#ಕಪಾಲ_ಭಾತಿ_ಎಂಬ_ಉತ್ಕೃಷ್ಟ_ಯೋಗ #ಇಡೀ_ದೇಹದ_ಅಂಗಾಗಗಳಿಗೆ_ಆರೋಗ್ಯ_ವೃದ್ಧಿ #ಸಿದ್ದ_ಸಮಾದಿ_ಯೋಗ_2008ರ_ತರಬೇತಿಯಲ್ಲಿ_ಕಲಿತದ್ದು. #ತರಬೇತಿ_ನೀಡಿದವರು_ದಿವಂಗತ_ಕುಮಾರ್_ಗುರೂಜಿ. #ಭಾರತೀಯ_ಪ್ರಾಚೀನ_ಯೋಗ_ವಿಧ್ಯೆ_ಇದು. #ಭಾರತೀಯ_ಆಯುಷ್_ಸಚಿವಾಲಯ_ಇದರ_ಬಗ್ಗೆ_ಹೆಚ್ಚಿನ_ಮಾಹಿತಿ_ಘೋಷಿಸಿದೆ. https://youtu.be/QqQHGz8xO8s?feature=shared ಕಪಾಲಭಾತಿ ಎಂಬ ವೇಗದ ಉಸಿರಾಟದ ವ್ಯಾಯಾಮ ಅಥವಾ ಪ್ರಾಣಯಾಮ ಯೋಗಿಗಳು ತಮ್ಮ ಮೆದಳನ್ನು ಸ್ವಚ್ಚಗೊಳಿಸಲು ಅಭ್ಯಾಸ ಮಾಡುತ್ತಾರೆ. ಕಪಾಲ ಅಂದರೆ ತಲೆ ಬುರುಡೆ ಭಾತಿ ಅಂದರೆ ಹೊಳೆಯುವುದು. ಕಮ್ಮಾರನ ತಿದಿಯಂತೆ ಉಸಿರಾಟದ ಈ ವ್ಯಾಯಾಮ ಸರಿಯಾದ ತರಬೇತುದಾರರಿಂದಲೇ ಕಲಿಯಬೇಕು ಮತ್ತು ಇದನ್ನು ಅಧಿಕ ರಕ್ತದೊತ್ತಡ ಇರುವವರು, ಮೂಗಿನಲ್ಲಿ ಧೀರ್ಘ ಕಾಲದ ರಕ್ತ ಸ್ರಾವ ಇದ್ದವರು, ಪಾರ್ಶ್ವವಾಯು, ಮೈಗ್ರೇನ್ ಮತ್ತು ಹೊಟ್ಟೆಯಲ್ಲಿ ಹುಣ್ಣು ಇದ್ದವರು ಇದನ್ನು ಮಾಡಬಾರದು. 2008ರಲ್ಲಿ ನಮ್ಮ ಕೃಷ್ಣ ಸರಸ ಕಲ್ಯಾಣಮಂಟಪದಲ್ಲಿ ಸಿದ್ಧ ಸಮಾದಿ ಯೋಗ (ಪ್ರಭಾಕರ ಗುರೂಜಿ ಸಂಸ್ಥೆ )ತರಬೇತಿ ಶಿಭಿರ ನಡೆದಾಗ ನಾನು ನನ್ನ ಪತ್ನಿ ಮಗಳು ಮಗ ಮತ್ತು ನನ್ನಣ್ಣನ ಕುಟುಂಬದ ಎಲ್ಲರೂ ಈ ಕ್ಲಾಸ್ ಗಳಿಗೆ ಸೇರಿ ತರಬೇತಿ ಪಡೆದಿದ್ದೆವು ಆಗ ತರಬೇತಿ ನೀಡಿದ ಸಿದ್ದ ಸಮಾದಿ ಯೋಗದ ಶಿಕ್ಷಕರು ಕುಮಾರ್ ಗುರೂಜಿ (ಇತ್ತೀಚಿಗೆ ಇಹ ಲೋಕ ತ್ಯಜಿಸಿದರು) ಅತ್ಯಂತ ಶಿಸ್...