Skip to main content

Posts

Showing posts with the label 2026 Linganamakki Dam

4111. ಈ_ವರ್ಷ_2026_ಲಿಂಗನಮಕ್ಕಿ_ಆಣೆಕಟ್ಟು_ತುಂಬುತ್ತಾ

ಈ_ವರ್ಷ_ಲಿಂಗನಮಕ್ಕಿ_ಆಣೆಕಟ್ಟು_ತುಂಬುತ್ತಾ? ...   ಮಲೆನಾಡಿನಲ್ಲಿ ಮುಂಗಾರು ಮಳೆ ಕೊರತೆ ಆಗಿದೆ ಆದರೆ ಜೋಗ್ ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರು ನಿರಾಶೆ ಪಡಬೇಕಾಗಿಲ್ಲ ಯಾಕೆಂದರೆ ಜೋಗ್ ಜಲಪಾತ ಸುತ್ತಲಿನ ಪ್ರದೇಶದಲ್ಲಿ ಆಗುತ್ತಿರುವ ಮಳೆಯಿಂದ ಜೋಗ್ ಜಲಪಾತ ನೋಡಲು ಸುಂದರವಾಗಿ ಕಾಣುತ್ತದೆ.  2025 ಮತ್ತು 2024ರ ಆಗಸ್ಟ್ ತಿಂಗಳ 1 ನೇ ತಾರೀಖಿನಲ್ಲಿನ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1810 ಅಡಿ ತಲುಪಿತ್ತು.   ನಿನ್ನೆ ಬೆಳಿಗ್ಗೆ 8 am  31-ಜುಲೈ-2026 ಕ್ಕೆ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1776 ಅಡಿ ತಲುಪಿತ್ತು ಇದು ಜಲಾಶಯದ 31.30 % ಮಾತ್ರ ನೀರು ಸಂಗ್ರಹ ಆಗಿದೆ.  ( 31 - ಜುಲೈ-2026 ರ ಬೆಳಗಿನ ಮಾಹಿತಿಯ ಪ್ರಕಾರ).   ಕಳೆದ ವರ್ಷ ಇದೇ ದಿನಕ್ಕೆ ಡ್ಯಾಮಿನಲ್ಲಿ 1811 ಅಡಿ ನೀರು ಸಂಗ್ರಹವಾಗಿತ್ತು ಅವತ್ತು ಡ್ಯಾಮ್ ಶೇಕಡಾ 83.12% ಭರ್ತಿ ಆಗಿತ್ತು.   ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಅಂಬುತೀರ್ಥದಲ್ಲಿ ಹುಟ್ಟಿ, ಸಾಗರ ತಾಲೂಕಿನ ಲಿಂಗನಮಕ್ಕಿ ಆಣೆಕಟ್ಟಿನಲ್ಲಿ ಸಂಗ್ರಹವಾಗಿ, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ಜೋಗ್ ಜಲಪಾತವಾಗಿ ಧುಮುಕಿ, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಅರಬಿ ಸಮುದ್ರ ಸೇರುತ್ತದೆ ಶರಾವತಿ ನದಿ.   1815 ಆಡಿದಾಟಿದ ಮೇಲೆ ಒಳಹರಿವು ಲೆಕ್ಕಾಚಾರ ಮಾಡಿ ಡ್ಯಾಮಿನ ಕ್ರಸ್ಟ್ ಗೇಟ್ ಗಳನ್ನು ತೆರೆದು ನೀರ...