#ಇದು_ಕಾಲ್ಪನಿಕ_ಕಥೆ_ಅಲ್ಲ #ಸತ್ಯ_ಕಥೆ #ಕಪ್ಪೆ_ಮಳೆ #ಎಲ್ಲಾದರೂ_ಕೇಳಿದವರು_ನೋಡಿದವರು_ಇದ್ದಾರ? #ಮಳೆಯ_ಹನಿಗಳ_ಜೊತೆ_ದರೆಗೆ_ಉರುಳಿದ_ಕಪ್ಪೆಗಳು https://youtu.be/a1NHfpV1sSA ತುಂಬಾ ತಡವಾಗಿ ಮೊನ್ನೆ ಮಧ್ಯಾಹ್ನ ಮುಂಗಾರು ಮಳೆ ಪ್ರಾರಂಭವಾಯಿತು ಅಂತ ಸಂತಸದಲ್ಲಿದ್ದಾಗಲೆ ನಮ್ಮ ಕೆಲಸದ ಹೆಣ್ಣು ಮಗಳು ಜೋರಾಗಿ ಕೂಗುತ್ತಾ ಮಳೆಯ ಜೊತೆ ಕಪ್ಪೆಗಳು ಬೀಳುತ್ತಿದೆ ಅಂತ ಜೋರಾಗಿ ಭಯದಿಂದ ಕೂಗುತ್ತಾ ಓಡಿ ಆಫೀಸಿನ ಒಳ ಬಂದಾಗ ನನಗೂ ಆಶ್ವರ್ಯ. ಅವಳು ದೈಯ೯ವಂತೆ ಹೆಣ್ಣು ಮಗಳು ಹಾಗೆಲ್ಲ ಸುಳ್ಳು ಹೇಳುವವಳೂ ಅಲ್ಲ, ಅವಳು ಮರುದಿನ ಭಾನುವಾರ ನಮ್ಮ ಕಲ್ಯಾಣ ಮಂಟಪದಲ್ಲಿ ನಿಗದಿ ಆಗಿದ್ದ ಮದುವೆಗಾಗಿ ಸ್ವಚ್ಚತಾ ಕೆಲಸ ನಿರ್ವಹಣೆ ಮಾಡುತ್ತಿರುವಾಗ ಬೆಳಗಿನಿಂದ ನಿಲ್ಲದ ಮಳೆ ನೋಡಿ ಮಳೆಯಲ್ಲೇ ಕಲ್ಯಾಣ ಮಂಟಪದಿಂದ ಲಾಡ್ಜ್ ಆಫೀಸಿಗೆ ಬರುವಾಗ ಅವಳ ಮೇಲೆ ಮಳೆಯ ಹನಿಯ ಜೊತೆ ಕಪ್ಪೆಗಳು ಬಿಳುವುದು ನೋಡಿ ಭಯ ಪಟ್ಟಿದ್ದಾಳೆ. ಇವಳ ಮಾತು ಕೇಳಿದ ಬೇರೆ ಸಿಬ್ಬಂದಿಗಳು ಲಾಡ್ಜ್ ನ ಒಳಗಿನಿಂದಲೇ ಸ್ಲೈಡಿಂಗ್ ಕಿಟಕಿ ಸರಿಸಿ ಹೊರನೋಡಿ ಅವರೂ ಅಲ್ಲಿಂದಲೇ " ಹೌದು ಹೌದು ಮ೦ಜುಳಮ್ಮ ಹೇಳಿದ್ದು ಸತ್ಯ ..... ಮಳೆ ಜೊತೆ ಆಕಾಶದಿಂದ ಕಪ್ಪೆ ಬೀಳುತ್ತಿದೆ.... ನೋಡಿ ಬನ್ನಿ .... ಅಂದಾಗ ಎಲ್ಲಾ ಕೆಲಸದವರು ಪ್ರತ್ಯಕ್ಷ ಸಾಕ್ಷಿಗಳಾಗಿ ಸಾಕ್ಷಿಕರಿಸಿದರು. ನನಗೆ ಇದು ಆಶ್ಚಯ೯ ಮತ್ತು ದಿಗಿಲಿಗೆ ಕಾರಣವಾ...