Skip to main content

Posts

Showing posts with the label Local MLA should take initiative to protect this 1945 middle school building built by Ramakrishna iyangar in the memory of his father Srinivas iyangar.

Blog number 892.ಆನಂದಪುರಂ ಇತಿಹಾಸ ಭಾಗ-74. ಆನಂದಪುರಂನ ಕೊಡುಗೈ ದಾನಿ ಜಮೀನ್ದಾರ್ ರಾಮಕೃಷ್ಣ ಅಯ್ಯಂಗಾರ್ ತಮ್ಮ ತಂದೆ ಶ್ರೀನಿವಾಸ ಅಯ್ಯಂಗಾರ್ ಸ್ಮರಣಾರ್ಥ 1 - ಜನವರಿ - 1945 ರಲ್ಲಿ ನಿರ್ಮಿಸಿ ಊರಿಗೆ ಅಪಿ೯ಸಿದ್ದ ಮಿಡ್ಲ್ ಸ್ಕೂಲ್ ಬೃಹತ್ ಕಟ್ಟಡ ಸಂಬಂದ ಪಟ್ಟ ಇಲಾಖೆ ನಿರ್ಲಕ್ಷದಿಂದ ಶಿಥಿಲಾವಸ್ಥೆಗೆ ತಲುಪುತ್ತಿದೆ

#ಆನಂದಪುರಂ_ಇತಿಹಾಸ_ಭಾಗ_74 #ಆನಂದಪುರಂನ_ಕೊಡುಗೈದಾನಿ_ರಾಮಕೃಷ್ಣ_ಆಯ್ಯ೦ಗಾರರು_ನಿರ್ಮಿಸಿದ್ದ_ಮಿಡ್ಲ್_ಸ್ಕೂಲ್ #ಅವರ_ತಂದೆ_ಶ್ರೀನಿವಾಸಯ್ಯಂಗಾರ್_ಸ್ಮಾರಕ #ಸುಮಾರು_75_ವರ್ಷಕಾಲ_ಸ್ಥಳಿಯರಿಗೆ_5_ರಿಂದ_7ನೇ_ತರಗತಿವರೆಗೆ_ವಿದ್ಯಾಬ್ಯಾಸ_ನೀಡಿತ್ತು #ಆನಂದಪುರಂ_ರೈಲ್ವೆಸ್ಟೇಷನ್_ಮಾರ್ಗದಲ್ಲಿದ್ದ_ಸುಸಜ್ಜಿತ_ಶಾಲೆ_ಈಗ_ಶಿಥಿಲಾವಸ್ಥೆಯಲ್ಲಿ.     ಆನಂದಪುರಂ ಎಂಬ ಹೆಸರು ಕೆಳದಿ ರಾಜ ವೆಂಕಟಪ್ಪ ನಾಯಕರು ತಮ್ಮ ಮತ್ತು ರಾಣಿ ರಂಗೋಲಿ ಪ್ರವೀಣೆ ಬೆಸ್ತರ ಚಂಪಕಾಳ ದುರಂತ ಪ್ರೇಮ ದಾಂಪತ್ಯದಿಂದ #ಚಂಪಕ_ಸರಸ್ಸು ಎಂಬ ಸ್ಮಾರಕ ನಿರ್ಮಿಸಿ ಈ ಪ್ರದೇಶಕ್ಕೆ ಈ ಹೆಸರು ಇಟ್ಟರು ಎಂದು ಗೆಜೆಟಿಯರ್ ನಲ್ಲಿ ಉಲ್ಲೇಖವಿದೆ.  ಕೆಳದಿ ಅರಸರ ನಂತರ ಆನಂದಪುರಂ ಟಿಪ್ಪು ಸುಲ್ತಾನರ ಆಡಳಿತಕ್ಕೆ ಒಳಪಟ್ಟಿತ್ತು ನಂತರ ದೇಶ ಸ್ವಾತಂತ್ರ ಪಡೆಯುವ ತನಕ ಮೈಸೂರು ಅರಸರ ಆಡಳಿತಕ್ಕೆ ಒಳಪಟ್ಟಿತ್ತು.   ಅರಸರ ಆಡಳಿತ ಕಾಲದಲ್ಲಿ ಆನಂದಪುರಂನ ಭೂ ಮಾಲಿಕರು ಕೊಡುಗೈ ದಾನಿಗಳಾದ ಹಾಸನ ಜಿಲ್ಲೆಯ ಗೊರೂರಿನಿಂದ ಬಂದು ಇಲ್ಲಿ ನೆಲೆಸಿದ ರಾಮಕೃಷ್ಣ ಅಯ್ಯಂಗಾರರು ಆನಂದಪುರಂಗಾಗಿ ಶಾಲೆ, ಆಸ್ಟತ್ರೆ, ಪಶು ವೈದ್ಯ ಶಾಲೆ, ಕಾಲೇಜು, ದೇವಾಲಯ ಅಭಿವೃದ್ಧಿ ಹೀಗೆ ಅನೇಕ ಜನ ಉಪಯೋಗಿ ಕಾರ್ಯ ಮಾಡುತ್ತಾರೆ.   1952 ರಲ್ಲಿ ನಡೆದ ಪ್ರಥಮ ವಿಧಾನಸಭಾ ಚುನಾವಣೆಯಲ್ಲಿ ಸಾಗರ - ಹೊಸನಗರ- ತೀರ್ಥಹಳ್ಳಿ ಜಂಟಿ ಕ್ಷೇತ್ರದಿಂದ ಇವರ ಪುತ...