Skip to main content

Posts

Showing posts with the label My new book Hidden history of chennabyradevi

4126.ಕಾಳುಮೆಣಸಿನರಾಣಿ #ಯುದ್ಧದಲ್ಲಿ_ಸೋತು ಬಂದನಕ್ಕೊಳಗಾದಾಗ ... ನಾನು ಬರೆದಿರುವ ರಾಣಿ ಚೆನ್ನ ಬೈರಾದೇವಿ ಪುಸ್ತಕದ ಒಂದು ಅದ್ಯಾಯ ಇಲ್ಲಿದೆ ಒಮ್ಮೆ ಓದಿ ನಿಮ್ಮ ಅಭಿಪ್ರಾಯಗಳನ್ನ ತಿಳಿಸಿ.

ಕಾಳುಮೆಣಸಿನರಾಣಿ #ಯುದ್ಧದಲ್ಲಿ_ಸೋತು ಬಂದನಕ್ಕೊಳಗಾದಾಗ ...  ನಾನು ಬರೆದಿರುವ ರಾಣಿ ಚೆನ್ನ ಬೈರಾದೇವಿ ಪುಸ್ತಕದ ಒಂದು ಅದ್ಯಾಯ ಇಲ್ಲಿದೆ ಒಮ್ಮೆ ಓದಿ ನಿಮ್ಮ ಅಭಿಪ್ರಾಯಗಳನ್ನ ತಿಳಿಸಿ.   ಈ ಪುಸ್ತಕಕ್ಕೆ ಸೂಕ್ತ ಶಿರ್ಷಿಕೆ ಇನ್ನೂ ಇಟ್ಟಿಲ್ಲ ಮುಂದಿನ ವರ್ಷ ಮುದ್ರಿಸಬೇಕು, ಈ ಪುಸ್ತಕದಲ್ಲಿ ಇಂತಹ ಅನೇಕ ವಿಶೇಷ ಘಟನೆಗಳ ದಾಖಲಿಸಿದ್ದೇನೆ ಮುಂದೆ ಓದಿ...   ತನ್ನೆರೆಡು ಕೈಗಗಳನ್ನ ತನ್ನ ಸೊಂಟದ ಮೇಲೆ ದೃಢವಾಗಿ ಇರಿಸಿ ಯುದ್ಧದಲ್ಲಿ ಪರಾಭವಗೊಂಡು ಶರಣಾದ ಮಹಾ ಮಂಡಲೇಶ್ವರಿ ರಾಣಿ ಚೆನ್ನ ಬೈರಾದೇವಿ ಚಿತ್ರವೇ ಅಂಕೋಲ ತಾಲ್ಲೂಕಿನ ಬಾವಿಕೆರೆಯ ಸಾನದಮನೆಯಲ್ಲಿ ಅವ್ವಿಯರಸಿ ಪ್ರತಿಮೆ ಆಗಿ ಪೂಜಿಸಲ್ಪಡುತ್ತಿದೆ.    ಯುದ್ಧಾನಂತರ ಚೆನ್ನ ಬೈರಾದೇವಿ ಅವರ ಮೇಲಿನ ಅಭಿಮಾನದಿಂದ ಅವರ ಅಭಿಮಾನಿಗಳು ಚಿಕ್ಕ ಚಿಕ್ಕ ಎರಕದ ಮೂರ್ತಿ ಮಾಡಿ ಗುಪ್ತವಾಗಿ ಹಂಚುತ್ತಿದ್ದರಂತೆ.  ರಾಣಿ ಆಡಳಿತ ಮುಗಿದು ಶತಮಾನಗಳಾದರೂ ಈ ರೀತಿ ಎರಕದಲ್ಲಿ ಮೂರ್ತಿ ತಯಾರಿಸಿ ಜನ ವಸತಿ ಪ್ರದೇಶದಲ್ಲಿ ಯಾರೋ ಗುಪ್ತವಾಗಿ ಹಾಕಿ ಹೋಗುತ್ತಿದ್ದರಂತೆ, ಅದನ್ನು ಪ್ರಜೆಗಳು ಜೋಪಾನವಾಗಿ ಕಾಪಾಡಿಕೊಂಡು ತಮ್ಮ ತಮ್ಮ ಮನೆಯಲ್ಲಿ ಅವ್ವಿಯರಸಿ ಎಂದು ಪೂಜಿಸುತ್ತಿದ್ದರಂತೆ.    ಈ ರೀತಿ ರಾಣಿ ಚೆನ್ನ ಬೈರಾದೇವಿ ವಿಗ್ರಹ ಎರಕದಿಂದ ತಯಾರಿಸುವ ಕೆಲಸ ಮಾಡುವವರು ಸಿಕ್ಕಿ ಬಿದ್ದರೆ ಕೆಳದಿ ಸಂಸ್ಥಾನದಲ್ಲಿ ಅವರಿಗೆ ದೊಡ್ಡ ಶಿಕ್ಷೆ ವಿಧಿಸುತ್ತ...