Blog number 1212. ತ್ಯಾಗರ್ತಿಯ ಒಂದು ಕಾಲದ ಸಮಾಜ ಸುದಾರಕ ಕೊಡುಗೈ ದಾನಿ ಇನಾಂದಾರ್ ಗುರುಮೂರ್ತಿ ರಾಯರು ಮತ್ತು ನಮ್ಮ ತಂದೆಯ ಒಡನಾಟದ ವರ್ಜಿನಿಯಾ ತಂಬಾಕು ಬೆಳೆಗಾರರ ಸಂಘಟನೆ.
#ತ್ಯಾಗತಿ೯ಯ ಒಂದು ಕಾಲದ ಸಮಾಜ ಸುಧಾರಕ ಕೊಡುಗೈ ದಾನಿ ಇನಾಂದಾರ್ ಗುರುಮೂತಿ೯ ರಾಯರು. #ತಪಸ್ವಿ ವರದಳ್ಳಿ ಶ್ರೀಧರ ಸ್ವಾಮಿಗಳ ಆರಾದಕರು. #ಇವರು ಮತ್ತು ನಮ್ಮ ತಂದೆ ಎಲ್ಲಾ ವಜಿ೯ನಿಯಾ ತಂಬಾಕು ಬೆಳೆಗಾರರಾಗಿದ್ದು. #ತಂಬಾಕು ಕಂಪನಿ ಮುಚ್ಚಿದ್ದರಿಂದ ನಷ್ಟ ಅನುಭವಿಸಿದವರು. #ಹೈದ್ರಾಬಾದ್ ನಲ್ಲಿ ವರ್ಜಿನಿಯಾ ಕಂಪನಿ ಮಾಲಿಕ ಮಾಜಿ ರಾಜ್ಯ ಸಭಾ ಸದಸ್ಯರನ್ನು 30 ವರ್ಷದ ನಂತರ ಬೇಟಿಯ ಅವಕಾಶ 1974-75ರಲ್ಲಿ ನಮ್ಮ ತಂದೆ ವಜಿ೯ನಿಯಾ ತಂಬಾಕು ಬೆಳೆದಿದ್ದರು ಸದರಿ ಕಂಪನಿ ಆನಂದಪುರO ಮತ್ತು ತ್ಯಾಗತಿ೯ ಭಾಗದಲ್ಲಿನ ಅನೇಕ ರೈತರೊಂದಿಗೆ ಬೆಳೆ ಖರೀದಿಸುವ ಒಪ್ಪ೦ದ ಮಾಡಿ ಬ್ಯಾಂಕಿನಿಂದ ಬೆಳೆ ಸಾಲ ಮತ್ತು ತಂಬಾಕು ಹದ ಮಾಡುವ ಮನೆ (ಬ್ಯಾರನ್) ಗೆ ರೈತರ ಜಮೀನು ಅಡಮಾನ ಮಾಡಿ ಸಾಲ ಕೊಡಿಸಿತ್ತು ಒಂದೇ ವಷ೯ದಲ್ಲಿ ಸದರಿ ಸ೦ಸ್ಥೆ ನಾಪತ್ತೆ ಆದ್ದರಿಂದ ಸಾಲ ಮಾಡಿದ ರೈತರು ಹೈರಾಣ ಆದರು ಹಾಗಾಗಿ ಸಕಾ೯ರಕ್ಕೆ ಸಾಲ ಮನ್ನಕ್ಕಾಗಿ ನಷ್ಟ ಮಾಡಿದ ಕಂಪನಿ ವಿರುದ್ಧ ಕ್ರಮಕ್ಕಾಗಿ ಸಂಘಟಿತರಾಗಿ ಹೋರಾಟ ಪ್ರಾರಂಬಿಸಿದ್ದರು ಈ ಸಂಬಂದದ ಸಭೆಗಳು ಆನಂದಪುರದ ನಮ್ಮ ಮನೇಲಿ ನಡೆಯುತ್ತಿತ್ತು. ಆಗ ತ್ಯಾಗತಿ೯ ಭಾಗದಿಂದ ಗುರುಮೂತಿ೯ ರಾಯರು, ಬರೂರು ಸದಾಶಿವಪ್ಪ ಗೌಡರು, ಬರೂರು ಬಂಗಾರಪ್ಪನವರು ಬರುತ್ತಿದ್ದರು, ಸ್ಧಳಿಯವಾಗಿ ಖೈರಾ ಚಂದ್ರಶೇಖರಗೌಡರು, ತುಪ್ಪೂರಿನ ಸತ್ಯನಾರಾಯಣಣ್ಣ ಮತ್ತಿತರ ತಂಬಾಕು ಬೆಳೆಗಾರರು ಇರುತ್ತಿದ್ದರ ಆಗ ನಾನು 5ನೇ ತ...