Blog number 1624. ರಾಜ್ಯದ ಪ್ರಖ್ಯಾತ ಶೈಲಿ ಹ್ಯಾಂಡ್ ಲೂಂ ರೆಡಿಮೆಡ್ ಕ್ಲಾತ್ ಸಂಸ್ಥೆ ಯಶಸ್ಸಿನ ಸಾದಕರಾದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೆಗ್ಗೋಡಿನ ಸುಂದರ್ ಮತ್ತು ವಿಜಯ ಲಕ್ಷ್ಮಿ ದಂಪತಿಗಳು ನನ್ನ ಅತಿಥಿ.
#ಶಿವಮೊಗ್ಗ_ಜಿಲ್ಲೆಯ_ಹೆಗ್ಗೋಡಿನ_ಕೈಮಗ್ಗದ_ಸಿದ್ಧಉಡುಪುಗಳ_ಶೈಲಿ_ಸಂಸ್ಥೆ #ಈ_ಸಂಸ್ಥೆಯ_ಹಿಂದಿನ_ಶ್ರಮಜೀವಿ_ದಂಪತಿಗಳು #ಸುಂದರ್_ವಿಜಯಲಕ್ಷ್ಮಿ_ದಂಪತಿಗಳು. #ರಾಜ್ಯದಾದ್ಯಂತ_ಮಾರಾಟ_ಆಗುತ್ತಿರುವ_ಶೈಲಿ_ಬ್ರಾಂಡ್_ಕೈಮಗ್ಗದ_ಸಿದ್ದಉಡುಪು #ಯಶಸ್ವಿ_ಉದ್ದಿಮೆಯ_ದಂಪತಿಗಳು_ನನ್ನ_ಅತಿಥಿಗಳು. 1996ರಲ್ಲಿ ಹೆಗೋಡಿನಲ್ಲಿ ಖ್ಯಾತ ರಂಗ ನಿರ್ದೇಶಕ ಪ್ರಸನ್ನರು ಪ್ರಾರಂಭ ಮಾಡಿದ ಚರಕ ಸಂಸ್ಥೆಯಲ್ಲಿ ಈ ಸುಂದರ್ ಪ್ರಾರಂಭದಿಂದ ಇದ್ದವರು. ಆಗ ನಾನು ಚರಕ ಸಂಸ್ಥೆಯಲ್ಲಿ ನನ್ನ ಅಳತೆಯ ಶರ್ಟ್ ಮತ್ತು ಜುಬ್ಬಾಗಳು ನನಗೆ ಸರಿ ಹೊಂದುವುದಿಲ್ಲ ಎಂದು ಪ್ರಸನ್ನರಲ್ಲಿ ಹೇಳಿದಾಗ ಅವರು ನಮ್ಮಲ್ಲಿರುವ ಸುಂದರ್ ಎ೦ಬ ಯುವಕ ತುಂಬಾ ಪರಿಣಿತರಿದ್ದಾರೆ ಅವರನ್ನು ಪರಿಚಯಿಸುತ್ತೇನೆಂದು ಪರಿಚಯ ಮಾಡಿದ ಸುಂದರ್ ಹೆಸರಿಗೆ ತಕ್ಕ ಸುಂದರಾಂಗನೇ ಆಗಿದ್ದರು. ಸದಾ ಹಸನ್ಮುಖಿ, ಮಿತ ಭಾಷಿ ಹಾಗೂ ಶ್ರಮಜೀವಿ ಆದ ಸುಂದರ್ ಪ್ರಸನ್ನ ಒಮ್ಮೆ ಮ್ಯಾಗ್ಸೆಸ್ಸೆ ಪ್ರಶಸ್ತಿ ವಿಜೇತ ಕೆ.ವಿ.ಸುಬ್ಬಣ್ಣ ಚೆಕ್ ಕೇಸ್ ದಾಖಲಿಸಿದ್ದನ್ನು ವಿರೋದಿಸಿ ಉಪವಾಸ ಸತ್ಯಾಗ್ರಹ ಕೈಗೊಂಡಾಗ ಸಂದಾನಕ್ಕೆ ಮತ್ತಿಕೊಪ್ಪದ ಹರನಾಥ ರಾಯರ ಜೊತೆ ಹೋದಾಗ ಪ್ರಸನ್ನರ ಜೊತೆ ಈ ಸುಂದರ್ ಇದ್ದರು. ನಂತರ ಕೆಲ ವರ್ಷ ನನಗೆ ಬೇಕಾದ ಶರ್ಟ್ ಮತ್ತು ಜುಬ್ಬಾಕ್ಕೆ ನಾನು ಸುಂದರ್ ಅವರನ್ನು ಅವಲಂಬಿಸಿದ್ದೆ ಅದು 2013ರ ವರೆಗೆ ಹೆಗ್ಗೋಡಿನ ಮುಖ್ಯ ರಸ್ತೆಯ ಚರಕ ಮಳಿಗೆಯಲ್ಲೂ ಖರ...