Blog number 2120. ದೇಶದ ಪುಣ್ಯಕ್ಷೇತ್ರ ಕಾಶಿಯ ಕಪಿಲದಾರದಲ್ಲಿ ನಮ್ಮ ಕೆಳದಿ ಅರಸರ ಶಿಲಾಶಾಸನ ನಡೆದಾಡುವ ಕಲ್ಲಾಗಿ ಬಳಸುತ್ತಿರುವುದನ್ನ ಸಾಗರದ ಯುವ ವಕೀಲ ಪ್ರವೀಣ್ ಕೆ.ವಿ. ಬಯಲು ಮಾಡಿದ್ದಾರೆ.
#ನಮ್ಮ_ಊರಿನ_ಜನಪರ_ಹೋರಾಟಗಾರರು_ವಕೀಲರು_ಆದ_ಕೆ_ವಿ_ಪ್ರವೀಣ್ #ಕಾಶಿ_ಯಾತ್ರೆ_ಎಲ್ಲರಲ್ಲೊಬ್ಬರಂತೆ_ಮಾಡಲಿಲ್ಲ #ಕಾಶಿ_ಕಪಿಲದಾರದ_ಕೊಳದಲ್ಲಿ_ಕೆಳದಿ_ಅರಸರ_ಶಿಲಾಶಾಸನ_ಕಾಲು_ದಾಟಿನ_ಕಲ್ಲು_ಆಗಿದ್ದನ್ನ #ದಾಖಲಿಸಿದ್ದಾರೆ_ಅದರ_ವಿಡಿಯೋ_ಮಾಡಿ_ಸಾಮಾಜಿಕ_ಜಾಲತಾಣದಲ್ಲಿ_ಪೋಸ್ಟ್_ಮಾಡಿದ್ದು_ವೈರಲ್_ಆಗಿದೆ #ಪುಣ್ಯಕ್ಷೇತ್ರ_ಕಾಶಿಯಲ್ಲಿ_ಕೆಳದಿ_ಅರಸರ_ಶಾಸನಕ್ಕೆ_ಈ_ಗತಿ_ಬಂದಿದ್ದಕ್ಕೆ_ಆಕ್ರೋಶ_ವೃಕ್ತವಾಗಿದೆ #ಇದ_ಸರಿ_ಮಾಡುವ_ತನಕ_ಪ್ರವೀಣ್_ವಿರಮಿಸುವುದಿಲ್ಲ. ನಮ್ಮ ಯಡೇಹಳ್ಳಿ ಗ್ರಾಮ ಪಂಚಾಯಿತಿಯ ಇರುವಕ್ಕಿ ಕೃಷಿ ವಿದ್ಯಾಲಯದ ಸಮೀಪದ ಕಲ್ಲುಕೊಪ್ಪದಲ್ಲಿ ಶರಾವತಿ ಮುಳುಗಡೆ ಸಂತ್ರಸ್ಥರಾಗಿ ಬಂದು ನೆಲೆಸಿದ ವೀರಭದ್ರಪ್ಪ ಗೌಡರನ್ನ ಜನ ಪ್ರೀತಿಯಿಂದ ಮರಿಗೌಡರೆಂದು ಕರೆಯುತ್ತಾರೆ ಅವರ ಎರಡನೆ ಪುತ್ರರೇ ವಕೀಲರಾದ ಕೆ.ವಿ.ಪ್ರವೀಣ್. ಆನಂದಪುರಂ ಸರ್ಕಾರಿ ಕನ್ನಡಶಾಲೆಗೆ ನಿತ್ಯ ಸುಮಾರು ನಾಲ್ಕು ಕಿಲೋ ಮೀಟರ್ ನಡೆದು ಬರುತ್ತಿದ್ದ ಬಾಲಕ ಪ್ರವೀಣ್ ನಿತ್ಯ ನನ್ನ ಮನೆ ಎದುರು ಕೀಟಲೆ ಮಾಡುತ್ತಾ ನಗುತ್ತಾ ಹೋಗುತ್ತಿದ್ದವರು ಸಂಜೆ ವಾಪಾಸು ಹೋಗುವಾಗಲೂ ಅದೇ ಎನರ್ಜಿ ಇರುತ್ತಿತ್ತು ಇವರಲ್ಲಿ. ಕಟ್ಟರ್ ಹಿಂದುತ್ವವಾದಿ, ಬಿಜೆಪಿ ಪಕ್ಷದ ಅಭಿಮಾನಿ ಸಂಘಟಕರಾಗಿದ್ದಾರೆ ಆದರೆ ಬಿಜೆಪಿ ಪಕ್ಷ ಇವರಿಗೆ ಸರಿಯಾದ ಸ್ಥಾನ ಮಾನ ಈವರೆಗೆ ನೀಡಿಲ್ಲ. ಜನಪರವಾಗಿ ನ್ಯಾಯಾಲಯದಲ್ಲಿ ಹಣ ಪಡೆಯದೇ ಅನೇಕ ಹೋರಾಟಗಾರರ ಕೇಸು ...