Skip to main content

Posts

Showing posts with the label Shakthi pooja at kodachadri hill Moola Mukambika temple

ಕೊಡಚಾದ್ರಿಯ ಮೂಲ ಮೂಕಾಂಬಿಕ ಸನ್ನಿದಾನದಲ್ಲಿ ನೆರವೇರಿಸುವ ಶಕ್ತಿ ಪೂಜೆಗೆ ಮಹತ್ವ ಇದೆ

#ಕೊಡಚಾದ್ರಿಯ_ಮೂಲಮೂಕಾಂಬಿಕ_ಸನ್ನಿದಾನದಲ್ಲಿನ_ಶಕ್ತಿಪೂಜೆ     ಶಿವಮೊಗ್ಗ ಜಿಲ್ಲೆಯ ಕೊಡಚಾದ್ರಿ ಬೆಟ್ಟದಲ್ಲಿರುವ ಮೂಲ ಮೂಕಾಂಬಿಕ ದೇವರ ಸನ್ನಿದಿಗೆ ಪುರಾಣದ ಇತಿಹಾಸ ಇದೆ ಆದರೆ ಇದು ನಮ್ಮ ರಾಜ್ಯದ ಕನ್ನಡಿಗರಿಗಿಂತ ಕೇರಳ ಮತ್ತು ತಮಿಳುನಾಡಿಗರಿಗೆ ಹೆಚ್ಚು ಗೊತ್ತು.   ಕೊಲ್ಲೂರು ಮೂಕಾಂಬಿಕ ದರ್ಶನಕ್ಕೆ ಬಂದವರು ಕೊಡಚಾದ್ರಿ ಮೂಲ ಮೂಕಾಂಬಿಕ ದೇವಿ ದಶ೯ನ ಮಾಡಿ ಅಲ್ಲಿರುವ ಬಾರಾಪಂಥ ಯೋಗಿಗಳ ಸಿದ್ಧ ಪೀಠ ಮತ್ತು ಅದರ ಎದುರಿನ ಪುರಾತನ ಕಬ್ಬಿಣದ ಸ್ಥಂಭ ಮತ್ತು ಶಿಖರದ ಮೇಲಿನ ಸವ೯ಜ್ಞ ಪೀಠ ನಂತರ ಶಂಕರಾಚಾಯ೯ರು ತಪಸ್ಸುಗೈದ ಚಿತ್ರ ಮೂಲದ ಗುಹೆಯಲ್ಲಿ ಧ್ಯಾನ ಮಾಡಿ ವಾಪಾಸ್ ಬರುತ್ತಾರೆ.    ಈಗ ಇಲ್ಲಿಗೆ ಸವ೯ ಋತು ರಸ್ತೆ ಇಲ್ಲವಾದರೂ ಸಾದಾರಣ ರಸ್ತೆ ಜೀಪುಗಳಲ್ಲಿ ಪ್ರಯಾಣಿಸಲು ಸಾಧ್ಯವಿದೆ ಆದರೆ ಈ ಮೂಲ ಮೂಕಂಬಿಕ ದೇವಸ್ಥಾನದ ಅಚ೯ಕರಾದ ಬಳೆಗಾರ ಜೋಗಿ ಸಮಾಜದ ಕುಟುಂಬಕ್ಕೆ 800 ವರ್ಷದ ಇತಿಹಾಸ ಇದೆ ಆಗೆಲ್ಲ ರಸ್ತೆ ಇಲ್ಲ ವಾಹನ ಇಲ್ಲ ಆದರೂ ಇವರು ನಿರಂತರ ಪೂಜೆ ನಡೆಸಿಕೊಂಡು ಬಂದವರು, ನಾರಾಯಣ ಜೋಗಿ ಮತ್ತು ಕಾವೇರಮ್ಮ ದಂಪತಿ, ಅವರ ಅಳಿಯ ರಾಮ ಜೋಗಿ ಮತ್ತು ಮಗಳು ಸುಶೀಲಮ್ಮ ದಂಪತಿ ಅವರ ಮಗ ನಾಗೇಂದ್ರ ಜೋಗಿ ತನಕ ಜನ ಗುರುತಿಸುತ್ತಾರೆ ಅದಕ್ಕೂ ಹಿಂದಿನ ಅಚ೯ಕ ಕುಟುಂಬ ಸ್ಥಳಿಯರಿಗೆ ನೆನಪಿನಲ್ಲಿ ಉಳಿದಿಲ್ಲ.  ಪ್ರತಿ 12 ವರ್ಷಕ್ಕೊಮ್ಮೆ ಬಾರಾಪಂತ ಯಾತ್ರೆ ನಾಸಿಕ್ ನಿಂದ ಕೊಡಚಾದ್ರಿಗ...