Skip to main content

Posts

Showing posts with the label World story of Tomoto...

Blog number 1838. ಜಗತ್ತು ಆವರಿಸಿರುವ ಟೊಮೋಟೋ ಕಥೆ, ಟೊಮೋಟೋ ಇಲ್ಲದೆ ಅಡುಗೆ ಮಾಡಲಾಗುವುದಿಲ್ಲ ಎಂಬ ಭ್ರಮಾಲೋಕದಲ್ಲಿ...

#ಟೋಮೊಟಾ_ಇಲ್ಲದ_ಅಡುಗೆ_ಸಾಧ್ಯವಿಲ್ಲ_ಎ೦ಬ_ಭ್ರಮೆ #ಹದಿನಾರನೆ_ಶತಮಾನದಲ್ಲಿ_ಪೋರ್ಚುಗೀಸರಿಂದ_ಭಾರತಕ್ಕೆ  #ಐವತ್ತು_ವರ್ಷದ_ಹಿಂದೆ_ನಮ್ಮಲ್ಲಿ_ಬಳಕೆ_ಇರಲಿಲ್ಲ #ಅಮೇರಿಕಾದಲ್ಲಿ_1835ರ_ತನಕ_ಟೊಮೋಟೋ_ವಿಷ_ಎಂಬ_ನಂಬಿಕೆ_ಆಗಿತ್ತು. #ಅಮೇರಿಕಾ_ಕೋರ್ಟ್_1893ರಲ್ಲಿ_ಟೋಮೋಟೋ_ತರಕಾರಿ_ಎಂದು_ತೀರ್ಪು_ನೀಡಿದೆ #ಆಗ_ಅಮೇರಿಕಾದಲ್ಲಿ_ಹಣ್ಣಿಗೆ_ತೆರಿಗೆ_ಮತ್ತು_ತರಕಾರಿಗೆ_ತೆರಿಗೆ_ಇರಲಿಲ್ಲ. #ಹಣ್ಣು_ಮತ್ತು_ತರಕಾರಿ_ಆಗಿ_ಬಳಕೆ.    ಕೆಲವು ಬಾರಿ ಅಕಾಲಿಕ ಮಳೆಯಿಂದ ಟೋಮೋಟೋ ದಾರಣೆ ಕಿಲೋಗೆ ನೂರು ದಾಟಿದೆ, 25 ಕೆ.ಜಿಯ ಟೋಮೋಟೋ ಬಾಕ್ಸ್ 2000 ಕ್ಕೆ ರೈತರಿಂದ ಖರೀದಿ ಆಗುತ್ತದೆ ಮತ್ತೆ ಕೆಲ ಬಾರಿ ಟೋಮೋಟೋ ದಾರಣೆ ಕುಸಿದು ರೈತರು ರಸ್ತೆಗೆ ಟೋಮೋಟೋ ಸುರಿದು ಪ್ರತಿಭಟನೆ ಮಾಡುತ್ತಾರೆ ಆದರೆ ಟೋಮೋಟೋ ಬೇಡಿಕೆ ಮಾತ್ರ ಕಡಿಮೆ ಆಗುವುದಿಲ್ಲ.   50 ವರ್ಷದ ಹಿಂದೆ ನಮ್ಮ ತರಕಾರಿ ಪಟ್ಟಿಯಲ್ಲಿ ಟೋಮೋಟೋ ಇರಲಿಲ್ಲ, ಸ್ಥಳಿಯ ತರಕಾರಿ ಮಾರಾಟಗಾರರ ಬುಟ್ಟಿಯಲ್ಲೂ ಟೋಮೋಟೋ ಇರಲಿಲ್ಲ.   ದಕ್ಷಿಣ ಅಮೇರಿಕಾದ ಆಗ್ನೇಯ ಭಾಗ ಟೋಮೋಟೋ ಮೂಲವಂತೆ, 18ನೇ ಶತಮಾನದ (1835ರ ವರೆಗೆ)  ತನಕ ಟೋಮೋಟೋ ಅಮೇರಿಕಾದಲ್ಲಿ ವಿಷ ಪೂರಿತ ಎಂಬ ಬಾವನೆ ಇತ್ತು, ಸ್ಪಾನಿಷ್ ರಿಂದ ಯುರೋಪಿಗೆ ಪರಿಚಯ ಆಗುತ್ತದೆ.   ಕ್ರಿಶ 700 ರಲ್ಲಿ ಟೋಮೋಟೋ ಮೂಲ ಹೆಸರು ಟೋಮಾಟಿ (Tomati) ಆಗಿತ್ತು.  ...