Blog number 994. ಖ್ಯಾತ ಸಾಹಿತಿ - ವಿಮರ್ಶಕ ಉದಯ ಕುಮಾರ್ ಹಬ್ಬು ನನ್ನ ಕಾದಂಬರಿ ಬೆಸ್ತರ ರಾಣಿ ಚಂಪಕಾ ಓದಿ ವಿಮರ್ಶೆ ಮಾಡಿದ್ದಾರೆ ಇವರು ಕೆಳದಿ ಇತಿಹಾಸ ಸಂಶೋದಕರೂ ಹೌದು
#ಉದಯ_ಕುಮಾರ್_ಹಬ್ಬು ಕಾರವಾರ ಜಿಲ್ಲೆಯವರು ನಿವೃತ್ತ ಪ್ರಾಂಶುಪಾಲರು ಕೆಳದಿ ಇತಿಹಾಸ ಸಮಗ್ರ ಅಧ್ಯಾಯನ ಮಾಡಿದ್ದಾರೆ ಅವರು ನನ್ನ ಕಾದಂಬರಿ ಓದಿ ಅತ್ಯುತ್ತಮ ವಿಮಶೆ೯ ಮಾಡಿದ್ದಾರೆ. Aravinda Chokkadi ಯವರು ಕೆ.ಅರುಣಪ್ರಸಾದ್ ಬರೆದಿರುವ ಈ ಕಾದಂಬರಿ "ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತಿರುವ " ಬೆಸ್ತರರಾಣಿ ಚಂಪಕಾ" ಕುರಿತು ಒಳ್ಳೆಯ ಮಾತುಗಳನ್ನು ಬರೆದಿದ್ದರು. ನಾನು ಶ್ರೀ ಕೆ. ಅರುಣಪ್ರಸಾದರಿಗೆ ಪುಸ್ತಕ ಕಳಿಸುವಂತೆ ಮೆಸ್ಯೇಜ್ ಹಾಕಿದೆ. ತಡ ಮಾಡದೆ ಕಳಿಸಿದ್ದಾರೆ. ಅವರಿಗೆ ನಾನು ಆಭಾರಿ. ನಾನು ಕೆಳದಿಗೆ ಮತ್ತು ಇಕ್ಕೇರಿಗೆ ಹೋದಾಗ ಅಲ್ಲಿ ಪ್ರಾಚ್ಯ ಸಂಗ್ರಹಾಲಯಕ್ಕೆ ಹೋಗಿ. ಅದರ ಹತ್ತಿರ ಮನೆ ಮಾಡಿದ್ದ ಮಾನ್ಯ ಗುಂಡಾ ಜೋಯಿಸ್ ರಲ್ಲಿ ಹೋಗಿ ಮಾತಾಡಿಸಿ ಕೆಲವು ಪುಸ್ತಕಗಳನ್ನು ಖರೀದಿ ಮಾಡಿದ್ದೆ ಅವುಗಳಲ್ಲಿ The Glorious Keladi(History and Culture) ಪುಸ್ತಕದ ಜೊತೆಗೆ ಕನ್ನಡದಲ್ಲಿ ಅನುವಾದಗೊಂಡ ಡೆಲ್ಲಾ ವಲ್ಲೆಯ ಪುಸ್ತಕಗಳನ್ನು ಖರೀದಿಸಿದ್ದೆ. ಈ ಕಾದಂಬರಿಯು ಚಂಪಕಾ ಎಂಬ ಬೆಸ್ತರ ಯುವತಿ ಕೆಳದಿಯ ಅರಸನಾದ ವೆಂಕಟಪ್ಪ ನಾಯಕನ ಕಣ್ಣಿಗೆ ಅವಳ ರಂಗೋಲಿ ಕಲೆಯ ಮೂಲಕ ಬೀಳುತ್ತಾಳೆ ಅವಳನ್ನು ವಿದ್ಯುಕ್ತವಾಗಿ ವೆಂಕಟಪ್ಪ ನಾಯಕ ವಿವಾಹವಾಗುತ್ತಾನೆ. ಈ ವಿವಾಹ ವೆಂಕಟಪ್ಪ ನಾಯಕನ ಪಟ್ಟದ ರಾಣಿಗೆ ಸರಿ ಕಾಣದೆ ವಿವಾಹದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾಳೆ. ಮತ್ತು ಅವಳನ್ನು ಮತ್ತು ಅವಳ ತ...