಷಗಳ ಪರಸ್ಪರ ಕೆಸರೆರಾಚಟ ಸರಿ ಅಲ್ಲ, ಸೈನ್ಯದ ವಿಚಾರವನ್ನ ಚುನಾವಣ ಅಸ್ತ್ರವಾಗಿ ಬಳಸುವುದೂ ಕೂಡ ಸರಿಯಲ್ಲ, ಇದನ್ನೆಲ್ಲ ಎದುರಿಸಲು ನೈತಿಕ ಬೆಂಬಲ ಬೇಕಾಗಿದೆ, ಭಕ್ತರು V/S ಗುಲಾಮರು ಎನ್ನುತ್ತಾ ಪರಸ್ಪರ ನಿಂದನೆಯ ಸೋಷಿಯಲ್ ಮೀಡಿಯಾದ ವಚು೯ಯಲ್ ವಾರ್ ನ ಪೌರುಷಕ್ಕೆ ಯಾವುದೇ ಬೆಲೆ ಇಲ್ಲ. ಇದನ್ನ ಇಲ್ಲಿ ಉಲ್ಲೇಖಿಸಲು ಕಾರಣ ಇದೆ, 2013 ರ ವಿದಾನಸಭಾ ಚುನಾವಣೆಯಲ್ಲಿ ನಾನು ಸಾಗರ ತಾಲ್ಲೂಕಿನ JDS ಪಾಟಿ೯ ಅಧ್ಯಕ್ಷ ನಮ್ಮ ಅಭ್ಯಥಿ೯ 2 ಬಾರಿ ಬಿಜೆಪಿ ಶಾಸಕರಾಗಿದ್ದ ಗೋಪಾಲಕೃಷ್ಣ ಬೇಳೂರು ಆ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ನ ಕಾಗೋಡು ವಿಜಯಿ ಆದರು, ಬಿಜೆಪಿ ಅಭ್ಯರ್ಥಿ ಶ್ರೀಮತಿ ಶರಾವತಿ ಸಿ.ರಾವ್ ಐದು ಸಾವಿರ ಮತ ಪಡೆದರು, ನಮ್ಮ ಅಭ್ಯರ್ಥಿ ಗೋಪಾಲ ಕೃಷ್ಣ ಬೇಳೂರು 23 ಸಾ...